ಭಾರತ ವಿಶ್ವಕಪ್ ಕಬಡ್ಡಿ ಚಾಂಪಿಯನ್

0
592

ಜಿದ್ದಾ ಜಿದ್ದಿನ ಕಾದಾಟದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ ಭಾರತ ಪುರುಷರ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ, ಆರನೇ ಬಾರಿ ವಿಶ್ವಕಪ್ ಕಬಡ್ಡಿ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿತು. ಎರಡನೇ ಅವಧಿಯ ಆಟದಲ್ಲಿ ಮನಮೋಹಕ ಆಟವನ್ನು ಆಡಿದ ಸ್ಟಾರ್ ಆಟಗಾರ ಅಜಯ್ ಠಾಕೂರ್ ಅವರ ಆಟದ ನೆರವಿನಿಂದ, ಅನುಪ್ ಪಡೆ ಪ್ರಶಸ್ತಿ ಸುತ್ತಿನ ಕಾದಾಟವನ್ನು ಗೆದ್ದು ಬೀಗಿತು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 38-29 ಇರಾನ್ ತಂಡದ ಸದ್ದಡಗಿಸಿತು. ಟಾಸ್ ಗೆದ್ದ ಮೀರಜ್ ಖಾನ್ ಪಡೆ ಅಂಕಣವನ್ನು ಆಯ್ಕೆ ಮಾಡಿಕೊಂಡರು. ದಾಳಿಯ ಅವಕಾಶವನ್ನು ಪಡೆದ ಭಾರತ ಅಂಕ ಗಳಿಸಲಿಲ್ಲ. ಅನುಪ್ ಪಡೆಯ ಯೋಜನೆಯನ್ನು ಆಡಿದ ಇರಾನ್ ಪಡೆ ಅಂಕಗಳಿಸಿ ಶಾಕ್ ನೀಡಿದರು. ೫ನೇ ನಿಮಿಷದಲ್ಲಿ ನಡೆದ ಸಮಬಲದ ಆಟದಲ್ಲಿ ಇರಾನ್ ಅಂಕಗಳಿಸಿ ಮುನ್ನಡೆಯನ್ನು ಕಾಯ್ದುಕೊಂಡಿತು. ಈ ಅವಧಿಯಲ್ಲಿ ಭಾರತ ಮಾಡಿದ ಕೆಲ ತಪ್ಪಿನಿಂದ ಎದುರಾಳಿಗಳು ಅಂಕಗಳನ್ನು ಗಳಿಸಿದರು. ಈ ಅವಧಿಯ ೧೮ನೇ ನಿಮಿಷದಲ್ಲಿ ಭಾರತ ಆಲೌಟ್‌ಗೆ ಗುರಿ ಆಯಿತು.

ಎರಡನೇ ಅವಧಿಯಲ್ಲಿ ಪುಟಿದೆದ್ದ ಭಾರತ ತಂಡ ಅಭಿಮಾನಿಗಳು ಹುಚ್ಚೆದ್ದು ಕಣಿಯುವಂತೆ ಮಾಡಿತು. ಅಜಯ್ ಠಾಕೂರ್ ಅವರು ಈ ಅವಧಿಯಲ್ಲಿ ತಮ್ಮ ಅನುಭವಾದ ಧಾರೆ ಎರೆದು ತಂಡಕ್ಕೆ ಆಧಾರವಾದರು. ೩೦ನೇ ನಿಮಿಷ ಹಾಗೂ ೩೮ನೇ ನಿಮಿಷದಲ್ಲಿ ಇರಾನ್ ತಂಡ ಆಲೌಟ್ ಆಯಿತು. ಇದರ ಸಂಪೂರ್ಣ ಶ್ರೇಯ ಅಜಯ್ ಅವರ ಪಾಲಾಯಿತು.