ಮಲಗಿದ್ದ ಮಹಿಳೆ ಬಳಿ ರಾತ್ರಿ ಹೋಗ್ತಿದ್ದ ಹೆಬ್ಬಾವು ಮಾಡ್ತಿತ್ತು ಇಂಥ ಕೆಲಸ

0
5581

ಪ್ರಾಣಿಗಳನ್ನು ಪ್ರೀತಿಸುವುದು, ಸಾಕುವುದು ತಪ್ಪಲ್ಲ. ಆದ್ರೆ ಅಪಾಯಕಾರಿ ಪ್ರಾಣಿಗಳನ್ನು ಸಾಕಿದ್ರೆ ಆಪತ್ತು ತಪ್ಪಿದ್ದಲ್ಲ. ಇದಕ್ಕೆ ಈ ಮಹಿಳೆ ಉತ್ತಮ ಉದಾಹರಣೆ. ಈಕೆ ಹಾಗೂ ಈಕೆ ಸಾಕಿದ ಹೆಬ್ಬಾವಿನ ಕಥೆ ಕೇಳಿದ್ರೆ ಮೈ ಬೆವರೋದು ಗ್ಯಾರಂಟಿ.

ಈ ಮಹಿಳೆಗೆ ಪ್ರಾಣಿಗಳೆಂದ್ರೆ ಪಂಚಪ್ರಾಣ. ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕಿದ್ದಾಳೆ ಈಕೆ. ಅಷ್ಟೇ ಅಲ್ಲ ಹೆಬ್ಬಾವನ್ನೂ ಕೂಡ ಈಕೆ ಸಾಕಿದ್ದಾಳೆ. ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾಳೆ. ಆದ್ರೆ ಮೂರ್ನಾಲ್ಕು ದಿನಗಳಿಂದ ಹೆಬ್ಬಾವು ಸರಿಯಾಗಿ ಆಹಾರ ಸೇವಿಸ್ತಿರಲಿಲ್ಲವಂತೆ. ಹೆಬ್ಬಾವು ಮಂಕಾದಂತೆ ಕಾಣುತ್ತಿತ್ತಂತೆ.

ಪ್ರೀತಿಯ ಹೆಬ್ಬಾವಿನ ಆರೋಗ್ಯ ಕೆಟ್ಟಿದೆ ಎಂದು ಭಾವಿಸಿದ ಮಹಿಳೆ ಪಶು ಆಸ್ಪತ್ರೆಗೆ ಹೋಗಿದ್ದಾಳೆ. ಅಲ್ಲಿ ಹೆಬ್ಬಾವನ್ನು ಪರೀಕ್ಷೆ ನಡೆಸಿದ ವೈದ್ಯರು, ಮಹಿಳೆ ಬೆಚ್ಚಿ ಬೀಳಿಸುವಂತಹ ವಿಷಯ ಹೇಳಿದ್ದಾರೆ. ಹೆಬ್ಬಾವು ಮಹಿಳೆಯನ್ನು ನುಂಗುವ ಪ್ಲಾನ್ ಹಾಕಿತ್ತಂತೆ. ಹಾಗಾಗಿ ಮೂರ್ನಾಲ್ಕು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲವಂತೆ.

ವೈದ್ಯರು ಹೇಳಿದ ನಂತ್ರ ಮಹಿಳೆಗೆ ಇದು ನಿಜ ಎನಿಸಿದೆ. ಯಾಕೆಂದ್ರೆ ರಾತ್ರಿ ಮಹಿಳೆ ಜೊತೆ ಹೆಬ್ಬಾವು ಮಲಗುತ್ತಿತ್ತಂತೆ. ಮಹಿಳೆಯನ್ನು ಸುತ್ತುವರೆಯುತ್ತಿದ್ದ ಹೆಬ್ಬಾವು ಮಹಿಳೆಯನ್ನು ಪೂರ್ತಿಯಾಗಿ ನುಂಗಬಹುದೇ ಇಲ್ಲವೇ ಎಂಬುದನ್ನು ಚೆಕ್ ಮಾಡುತ್ತಿತ್ತಂತೆ.

Source: kannadadunia