ಚಿತ್ತಾಪುರದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ

0
2044

ಇಂದಿನ ಆಧುನಿಕ ಜೀವನ ಶೈಲಿಗೆ ಎಷ್ಟು ಮಾರು ಹೋದರೂ ಇಂತಹ ಆಚರಣೆಗಳು ಗ್ರಾಮೀಣ  ಜನಪರರ ಬದುಕಿನಲ್ಲಿ ಇನ್ನೂ ಜೀವಂತಿಕೆ ಪಡೆದುಕೊಂಡಿವೆ.

ಕೃಷಿ ಚಟುವಟಿಕೆಗೆ ಪ್ರಾರಂಭಿಕ ಹಬ್ಬಗಳಲ್ಲೊಂದಾದ ಮಣ್ಣೆತ್ತಿನ ಅಮವಾಸ್ಯೆಗೆ ಎತ್ತುಗಳನ್ನು ತಯಾರಿಸಿ ಮಣ್ಣಿಗೆ ಪೂಜೆ ಸಲ್ಲಿಸಿ ರೈತರು ತಮ್ಮ ಮುಂದಿನ ಬೆಳೆಗಳು ಹುಲಸಾಗಿ ಬೆಳೆಯಲೆಂದು ಹೊಲದ ಉಳುಮೆಗೆ ಬೆಳವಣಿಗೆಗೆ ಅಣಿಯಾಗುತ್ತಾರೆ.

ಎತ್ತಿನ ಜತೆಯಲ್ಲಿ ತಂದ ಮಣ್ಣಿನ ದೋಣಿಯಲ್ಲಿ ಕಾಳುಗಳನ್ನು ಹಾಕಿ ಬೆಳೆ ಹುಲುಸಾಗಿ ಬೆಳೆಯಲಿ ಎಂದು ಪ್ರಾರ್ಥಿ ಸುತ್ತಾರೆ. ಕೃಷಿ ಪರಿಕರಗಳನ್ನು ಸಹ ಪೂಜಿಸಿದರು. ರೈತರ ಪಾಲಿಗೆ ಇದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಮುಂಗಾರು ಮಳೆ ಆರಂಭಗೊಂಡಿದೆ. ರೈತರು ಕೃಷಿ ಚಟವಟಿಕೆಯಲ್ಲಿ ತೊಡಗಿದ್ದಾರೆ. ರೈತ ಜೀವನಕ್ಕೆ ಬೆಳಕು ನೀಡುವ ಎತ್ತುಗಳಿಗೆ ಯಾವುದೇ ಕಷ್ಟ ಕಾರ್ಪಣ್ಯ ಬರಬಾರದು ಎಂದು ಭಕ್ತಿ ಭಾವದಿಂದ ಹಳ್ಳಿಯ ಜನರು ಪ್ರಾರ್ಥಿಸುತ್ತಾರೆ.