ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಡೀಲರ್ಸ್ ಗಳೆಲ್ಲ ಒಟ್ಟಾಗಿ ಮುಷ್ಕರ

0
825

ಬೆಂಗಳೂರು:ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಡೀಲರ್ಸ್ ಗಳೆಲ್ಲ ಒಟ್ಟಾಗಿ ಮುಷ್ಕರ ಹಮ್ಮಿಕೊಂಡಿದ್ದಾರೆ ವಾಹನ ಸವಾರರಿಗೆ ಮತ್ತೊಂದು ಶಾಕಿಂಗ್ ಸುದ್ದಿ. ನಾಳೆಯಿಂದ ಎರಡು ದಿನಗಳ ಕಾಲ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಸರ್ಕಾರಿ ಸ್ವಾಮ್ಯದ 3 ತೈಲ ಕಂಪನಿಗಳಿಂದ ಇಂಧನವನ್ನು ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದೆ.

ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್  ಡೀಲರ್ಸ್ ಗಳೆಲ್ಲ ಒಟ್ಟಾಗಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ರಜಾದಿನಗಳು, 2ನೇ ಶನಿವಾರ ಹಾಗೂ ಭಾನುವಾರ ಕೂಡ ಬಂಕ್ಗಳನ್ನು ತೆರೆಯದಿರುವಂತೆ ನಿರ್ಧರಿಸಿದ್ದಾರೆ.

ಕಮಿಷನ್ ಹೆಚ್ಚಳ, ಲ್ಯೂಬ್ ಡಂಪಿಂಗ್ ಸ್ಥಗಿತ, ಅಧಿಕಾರಿಗಳ ಕಿರುಕುಳ ತಡೆ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದೆ.

ಇಂದು ಮತ್ತು ನಾಳೆ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಸರಕಾರಿ ಸ್ವಾಮ್ಯದ 3 ತೈಲ ಕಂಪನಿಗಳಿಂದ ಇಂಧನವನ್ನು ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದೆ. ಪರಿಣಾಮ ವಾಹನ ಸವಾರರು ಎರಡು ದಿನಗಳ ಕಾಲ ತೀವ್ರ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಪೆಟ್ರೋಲ್ ಬಂಕ್ ಮುಷ್ಕರದ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ವಾಹನ ಸವಾರರು ಪೆಟ್ರೊಲ್ ಬಂಕ್ ಎದುರು ಜಮಾಯಿಸಲು ಆರಂಭಿಸಿದ್ದರು. ರಾಜ್ಯದ ಕೆಲವು ಕಡೆ ರಾತ್ರಿ 12 ರವರೆಗೂ ಪೆಟ್ರೊಲ್ ಬಂಕ್ ಎದುರು ಕ್ಯೂ ಇದ್ದ ದೃಶ್ಯ ಕಂಡು ಬಂದಿತು. ಕೆಲವು ಪೆಟ್ರೋಲ್ ಬಂಕ್ ನೋ ಸ್ಟಾಕ್ ಎಂದು ಬೋರ್ಡ್ ಹಾಕಿದ್ದವು.

 ನ.3 ಮತ್ತು ನ.4 ಡೀಲರ್ಸ್ ಗಳು ತೈಲ ಕಂಪನಿಯಿಂದ ತೈಲ ಖರೀದಿಯನ್ನಷ್ಟೇ ಸ್ಥಗಿತಗೊಳಿಸಲಿವೆ. ಈ ಹಿನ್ನೆಲೆಯಲ್ಲಿ ಈ ಎರಡು ದಿನ ಬಂಕ್ ಗಳಲ್ಲಿ ಸಂಗ್ರಹವಾಗಿರುವ ಪೆಟ್ರೋಲ್, ಡಿಸೇಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ ನ.5 ರಿಂದ ಪ್ರಾರಂಭವಾಗುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿನ ತೊಂದರೆಯಾಗಬಹುದು.

ಆದರೆ ನ.5 ರಿಂದ ಪ್ರಾರಂಭವಾಗುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿನ ತೊಂದರೆಯಾಗಬಹುದು. ಏಕೆಂದರೆ ಒಂದು ಪಾಳಿಯಲ್ಲಿ ಅಂದರೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಬಂಕ್‌ಗಳು ತೆರೆದಿರುವುದರಿಂದ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರ್ಕಾರ ಡೀಲರ್ಸ್‌ಗಳ ಮುಖಂಡರ ಸಭೆ ಕರೆದು ಬೇಡಿಕೆ ಈಡೇರಿಕೆ ಭರವಸೆ ನೀಡಿದರೆ ಮುಷ್ಕರ ನಡೆಯುವುದು ಅನುಮಾನವಾಗಿದೆ.