ಮೈಸೂರುಪಾಕ್ ಮಾಡುವ ವಿಧಾನ

0
4325

ಮೈಸೂರುಪಾಕ್ ಸಾಮಗ್ರಿಗಳು:

ಕಡಲೆಹಿಟ್ಟು-1 ಕಪ್,

ನೀರು-1/2 ಕಪ್,

ಸಕ್ಕರೆ-2 ಕಪ್,

ತುಪ್ಪ-2 1/2 ಕಪ್

ಮಾಡುವ ವಿಧಾನ:

ಕಡಲೆಹಿಟ್ಟನ್ನು ದಪ್ಪತಳದ ಬಾಣಲಿ ಅಥವಾ ಪ್ಯಾನ್‍ನಲ್ಲಿ ಘಂ ಎಂದು ಪರಿಮಳ ಬರುವವರೆಗೂ ಹುರಿಯಬೇಕು.

ಮತ್ತೊಂದು ಪಾತ್ರೆಯಲ್ಲಿ 2 ಕಪ್ ಸಕ್ಕರೆಯನ್ನು 1/2 ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಪಾಕಕ್ಕಿಡಬೇಕು.

images

ಸಕ್ಕರೆ ಸಂಪೂರ್ಣ ಕರಗಿ ಎಳೆಪಾಕ ಬಂದಾಗ ಹುರಿದುಕೊಂಡ ಕಡಲೆಹಿಟ್ಟನ್ನು ಇದಕ್ಕೆ ಗಂಟುಕಟ್ಟದಂತೆ ಸ್ವಲ್ಪಸ್ವಲ್ಪವಾಗಿ ಬೆರೆಸಬೇಕು.

ನಂತರ ಒಂದು ಕಪ್ ತುಪ್ಪವನ್ನು ಹಾಕಿ ಗೊಟಾಯಿಸಬೇಕು.

mysorepak_step4

ಆ ನಂತರ ಮತ್ತೊಂದು ಕಪ್, ಕೊನೆಗೆ ಉಳಿದ 1/2 ಕಪ್ ತುಪ್ಪವನ್ನು ಸೇರಿಸಿ ಕಡಲೆಹಿಟ್ಟು-ಸಕ್ಕರೆ ಮಿಶ್ರಣವನ್ನು ಚೆನ್ನಾಗಿ ಗೊಟಾಯಿಸುತ್ತಲೇ ಇರಬೇಕು.

mysorepak_step5

ಮಿಶ್ರಣವು ಗಟ್ಟಿಯಾಗುತ್ತಾ ಅಂಚು ಬಿಡಲಾರಂಭಿಸಿದಾಗ (ಪೂರ್ತಿ ಗಟ್ಟಿಯಾಗಲು ಬಿಡಬಾರದು) ತುಪ್ಪ ಸವರಿದ ತಟ್ಟೆಗೆ ಮೈಸೂರ್‍ಪಾಕನ್ನು ಸುರಿದು ಮೊಗಚು ಕೈ ಇಲ್ಲವೇ ಮತ್ತೊಂದು ತಟ್ಟೆಯಿಂದ ಮೇಲ್ಭಾಗವನ್ನು ಸಮತಟ್ಟಾಗಿಸಿ ಸ್ವಲ್ಪ ಆರಿದ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿ.