ಭಾರತದ 100 ವರ್ಷದ ಈ ಅಜ್ಜಿ ಪಡೆದಳು ಚಿನ್ನದ ಪದಕ!

0
1343

ವ್ಯಾಂಕೊವರ್: ಅಮೆರಿಕ ಮಾಸ್ಟರ್ಸ್ ಟೂರ್ನಿಯಲ್ಲಿ ಈಗಾಗಲೇ ಶಾಟ್ಪುಟ್ ಹಾಗೂ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಕೌರ್ 100 ಮೀ. ಓಟದಲ್ಲೂ ಚಿನ್ನ ಜಯಿಸಿ ಹ್ಯಾಟ್ರಿಕ್ ಸಾಧಿಸಿದರು. ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದರು.

 ಅಮೆರಿಕದ ಮಾಸ್ಟರ್ಸ್ ಗೇಮ್ಸ್ನ 100 ಮೀ. ಓಟದಲ್ಲಿ ಭಾರತದ ಶತಾಯುಷಿ ಮಾನ್ ಕೌರ್ ಚಿನ್ನದ ಪದಕವನ್ನು ಜಯಿಸಿ ಗಮನ ಸೆಳೆದಿದ್ದಾರೆ. 100 ವರ್ಷದ ವಯೋಮಿತಿ ವಿಭಾಗದಲ್ಲಿ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದ ಕೌರ್ ಓಟವನ್ನು ಒಂದು ನಿಮಿಷ ಹಾಗೂ 21 ಸೆಕೆಂಡ್ನಲ್ಲಿ ತಲುಪಿದರು.

bbbb

 100 ವಯೋಮಿತಿಯ ಪುರುಷರ ವಿಭಾಗದಲ್ಲಿ ಭಾರತ ಮೂಲದ ಬ್ರಿಟಿಷ್ ಕೊಲಂಬಿಯಾದ ನಿಹಾಲ್ ಗಿಲ್ ಚಿನ್ನದಪದಕವನ್ನು ಜಯಿಸಿದ್ದಾರೆ.

ಶುದ್ಧ ಸಸ್ಯಾಹಾರಿಯಾಗಿರುವ ಗಿಲ್, ಆಲ್ಕೋಹಾಲ್ ಸೇವಿಸುವುದಿಲ್ಲ. ಗಿಲ್ ಹಾಗೂ ಕೌರ್ 100 ವರ್ಷದ ವಯೋಮಿತಿಯಲ್ಲಿ ಕೂಟದಲ್ಲಿ ಭಾಗವಹಿಸಿದ್ದ ಇಬ್ಬರು ಅಥ್ಲೀಟ್ ಆಗಿದ್ದಾರೆ.

ಚಂಡೀಗಢದ ಕೌರ್ ಫಿನಿಶ್ ಲೈನ್ ತಲುಪಿದಾಗ 70 ಹಾಗೂ 80 ಪ್ರಾಯದ ಸ್ಪರ್ಧಿಗಳು ಹುರಿದುಂಬಿಸಿದರು. ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಕೌರ್ ಟೂರ್ನಿಯಲ್ಲಿ ಭಾಗವಹಿಸಿದ್ದ 30ಕ್ಕೂ ಅಧಿಕ ಅಥ್ಲೀಟ್ಗಳಿಗೆ ಸ್ಫೂರ್ತಿಯ ಚಿಲುಮೆಯಾದರು.

