ಭಾರತಕ್ಕೆ ಕಂಚಿನ ಪದಕ ತಂದಿತ್ತ ಈ ಸಾಕ್ಷಿ ಯಾರು…? ತಿಳಿದುಕೊಳ್ಳಿ

0
1521

1992 ಸೆಪ್ಟೆಂಬರ್ 3ನೇ ತಾರೀಖು ಸಾಕ್ಷಿ ಮಲಿಕ್ ಎಂಬ ರತ್ನ ಹರಿಯಾಣದಲ್ಲಿ ಜನಿಸಿತು ಎಂದರೆ ತಪ್ಪಾಗಲಾರದು… ಈಕೆಯ ತಂದೆಯ ಹೆಸರು ಸುದೇಶ್, ತಾಯಿ ಸುಖ್ ಬೀರ್. 23 ವರ್ಷದ ವಯಸ್ಸಿನ ಈಕೆ ಚಿಕ್ಕಂದಿನಿಂದ ಮಾತ್ ಎತ್ತಿದರೆ ಗಂಡು ಮಕ್ಕಳ ಜೊತೆ ಜಗಳಕ್ಕೆ ನಿಲ್ಲುತಿದ್ದ ಸಾಕ್ಷಿ, ಹುಟ್ಟಿನಿಂದಲೇ ಪ್ರತಿಭಾವಂತೆ. ಈಕೆಯ ಕುಸ್ತಿ ಕೌಶಲ್ಯ ಕಂಡ ಮೇಸ್ಟ್ರು ಕುಸ್ತಿ ಕಲಿಯಲು ಪ್ರೇರೇಪಿಸಿದರು…

13876608_835862723182608_6934032131432193731_n

ಅಲ್ಲಿಂದ ಶುರುವಾಯಿತು ನೋಡಿ ಸಾಕ್ಷಿಯ ಪ್ರತಿಭೆಯ ಅನಾವರಣ… ತನ್ನ 12 ನೇ ವಯಸ್ಸಿಗೆ ಮೊಕ್ರ ಎಂಬ ಹಳ್ಳಿಯಲ್ಲಿ ಈಶ್ವರ್ ದಹಿಯ ಅವರ ಮಾರ್ಗದರ್ಶನದಲ್ಲಿ ಕುಸ್ತಿ ಕಲಿಯಲು ಪ್ರಾರಂಭಿಸಿದ ಸಾಕ್ಷಿಗೆ ಮೊದಲು ಸಿಕ್ಕಿದು ಪ್ರತಿರೋಧ… ಹೌದು, ಈ ರೀತಿಯ ಕ್ರೀಡೆ ಕೇವಲ ‘ಗಂಡುಮಕ್ಕಳಿಗೆ ಮಾತ್ರ’ ನೀನು ಕಲಿಯಬಾರದು ಎಂದು ಕೆಲವರು ಧಮ್ಕಿ ಹಾಕಿದ್ದು ಉಂಟು…

2010 ರಲ್ಲಿ ಅಂದರೆ 18 ನೇ ವಯಸ್ಸಿನಲ್ಲೇ ಜೂನಿಯರ್-ಲೆವೆಲ್ ವರ್ಲ್ಡ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 59 ಕೆಜಿ ವಿಭಾಗದಲ್ಲಿ ಗೆಲುವಿನ ರುಚಿ ಕಂಡರು ಸಾಕ್ಷಿ, ಈ ಜಯ ಆಕೆಗೆ ಅಷ್ಟೇನು ಜನಪ್ರಿಯತೆ ತಂದುಕೊಡಲಿಲ್ಲ.

13938421_1766108650268143_8841748149671305500_n

2014 ರಲ್ಲಿ Dave Schultz ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯ 60 ಕೆಜಿ ವಿಭಾಗದಲ್ಲಿ ಬಂಗಾರ ಮುಡಿಗೇರಿಸಿದ ಸಾಕ್ಷಿ ಎಲ್ಲರ ಮೆಚ್ಚಿನ ಮನೆ ಮಗಳಾದಳು. ಯಶಸ್ಸು ಸಿಕ್ಕೊಡನೆ ಜನಪ್ರಿಯತೆ ಹರಸಿಕೊಂಡು ಬಂದಿತ್ತು ಕೂಡ.

ಆದರೆ 2014ರ ಆಗಸ್ಟ್ ನಲ್ಲಿ glasgowದಲ್ಲಿ ನೆಡೆದ common wealth games ಮೂಲಕ ವೃತ್ತಿಪರ ಕ್ರೀಡೆಗೆ ಜಿಗಿದ ಸಾಕ್ಷಿ, ಅಲ್ಲೂ ಕೂಡ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅದೇ ವರ್ಷ ಸೆಪ್ಟೆಂಬರ್ ನಲ್ಲಿ ತಾಷ್ಕೆಂಟ್ ನಲ್ಲಿ ನೆಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ quarter finalನಲ್ಲಿ ಸ್ವಲ್ಪದರಲ್ಲೇ ಪದಕ ತಪ್ಪಿಸಿಡಿಕೊಂಡರು ಸಾಕ್ಷಿ ಮಲಿಕ್.

2015 ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಸೀನಿಯರ್ ಏಶಿಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

13909224_1768220493390292_5911760856805579230_o

ಗೆದ್ದ ಖುಷಿಯಲ್ಲಿ “ನನ್ನ ಮುಂದಿನ ಗುರಿ ರಿಯೋ ಒಲಂಪಿಕ್ಸ್” ಎಂದು ಹೇಳಿದ್ದ ಸಾಕ್ಷಿ ತನ್ನ ಮಾತಿಗೆ ತಕ್ಕಂತೆ ಪದಕ ಗೆದ್ದು ಈ ಒಲಂಪಿಕ್ಸ್ ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಸ್ಪರ್ದಾಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಎಷ್ಟೋ ಜನಕ್ಕೆ ಗೊತ್ತಿಲ್ಲ ಈ ಗೆಲುವಿನ ಹಿಂದೆ ಆಕೆಯ ಹಾಗು ಆಕೆಯ ಕುಟುಂಬದ ಮತ್ತು ತರಬೇತುದಾರರ 12 ವರ್ಷದ ಪರಿಶ್ರಮವಿದೆ ಎಂದು…. ಪರಿಶ್ರಮಕ್ಕೆ ತಕ್ಕ ಪ್ರತಿಫಲವೆಂಬಂತೆ ಆಕೆಯ ಕಷ್ಟಗಳೇ ಇಂದು ಸಾಕ್ಷಿಗೆ ಹೂವಿನ ಮಾಲೆಯಾಗಿವೆ. ಎಲ್ಲರಂತೆ ಮದುವೆಯೋ ಅಥವಾ ಚಿಕ್ಕ ಕೆಲಸ ಗಿಟ್ಟಿಸಿ ತಾನಾಯಿತು ತನ್ನ ಕೆಲಸ ಆಯಿತು ಎಂದು ಸುಮ್ಮನಿರಬಹುದಿತ್ತು ಅಲ್ಲವೇ…? ಆದರೆ ಆಕೆ ಹಾಗೆ ಮಾಡಲಿಲ್ಲ…

“ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆ ಮಾತು ಈ ಸಂದರ್ಭದಲ್ಲಿ ನೆನೆಪಾಗುತ್ತಿದೆ.

-ಗಿರೀಶ್ ಗೌಡ

modi tweet :

Vidhana_Soudha_sunset

 

sachin tweet :

13235436_1742370575975284_7833667695590102334_o