ಮಂಗನ ಕೈಯ್ಯಲ್ಲಿ ಸ್ಮಾರ್ಟ್‍ಫೋನ್

0
3991

“ಮಂಗನ ಕೈಯ್ಯಲ್ಲಿ ಮಾಣಿಕ್ಯ” ಅನ್ನೋದು ಹಳೇ ಗಾದೆ. ಆದ್ರೆ ಈಗ “ಮಂಗನ ಕೈಯ್ಯಲ್ಲಿ ಸ್ಮಾರ್ಟ್‍ಫೋನ್” ಇದು ಹೊಸ ಗಾದೆ.

ಈಗ ಮೊಬೈಲ್ ಯುಗ. ಇಪ್ಪತ್ತೊಂದನೆಯ ಶತಮಾನದ ಹೊತ್ತಿಗೆ ಕಂಪ್ಯೂಟರ್ ಮತ್ತದರ ಬಳಕೆಯ ರೂಪುರೇಷೆಗಳು ದಿನದಿನಕ್ಕೂ ಬದಲಾಗುವ ಹಂತಕ್ಕೆ ಬಂದಿವೆ. ಚಿಕ್ಕ ಮಕ್ಕಳಿಂದ ವಯೋವೃದ್ಧರ ಕೈಯಲ್ಲೂ ಸ್ಮಾರ್ಟ್‍ಫೋನ್ ಇರೋದು common. ಆದ್ರೆ ಟರ್ಕಿಯಲ್ಲಿ ಒಂದು ಮಂಗ ಫೋನ್ ಆಪರೇಟ್ ಮಾಡುತ್ತಿರುವ ವಿಡಿಯೋ ನೋಡಿ..

ಟರ್ಕಿಯಲ್ಲಿ ಸಾಕುಕೋತಿಯೊಂದು ತನ್ನ ಮಡಿಲಿನಲ್ಲಿ ತನ್ನ ಮರಿಯನ್ನು ಕೂರಿಸಿಕೊಂಡು ಸ್ಮಾರ್ಟ್ ಫೋನ್ ಆಪರೇಟ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಂಡು ಮಂಗ ತನ್ನ ಒಂದು ಕೈಯಲ್ಲಿ ಮಗುವನ್ನು ಹಿಡಿದು, ಮತ್ತೊಂದು ಕೈಯಲ್ಲಿ ಸ್ಮಾರ್ಟ ಫೋನ್ ಹಿಡಿದು ಸ್ಕ್ರೀನನ್ನು ಈಸಿಯಾಗಿ ಸ್ವೈಪ್ ಮಾಡುತ್ತಿರೋ ಈ ದೃಶ್ಯ ನೋಡುಗರನ್ನು ಆಶ್ಚರ್ಯಪಡಿಸಿದೆ.

ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು ಅನ್ನೋದು ಗಾದೆ ಆದರೆ ಈ ಮಂಗ ಮಾತ್ರ ಸ್ಮಾರ್ಟ್‍ಫೋನ್ ಆಪರೇಟ್ ಮಾಡಿ, ಇಂಟರ್ನೆಟ್ ಸ್ಟಾರ್ ಆಗಿದೆ.