ಭಿಕ್ಷುಕನಂತೆ ಮಾರುವೇಷ ಧರಿಸಿ 128 ರೂ. ಸಂಗ್ರಹಿಸಿದ ನಟ ಶರಣ್

0
3085
ಇತ್ತೀಚಿಗಷ್ಟೇ ಮುಂಬೈನ ಬೀದಿಗಳಲ್ಲಿ ಬಾಲಿವುಡ್ ಗಾಯಕ ಸೋನು ನಿಗಂ ಭಿಕ್ಷುಕನ ವೇಷಧಾರಿಯಾಗಿ ಹಾಡುಗಳನ್ನು ಹಾಡಿ ಗಮನ ಸಳೆದಿದ್ದರು. ಅವರು ಹಾಡುವಾಗ ಯಾರೊಬ್ಬರು ಅವರನ್ನು ಗುರುತಿಸರಿರಲಿಲ್ಲ. ಅದೇ ರೀತಿಯ ಗೆಟಪ್’ನಲ್ಲಿ  ನಟರಾಜ ಸರ್ವಿಸ್ ಚಿತ್ರಕ್ಕಾಗಿ ನಟ ಶರಣ್ ವೇಷ ಮರೆಸಿಕೊಂಡು ಬೆಂಗಳೂರಿನ ಗಾಂಧಿ ಬಜಾರಲ್ಲಿ ಕೂತು ಚಿತ್ರದ ಪ್ರಮುಖ ಗೀತೆಯನ್ನು ಹಾಡಿದ್ದಾರೆ.ಈ ಗೆಟಪ್‌‌ನಲ್ಲಿರುವುದು ಶರಣ್ ಎಂದು ಸಾಮಾನ್ಯ ಜನರಿಗೆ ಗೊತ್ತಾಗಿಲ್ಲ. ಆತ ಭಿಕ್ಷುಕ ಎಂದು ತಿಳಿದು ಹಲವರು ಹಣ ಕೂಡ ಹಾಕಿದ್ದಾರೆ. ಇದನ್ನು ಶರಣ್‌‌ ಸಖತ್ ಎಂಜಾಯ್ ಕೂಡ ಮಾಡಿದರಂತೆ.
ಎನ್ ಎಸ್ ರಾಜ್ ಕುಮಾರ್ ನಿರ್ಮಾಣದ  ಚಿತ್ರದಲ್ಲಿ ಶರಣ್‌‌ಗೆ ಮಯೂರಿ ನಾಯಕಿಯಾಗಿದ್ದು, ವಿಭಿನ್ನ ಕಥಾ ಹಂದರವನ್ನು ಚಿತ್ರ ಹೊಂದಿದೆ. ಹೀಗಾಗಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.