ಮದ್ವೆಗೆ ಮುನ್ನ ಆತ್ಮಹತ್ಯೆಗೆತ್ನಿಸ್ತಾಳೆ ಈ ನಟಿ, ಕಾರಣವೇನು ಗೊತ್ತಾ..?

0
1086

ಈ ನಟಿಯ ಮದುವೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಜೊತೆಗೆ ಮದುವೆ ಸಿದ್ದತೆಗಳೂ ಅದ್ದೂರಿಯಾಗಿ ನಡೆದಿರುವ ಮಧ್ಯೆ ಈಕೆ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಅಷ್ಟೇ ಅಲ್ಲ ಆಸ್ಪತ್ರೆಯ ಐಸಿಯು ನಲ್ಲಿ ಕೆಲ ದಿನಗಳ ಕಾಲ ಇರಲಿದ್ದಾಳೆ. ಇದಕ್ಕೇನು ಕಾರಣ ಗೊತ್ತಾ..? ಮುಂದೆ ಓದಿ.

yeh-hai-mohabbatein

ಅಂದ ಹಾಗೇ ಮದುವೆ ನಡೆಯುತ್ತಿರುವುದು ಟಿವಿ ಧಾರಾವಾಹಿ ‘ಯೇ ಹೈ ಮೊಹಬ್ಬತೇನ್’ ನಟಿ 31 ವರ್ಷದ ದಿವ್ಯಾಂಕಾ ತ್ರಿಪಾಠಿಯದ್ದು. ಮದುವೆ ಭೂಪಾಲ್ ನಲ್ಲಿ ನಡೆಯಲಿದ್ದು, ಈಗಾಗಲೇ ಸಿದ್ದತೆಗಳು ನಡೆದಿವೆ. ದಿವ್ಯಾಂಕಾ ಮದುವೆಯಾಗಲು ತೆರಳಬೇಕಿರುವ ಕಾರಣ ‘ಹೇ ಹೈ ಮೊಬ್ಬತೇನ್’ ಧಾರಾವಾಹಿಯಲ್ಲಿ ಇಷಿತಾ ಪಾತ್ರ ನಿರ್ವಹಿಸುತ್ತಿರುವ ದಿವ್ಯಾಂಕಾ ತ್ರಿಪಾಠಿ ಮದುವೆ ಮುಗಿಸಿಕೊಂಡು ಬರುವವರೆಗೂ ಈ ಪಾತ್ರವನ್ನು ಆತ್ಮಹತ್ಯೆಗೆ ಯತ್ನಿಸುವಂತೆ ನಿರ್ದೇಶಕರು ಪ್ಲಾನ್ ಮಾಡಿದ್ದಾರೆ.

ಇಷಿಕಾ ಪಾತ್ರವನ್ನು ಐಸಿಯು ನಲ್ಲಿ ಇರಿಸುವ ಮೂಲಕ ದಿವ್ಯಾಂಕಾ ತ್ರಿಪಾಠಿಯ ಗೈರು ಹಾಜರಿಯನ್ನು ಸರಿದೂಗಿಸುವುದು ನಿರ್ದೇಶಕರ ತಂತ್ರವಾಗಿದೆ. ದಿವ್ಯಾಂಕಾ ಬಂದ ನಂತರ ಇಷಿತಾ ಚೇತರಿಸಿಕೊಂಡು ಐಸಿಯುನಿಂದ ಹೊರ ಬರಲಿದ್ದಾಳೆ. ಅಂದ ಹಾಗೇ ದಿವ್ಯಾಂಕಾ ಮದುವೆಗೆ ನಿರ್ಮಾಪಕರು ಕೇವಲ ಮೂರು ದಿನ ರಜಾ ನೀಡಿದ್ದಾರೆಂದು ಹೇಳಲಾಗಿದೆ.

Source: dailyhunt