ಈ ತಿಂಗಳಲ್ಲಿ 11 ದಿನ ಬ್ಯಾಂಕುಗಳಿಗೆ ರಜೆ !

0
1897

ಬೆಂಗಳೂರು, ಜು.04:  ಅಬ್ಬಾ ಒಂದು ಎರಡುದಿನವಲ್ಲ ಬರೋಬ್ಬರಿ 11 ದಿನ ಬ್ಯಾಂಕ್ ಗಳಿಗೆ ರಜೆ. ಎರಡನೇ, ನಾಲ್ಕನೇ ಶನಿವಾರ, ಹಬ್ಬ, ಮುಷ್ಕರ ಹೀಗೆ ಜುಲೈ ತಿಂಗಳಲ್ಲಿ ಹನ್ನೊಂದು ದಿನ ಬ್ಯಾಂಕುಗಳಿಗೆ ರಜೆ ಇರಲಿದೆ. ಪ್ರಮುಖವಾಗಿ ಸರಕಾರೀ ಸ್ವಾಮ್ಯದ ಬ್ಯಾಂಕುಗಳು, ರಜೆಯ ಜೊತೆಗೆ ಮುಷ್ಕರ ನಡೆಸಲು ಮುಂದಾಗಿರುವುದರಿಂದ ಬ್ಯಾಂಕಿಂಗ್ ವ್ಯವಹಾರದಲ್ಲಿ ವ್ಯತ್ಯಯವಾಗಲಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನೊಂದಿಗೆ (ಎಸ್ಬಿಐ) ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಐದು ಸಹವರ್ತಿ ಬ್ಯಾಂಕಿನ ಸುಮಾರು 45 ಸಾವಿರಕ್ಕೂ ಹೆಚ್ಚಿನ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ 5ಲಕ್ಷ ಬ್ಯಾಂಕ್ ಸಿಬ್ಬಂದಿ ಸದಸ್ಯತ್ವ ಹೊಂದಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮತ್ತು ಒಂದು ಲಕ್ಷ ನೌಕರರ ಸದಸ್ಯತ್ವ ಪಡೆದಿರುವ ಅಖಿಲ ಭಾರತ ಬ್ಯಾಂಕ್ ಸ್ಟೇ ಅಧಿಕಾರಿಗಳ ಸಂಘಗಳೂ ದೇಶದಾದ್ಯಂತ ಮುಷ್ಕರ ನಡೆಸಲಿವೆ.

ಎಸ್ಬಿಐ ಜೊತೆ ವಿಲೀನಗೊಳ್ಳುತ್ತಿರುವ ಐದು ಬ್ಯಾಂಕುಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಮೈಸೂರು ಬ್ಯಾಂಕ್), ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಬಿಕನೀರ್ ಅಂಡ್ ಜೈಪುರ್. ರಜೆಗಳ ವಿವರ : 1. ಜುಲೈ 3 – ಭಾನುವಾರ2. ಜುಲೈ 6 – ರಂಜಾನ್ (ಬುಧವಾರ) 3. ಜುಲೈ 9 – ಎರಡನೇ ಶನಿವಾರ 4. ಜುಲೈ 10 – ಭಾನುವಾರ 5. ಜುಲೈ 12 – ಎಸ್ಬಿಐ, ಸಹವರ್ತಿ ಬ್ಯಾಂಕ್ ಒಕ್ಕೂಟದ ಪ್ರತಿಭಟನೆ (ಮಂಗಳವಾರ) 6. ಜುಲೈ 13 – ಬ್ಯಾಂಕ್ ಮುಷ್ಕರ (ಬುಧವಾರ) 7. ಜುಲೈ 17 – ಭಾನುವಾರ 8. ಜುಲೈ 23 – ನಾಲ್ಕನೇ ಶನಿವಾರ 9. ಜುಲೈ 24 – ಭಾನುವಾರ 10. ಜುಲೈ 29 – ಯುನೈಟೆಡ್ ಬ್ಯಾಂಕ್ ಫೋರಂನಿಂದ ಪ್ರತಿಭಟನೆ (ಶುಕ್ರವಾರ) 11. ಜುಲೈ 31 – ಭಾನುವಾರ