ಮ್ಯಾನ್ ಹೋಲ್ ಸ್ಚಚ್ಚಗೊಳಿಸಲೋಗಿದ್ದ ಪೌರಕಾರ್ಮಿಕರ ಸಾವು

0
883
copy;News Minute

ತಮ್ಮ ಆರೋಗ್ಯವನ್ನೆ ಪಣವಾಗಿ ಇಟ್ಟು ನಗರಗಳ ಸೌಂದರ್ಯ ಹಾಗೂ ನೈರ್ಮಲ್ಯ ಕಾಪಾಡುವ ಈ ಕಾರ್ಮಿಕ ವರ್ಗಕ್ಕೆ ದೊರೆಯುತ್ತಿರುವ ಸೌಲಭ್ಯಗಳು ಏನೇನು?

ಅಪಾರ್ಟ್ಮೆಂಟ್ ಒಂದರ ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರೂ ಸೇರಿದಂತೆ ನಾಲ್ವರು ವಿಷಾನಿಲ ಸೇವಿಸಿ ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಹೈದರಾಬಾದಿನ ಮಾಧಪುರ್ ಏರಿಯಾದ ಅಯ್ಯಪ್ಪ ಸೊಸೈಟಿಯಲ್ಲಿನ ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಮೂವರು ಕಾರ್ಮಿಕರು ಕೆಳಗಿಳಿದಿದ್ದಾರೆ. ಎಷ್ಟು ಹೊತ್ತಾದರೂ ಅವರುಗಳು ಮೇಲೆ ಬಾರದ ಕಾರಣ ಸ್ಥಳೀಯ ನಿವಾಸಿ ಶ್ರೀನಿವಾಸ್ ಎಂಬವರು ಕೆಳಗಿಳಿದಿದ್ದು, ಅವರೂ ಕೂಡಾ ಸಾವನ್ನಪ್ಪಿದ್ದಾರೆ.

ಬಳಿಕ 108 ಅಂಬುಲೆನ್ಸ್ ಗೆ ಕರೆ ಮಾಡಿದ್ದು, ಧಾವಿಸಿ ಬಂದ ಸಿಬ್ಬಂದಿ ಪೈಕಿ ಓರ್ವ ಮ್ಯಾನ್ ಹೋಲ್ ಗೆ ಇಳಿದ ವೇಳೆ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹಲವು ದಿನಗಳಿಂದ ಮ್ಯಾನ್ ಹೋಲ್ ಮುಚ್ಚಿದ್ದು, ಇದರಿಂದ ಉಂಟಾಗಿದ್ದ ವಿಷಾನಿಲ ಸೇವಿಸಿ ನಾಲ್ವರು ಸಾವನ್ನಪ್ಪಿರಬಹುದೆಂದು ಹೇಳಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗುತ್ತಿಗೆದಾರನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮ್ಮ ಆರೋಗ್ಯವನ್ನೆ ಪಣವಾಗಿ ಇಟ್ಟು ನಗರಗಳ ಸೌಂದರ್ಯ ಹಾಗೂ ನೈರ್ಮಲ್ಯ ಕಾಪಾಡುವ ಈ ಕಾರ್ಮಿಕ ವರ್ಗಕ್ಕೆ ದೊರೆಯುತ್ತಿರುವ ಸೌಲಭ್ಯಗಳು ಏನೇನು ಸಾಲದು, ಇವರಿಗೆ ದೊರೆಯುವ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸುವ ಅಗತ್ಯ ಇದೆ. ಪೌರಕಾರ್ಮಿಕ ವರ್ಗ ಕೂಡ ದುಶ್ಚಟಗಳಿಂದ ದೂರ ಇದ್ದು ತಮ್ಮ ವಯಕ್ತಿಕ ಆರೋಗ್ಯ ರಕ್ಷಣೆಯತ್ತ ಗಮನ ನೀಡುವ ಅವಶ್ಯಕತೆ ಇದೆ ಎಂದ ನ್ಯಾಯಾಧೀಶರು, ಸಂವಿಧಾನ ಎಲ್ಲರಿಗೂ ಗೌರವಯುಕ್ತ ಬದುಕಿಗೆ ಅವಕಾಶ ಕಲ್ಪಿ$ಸಿದೆ, ಈ ದೇಶ ಹಳ್ಳಿಗಳ ನಾಡಾಗಿರುವುದರಿಂದ ಮತ್ತು ಇಲ್ಲಿನ ಜನರಲ್ಲಿ ಕಾನೂನು ಸಾಕ್ಷರತೆಯ ಕೊರತೆ ಇರುವುದರಿಂದ, ನ್ಯಾಯಾಂಗ, ಮಹಿಳೆಯರು, ಮಕ್ಕಳು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರಲ್ಲಿ ಕಾನೂನು ಸಾಕ್ಷರತೆಗಾಗಿ ವಿವಿಧ ರೀತಿಯ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.

ನಗರಗಳ ಸೌಂದರ್ಯ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರ ಕಾಯಕಿಂತ ಉನ್ನತ ಕಾಯಕ ಮೊತ್ತೂಂದು ಇಲ್ಲ. ಇಂತಹ ಉನ್ನತ ಕಾಯಕ ನಿರತ ಪೌರಕಾರ್ಮಿಕ ವರ್ಗಕ್ಕೆ ದೊಡ್ಡ ಸಲಾಂ