ಭಜರಂಗಿ ‘ಬಾಂಗ್ಲ’ಜಾನ್… ಆರು ವರ್ಷದ ಹಿಂದೆ ಬಾಂಗ್ಲಾದೇಶ ಸೇರಿದ ಬಾಲಕ…

0
1780

ಆರು ವರ್ಷಗಳ ಹಿಂದೆ ಮನೆಯ ಪಕ್ಕದಿಂದಲೇ ಅಪಹರಣಗೊಂಡಿದ್ದ ಪೂರ್ವ ದೆಹಲಿಯ ಸೋನು (12) ಎಂಬ ಬಾಲಕನನ್ನು ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶದಿಂದಾಗಿ ಪಾಲಕರು ಮರಳಿ ಪಡೆದಿದ್ದಾರೆ.

ಅಪಹರಣದ ನಂತರ ಅಪಹರಣಕಾರರು ಬಾಲಕನನ್ನು ಬಾಂಗ್ಲಾದೇಶಕ್ಕೆ ಸಾಗಿಸಿದ್ದರು, ನಂತರ ಅಲ್ಲಿಂದ ತಪ್ಪಿಸಿಕೊಂಡ ಹುಡುಗ ಬಾಂಗ್ಲಾದೇಶದ ಜೆಸ್ಸೋರೆಯ ಮಕ್ಕಳ ಪುನರ್ವಸತಿ ಕೇಂದ್ರ ಸೇರಿದ್ದಾನೆ, ಈ ಬಾಲಕ ಭಾರತದಿಂದ ಬಂದಿದಾನೆ ಎಂದು ತಿಳಿದ ಕೂಡಲೇ ಅಲ್ಲಿನ ಅಧಿಕಾರಿಗಳು ಸೋನುವನ್ನು ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿಸಿದ್ದರು.

ಈಚೆಗೆ ಸೋನು ಪೋಷಕರನ್ನು ಸಂಪರ್ಕಿಸಿದ ವೆಕ್ತಿಯೊಬ್ಬ ಸೋನು ಬಾಂಗ್ಲಾದೇಶದ ಲ್ಲಿದ್ದಾನೆ ಎಂಬ ಮಾಹಿತಿ ನೀಡಿದ್ದಾನೆ.ಎಚ್ಚೆತ್ತುಕೊಂಡ ಪಾಲಕರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೆರವು ಕೋರಿ ಅರ್ಜಿ ಸಲ್ಲಿಸಿದ್ದಾರೆ, ಸಚಿವೆ ಸುಷ್ಮಾ ಸ್ವರಾಜ್ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು,
ಇಲಾಖೆ ಸೋನು ಮತ್ತು ಆತನ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಿ ಹೊಂದಿಕೆಯ ಬಗ್ಗೆ ಖಚಿತಪಡಿಸಿಕೊಂಡ ನಂತರ ಪೋಷಕರ ಮಡಿಲಿಗೆ ಮಗುವನ್ನು ಹಿಂತಿರುಗಿಸಿದ್ದಾರೆ…

ಈ ಹಿಂದೆ ಕೂಡ ಇದೆ ರೀತಿ ಗೀತಾ ಮತ್ತು ಗುರ್ಪ್ರೀತ್ ಎಂಬುವರನ್ನು ಭಾರತಕ್ಕೆ ಕರೆತರಲಾಗಿತ್ತು.

ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಿದ ಸೋನು ತನ್ನನ್ನು ಮರಳಿ ಮನೆಗೆ ಕರೆತರಲು ಸಹಕರಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾನೆ.