ಮವುತನನ್ನು ಕಾಪಾಡಿದ ಮರಿ ಮನೆ !

0
1063

ಮಾನವೀಯತೆಯಲ್ಲಿ ಮನುಷ್ಯನಿಗಿಂತ ಪ್ರಾಣಿ ಅದೆಷ್ಟೋ ಪಾಲು ಮೇಲು ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ.

ಇಲ್ಲಿ ನೋಡಿ ವಿಡಿಯೋ


ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮನುಷ್ಯ ಸ್ನೇಹಿತನನ್ನು ಮರಿಆನೆಯೊಂದು ನೀರಿಗಿಳಿದು ಪಾರು ಮಾಡಿದ ವೀಡೀಯೋ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಈ ವೀಡಿಯೋವನ್ನು ಸಮಾರು 2.2 ದಶಲಕ್ಷ ಜನರು ವೀಕ್ಷಿಸಿದ್ದು, ಎಲ್ಲರೂ ಹೃದಯತುಂಬಿ ಈ ಆನೆಯನ್ನು ಹಾರೈಸುತ್ತಿದ್ದಾರೆ.

ಅಕ್ಟೋಬರ್ 12ರಂದು ಈ ವೀಡಿಯೋ ಮೊದಲ ಬಾರಿ ಅಪ್‌ಲೋಡ್ ಆಗಿದೆ. ಇದು ಆನೆ ಖಾಮ್ ಲಾ ಹಾಗೂ ಅದರ ಮಾವುತ ಡಾರಿಕ್ ಅವರ ನಡುವಿನ ಬಾಂಧವ್ಯದ ಸಂಕೇತವಾಗಿದೆ.
ಉತ್ತರ ಥಾಯ್ಲೆಂಡ್‌ನ ಅಭಯಾರಣ್ಯದಲ್ಲಿ ಆನೆಗೆ ಸ್ನಾನ ಮಾಡಿಸಲು ಹೋದಾಗ ಈ ಘಟನೆ ನಡೆದಿದೆ. ಡಾರಿಕ್ ಸ್ನಾನ ಮಾಡಿಸುತ್ತಾ ಈಜುತ್ತಿದ್ದಾಗ ನಿಯಂತ್ರಣ ತಪ್ಪಿ ನೀರಿನಲ್ಲಿ ಕೊಚ್ಚಿ ಹೋಗುವವನಿದ್ದ. ಆಗ ಸಹಾಯಕ್ಕೆ ಯಾರೂ ಇಲ್ಲದ ಕಾರಣ ಮರಿ ಆನೆಯನ್ನೇ ಕರೆದ.

ಮಾವುತ ಕೂಗಿಗೆ ಕೂಡಲೇ ಸ್ಪಂದಿಸಿದ ಮರಿಆನೆ ಕೂಡಲೇ ಆತನತ್ತ ಮುನ್ನುಗ್ಗಿ ಪಾರು ಮಾಡಿದೆ. ಆನೆ ಮಾವುತನತ್ತ ಧಾವಿಸಿದ ರೀತಿ ನೋಡುವುದೇ ಪುಳಕ ಉಂಟುಮಾಡುತ್ತದೆ.
ಈ ವೀಡೀಯೋ ನೋಡಿದ ಪ್ರತಿಯೊಬ್ಬರು, ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಅದು ಅಷ್ಟೇ ಪ್ರೀತಿಯನ್ನು ಹಿಂತಿರುಗಿಸಿ ಕೊಡುತ್ತದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ.