ಮುಖೇಶ್ ಅಂಬಾನಿ ಆಸ್ತಿ ಒಂದು ದೇಶದ ಜಿಡಿಪಿಗಿಂತ ಜಾಸ್ತಿ ಗೊತ್ತಾ?

0
973

ಉದ್ಯಮಿ ಮುಖೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಯನ್ನು ಸತತ 9ನೇ ವರ್ಷವೂ ಉಳಿಸಿಕೊಂಡಿದ್ದಾರೆ. ಈ ಬಾರಿ ಅವರ ಆಸ್ತಿ ಇನ್ನಷ್ಟು ಹೆಚ್ಚಿದ್ದು, ಇಸ್ಟೊನಿಯಾ ದೇಶದ ಅಭಿವೃದ್ಧಿ ದರಕ್ಕಿಂತ ಹೆಚ್ಚು ಎಂದು ಫೋರ್ಬ್ಸ್ ಹೇಳಿದೆ.

mukeshambaniwealthier2

ಮುಖೇಶ್ ಅಂಬಾನಿ ಸೇರಿದಂತೆ ದೇಶದ ಟಾಪ್ 5ನಲ್ಲಿರುವ ಶ್ರೀಮಂತರ ಎಲ್ಲರ ಆಸ್ತಿ ಸೇರಿಸಿದರೆ 83.7 ಶತಕೋಟಿ ಡಾಲರ್ ಆಗಲಿದೆ. ಇದರಲ್ಲಿ ಮುಖೇಶ್ ಅವರ ಆಸ್ತಿಯೇ 22.7 ಶತಕೋಟಿ ಡಾಲರ್ ಇದೆ.

ಮುಖೇಶ್ ಅವರ ಒಬ್ಬರ ಆಸ್ತಿಯೇ ದೇಶದ ಅಭಿವೃದ್ಧಿ ದರಕ್ಕಿಂತ ಹೆಚ್ಚಾಗಿದೆ. ಇನ್ನು ಐವರ ಆಸ್ತಿ ಸೇರಿಸಿದರೆ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಇಸ್ರೋದ ‘ಚಂದ್ರಯಾನ’ (1230ಕೋಟಿ)ಗಿಂತ ಹೆಚ್ಚು.

mukeshambaniwealthier1a

2016ರ ರಿಯೊ ಒಲಿಂಪಿಕ್ಸ್‌ಗೆ ಮಾಡಲಾದ ಒಟ್ಟು ವೆಚ್ಚಕ್ಕಿಂತ 18 ಪಟ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ಭಾರತದ ಅತ್ಯಂತ ಶ್ರೀಮಂತರ ಸಾಲಿನಲ್ಲಿ ಸನ್ ಫಾರ್ಮಾ ಸಂಸ್ಥೆಯ ದಿಲೀಪ್ ಸಾಂಘ್ವಿ ಇದ್ದಾರೆ. ಇವರ ಆಸ್ತಿ 16.9 ಶತಕೋಟಿ ಆಗಿದೆ. ಹಿಂದೂಜ ಕುಟುಂಬ (15.2) ಮೂರನೇ ಸ್ಥಾನ ಪಡೆದರೆ, ವಿಪ್ರೊದ ಅಜಿಮ್ ಪ್ರೇಮ್‌ಜಿ (15) ನಾಲ್ಕನೇ ಸ್ಥಾನಿಯಾಗಿದ್ದಾರೆ.