ಮಗುವಿನಲೋಂದು ಮಗು ಏನೀದು ಅಶ್ಚರ್ಯ!

0
1613

 

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಪ್ರಕೃತಿಯ ವಿಸ್ಮಯಕ್ಕೆ ಮನುಷ್ಯ ಆಶ್ಚರ್ಯಚಕಿತನಾಗಿದ್ದಾನೆ. ಹಿಂದಿನ ವರ್ಷ ಹಾಂಕಾಂಗ್ ನಲ್ಲಿ ಎಲ್ಲರೂ ಆಶ್ಚರ್ಯಪಡುವಂತಹ ಒಂದು ಘಟನೆ ನಡೆದಿತ್ತು. ಅದೆರೀತಿ ನಂಬಲು ಅಸಾಧ್ಯವಾದರು ಇದು ಸತ್ಯ ನಂಬಲೇಬೇಕು ತಮಿಳುನಾಡಿನ ಕೊಯಮತ್ತೂರಿನಲ್ಲಿ ಊಹೆಗೂ ನಿಲುಕದ ಘಟನೆಯೊಂದು ನಡೆದಿದೆ. 1 ವರ್ಷದ ನಿಶಾ ಎಂಬ ಮಗುವಿನ ಹೊಟ್ಟೆಯಲ್ಲಿ 3.5 ಕಿಲೋಗ್ರಾಂ ತೂಕದ ಭ್ರೂಣ ಕಂಡುಬಂದಿದೆ.

ಹುಟ್ಟುವಾಗಲೇ ನಿಶಾಳ ಹೊಟ್ಟೆ ಎಲ್ಲ ಶಿಶುಗಳಿಗಿಂತ ದೊಡ್ಡದಾಗಿಯೇ ಇತ್ತು. ಆದರೂ ಇವಳ ತಂದೆ ರಾಜು ಮತ್ತು ತಾಯಿ ಸುಮತಿಗೆ ಇವಳ ಹೊಟ್ಟೆಯಲ್ಲಿ ಇನ್ನೊಂದು ಜೀವ ಬೆಳೆಯುತ್ತಿದೆ ಎಂಬ ಅರಿವಾಗಲಿಲ್ಲ. ನಂತರ ಕೆಲ ತಿಂಗಳಲ್ಲಿ ನಿಶಾಗೆ ಉಸಿರಾಡುವುದೇ ಕಷ್ಟವಾಯಿತು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಿಶಾಳನ್ನು ಕೊಯಮತ್ತೂರಿನ ಮೆಟ್ಟುಪಾಳ್ಯಂ ಆಸ್ಪತ್ರೆಗೆ ಸೇರಿಸಿದಾಗ ಸ್ವತಃ ವೈದ್ಯರೇ ಕಂಗಾಲಾದರು. ಏಕೆಂದರೆ ನಿಶಾಳ ಹೊಟ್ಟೆಯಲ್ಲಿ 3.5 ಕಿ.ಗ್ರಾಂ. ನ ಭ್ರೂಣವಿತ್ತು. ಚಿಕಿತ್ಸೆಯ ಆರಂಭದಲ್ಲಿ ವೈದ್ಯರಿಗೆ ಯಾವುದೋ ಟ್ಯೂಮರ್ ಇರಬಹುದೆಂಬ ಶಂಕೆ ಇತ್ತು. ಆದರೆ ನಿಶಾಳನ್ನು ಅಲ್ಟ್ರಾಸೌಂಡ್ ಗೆ ಒಳಪಡಿಸಿದಾಗಲೇ ಅದು ಗಡ್ಡೆಯಲ್ಲ ಭ್ರೂಣ ಎಂಬುದು ವೈದ್ಯರಿಗೆ ಗೊತ್ತಾಯಿತು.

“ನಿಶಾಳ ಹೊಟ್ಟೆಯಲ್ಲಿನ ಭ್ರೂಣವನ್ನು ತೆಗೆಯುವುದು ಸುಲಭ ಸಾಧ್ಯವಿರಲಿಲ್ಲ. ಭ್ರೂಣ ಕಿಡ್ನಿಗೆ ಅಂಟಿಕೊಂಡಿತ್ತು. ಅದರ ಸುತ್ತಲೂ ನರಗಳು ಬೆಳೆದಿದ್ದವು. ಆದರೂ ತುಂಬ ಜಾಗರೂಕವಾಗಿ ಭ್ರೂಣವನ್ನು ಹೊರತೆಗೆದಿದ್ದೇವೆ” ಎಂದು ಡಾ. ವಿಜಯಗಿರಿ ಹೇಳಿದ್ದಾರೆ.

ಕೃಪೆ: kannadadunia