ಮಾಸ್ಟರ್ಸ್ ಗೇಮ್ಸ್ನಲ್ಲಿ ಭಾಗವಹಿಸಿದ್ದ ಕೌರ್ ಪುತ್ರ ಗುರುದೇವ್ ಸಿಂಗ್, ”100 ವಯೋಮಿತಿ ವಿಭಾಗದಲ್ಲಿ ನನ್ನ ತಾಯಿ ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಇಳಿ ವಯಸ್ಸಿನಲ್ಲೂ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅವರು ವೃದ್ದೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಒಳ್ಳೆಯ ಆಹಾರ ಸೇವಿಸಿ ಪ್ರತಿದಿನ ಓಡಬೇಕೆಂಬ ಬಗ್ಗೆ ಅವರು ಸಂದೇಶ ನೀಡುತ್ತಿದ್ದಾರೆ. ನಾನು ಅವರಿಗೆ 93ನೆ ವರ್ಷದಲ್ಲಿ ಓಟದಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದ್ದೆ. ಅವರಿಗೆ ಮಂಡಿ, ಹೃದಯ ಸಹಿತ ಯಾವುದೇ ಸಮಸ್ಯೆಯಿಲ್ಲದ ಕಾರಣ ಓಟದಲ್ಲಿ ಭಾಗವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ವಿಶ್ವದೆಲ್ಲೆಡೆ ನಡೆದ ಮಾಸ್ಟರ್ಸ್ ಗೇಮ್ಸ್ನಲ್ಲಿ ಮಾನ್ ಕೌರ್ 20ಕ್ಕೂ ಅಧಿಕ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಚಂಡೀಗಢದ ತನ್ನ ಮನೆಯಲ್ಲಿ ಅವರು ಪ್ರತಿದಿನ ಸಂಜೆ ಓಟದ ಅಭ್ಯಾಸ ನಡೆಸುತ್ತಾರೆ ಎಂದು ಸಿಂಗ್ ತಿಳಿಸಿದ್ದಾರೆ. 1984ರಲ್ಲಿ ಮಹಿಳೆಯರ 400 ಮೀ. ರಿಲೇಯಲ್ಲಿ ಕೆನಡಾದ ಪರ ಬೆಳ್ಳಿ ಪದಕ ಜಯಿಸಿದ್ದ ಚಾರ್ಮೈನ್ ಕ್ರೂಕ್ಸ್ ಮಾಸ್ಟರ್ಸ್ ಗೇಮ್ಸ್ನ ರಾಯಭಾರಿ ಆಗಿದ್ದು, ಅವರು ಕೌರ್ ಸಾಹಸವನ್ನು ಶ್ಲಾಘಿಸಿದ್ದಾರೆ.

”ಅವರು ಕಿರಿಯರಿಂದ ಹಿರಿಯರ ತನಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರದ್ದು ಡೈನಾಮಿಕ್ ಸ್ಪಿರಿಟ್ ಎಂದು ಕ್ರೂಕ್ಸ್ ಬಣ್ಣಿಸಿದ್ದಾರೆ.

ಮಾಸ್ಟರ್ಸ್ ಗೇಮ್ಸ್ನಲ್ಲಿ ಭಾಗವಹಿಸಲು ಸರಾಸರಿ 49 ವರ್ಷ ಪ್ರಾಯವಾಗಿರಬೇಕು. ಕೌರ್ ಹೊರತುಪಡಿಸಿದರೆ 101 ಪ್ರಾಯದ ಬ್ರಿಟಿಷ್ ಕೊಲಂಬಿಯದ ನಿಹಾಲ್ ಗಿಲ್ ಗೇಮ್ಸ್ನಲ್ಲಿ ಭಾಗವಹಿಸಿದ್ದ ಹಿರಿಯ ಅಥ್ಲೀಟ್ ಆಗಿದ್ದಾರೆ.

ಅಮೆರಿಕ ಮಾಸ್ಟರ್ಸ್ ಟೂರ್ನಿಯಲ್ಲಿ ಈಗಾಗಲೇ ಶಾಟ್ಪುಟ್ ಹಾಗೂ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಕೌರ್ 100 ಮೀ. ಓಟದಲ್ಲೂ ಚಿನ್ನ ಜಯಿಸಿ ಹ್ಯಾಟ್ರಿಕ್ ಸಾಧಿಸಿದರು. ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದರು.

ಮನೆಯ ಊಟದ ಸೇವನೆ ಹಾಗೂ ಕರಿದ ಆಹಾರದಿಂದ ದೂರ ಉಳಿದಿರುವುದು ನನ್ನ ತಾಯಿಯ ಆರೋಗ್ಯದ ಗುಟ್ಟು ಎಂದು ಕೌರ್ ಪುತ್ರ ಗುರುದೇವ್ ಸಿಂಗ್ ಹೇಳಿದ್ದಾರೆ.

ಗುರಿ ಮುಟ್ಟಿದ ಕೌರ್ ಸಂತೋಷಗೊಂಡಿದ್ದರು. ಎರಡೂ ಕೈ ಬೀಸಿ ನೆರೆದಿದ್ದವರಿಗೆ ಅಭಿನಂದನೆ ಸಲ್ಲಿಸಿದ್ರು. ಜಾವಲಿನ್ ಥ್ರೋ ಹಾಗೂ ಶಾಟ್ ಪುಟ್ ನಲ್ಲಿ ಕೂಡ ಕೌರ್ ಪದಕ ಗೆದ್ದಿದ್ದಾರೆ. 30 ವರ್ಷ ಮೇಲ್ಪಟ್ಟವರಿಗೆ ಈ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಈ ಬಾರಿ 49 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಲಾಗಿತ್ತು. ಮನ್ ಕೌರ್ ಗಿಂತ ಒಂದು ವರ್ಷ ಹಿರಿಯರಾದ ನಿಹಾಲ್ ಗಿಲ್ (101) ಕೂಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.