ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮದುವೆ ಡೇಟ್ ಫಿಕ್ಸ್ ಆಯ್ತು!

0
1474

ಮುಂಬಯಿ: ಸದಾ ಸುದ್ದಿಯಾಗುವ ವಿಚಾರಗಳಲ್ಲಿ ಬಾಲಿವುಡ್ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ಮದುವೆ ಕೂಡ ಒಂದು. ದಬಾಂಗ್ ಬಾಯ್  ಆಗ ಮದುವೆಯಾಗ್ತಾರಂತೆ, ಈಗ ಮದುವೆಯಾಗ್ತಾರಂತೆ ಎಂಬ ಸುದ್ದಿ ಬರ್ತಾನೆ ಇದೆ. ಅವರನ್ನು ಬಿಟ್ಟು, ಇವರನ್ನು ಬಿಟ್ಟು ಮತ್ತ್ಯಾರು ಸಲ್ಮಾನ್ ಮದುವೆಯಾಗುವುದು ಎಂಬ ಪ್ರಶ್ನೆಯೂ ಆಗಾಗ ಕಾಡುತ್ತಿರುತ್ತದೆ.

ಆದ್ರೀಗ ಒಂಟಿ ಹುಡುಗ ಸಲ್ಮಾನ್ ಜಂಟಿಯಾಗುವ ಕಾಲ ಬಂದಿದೆ. ಸಲ್ಮಾನ್ ಮದುವೆಗೆ ಅವರ ಮನೆಯವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಸಲ್ಮಾನ್ ರೊಮೇನಿಯಾ ಗೆಳತಿ ಲುಲಿಯಾ ವೆಂಚರ್ ಜೊತೆ ಈ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆಗೆ ದಿನಾಂಕ ಕೂಡ ಫಿಕ್ಸ್ ಆಗಿದೆ. ಸಲ್ಮಾನ್ ಆತ್ಮೀಯ ಸ್ನೇಹಿತರೊಬ್ಬರ ಪ್ರಕಾರ ಸಲ್ಮಾನ್ ಖಾನ್ ಡಿಸೆಂಬರ್ 27 ರಂದು ಮದುವೆಯಾಗಲಿದ್ದಾರೆ. ಅಂದು ಸಲ್ಮಾನ್ 51ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹಿಂದಿನ ವಾರ ಪ್ರೀತಿ ಝಿಂಟಾ ರಿಸೆಪ್ಷನ್ ನಲ್ಲಿ ಸಲ್ಮಾನ್, ಲುಲಿಯಾ ಜೊತೆ ಕಾಣಿಸಿಕೊಂಡಿದ್ದರು .