ಮೋದಿಯಣ್ಣ ಜನರನ್ನು ಮೂರ್ಖರನ್ನಾಗಿಸಿಬಿಟ್ಟೆಯಲ್ಲ!

0
861

ಮೋದಿಯಣ್ಣ ಜನರನ್ನು ಮೂರ್ಖರನ್ನಾಗಿಸಿಬಿಟ್ಟೆಯಲ್ಲ: ಮೋದಿ ಪರಮಾಪ್ತ ಬಹಿರಂಗ ಪತ್ರ ಈಗ ವೈರಲ್

ಇವರ ಹೆಸರು ಯತಿನ್ ಓಜಾ. ಗುಜರಾತ್‌ನ ಮಾಜಿ ಶಾಸಕ. ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರ ಪರಮಾಪ್ತ ರಾಗಿದ್ದವರು. ಅಮಿತ್ ಶಾ ಅವರ ಮಾರ್ಗದರ್ಶಿ ಅಂತಲೂ ಹೆಸರು ಮಾಡಿದವರು. ೨೦೧೬ ಜುಲೈನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ದೇಶದ ಹೆಸರಿನಲ್ಲಿ 500 ಮತ್ತು 1000 ರೂ. ನೋಟುಗಳನ್ನು ರದ್ದು ಮಾಡಿ ಜನರನ್ನು ಹೇಗೆ ಮೂರ್ಖರನ್ನಾಗಿಸಿದಿರಿ ಎಂದು ಆರೋಪಿಸಿ ಬರೆದ ಬಹಿರಂಗ ಪತ್ರ ಈಗ ಸಾಮಾಜಿಕ ಜಾಲತಾಣ ದಲ್ಲಿ ಸಂಚಲನ ಸೃಷ್ಟಿಸಿದೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಕಳುಹಿಸಿರುವ ಯತಿನ್ ಓಜಾ, ಇದನ್ನು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲೂ ಹಾಕಿಕೊಂಡಿದ್ದಾರೆ.

ನವೆಂಬರ್ ೮ರಂದು ರಾತ್ರಿ ನೋಟು ರದ್ದುಪಡಿಸಿದ ಆದೇಶ ಹೊರಡಿಸಿದ ಬೆನ್ನಲ್ಲೇ ಗುಜರಾತ್‌ನಲ್ಲಿ ಬಿಜೆಪಿ ನಾಯಕರ ಹಿಡಿತದಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಅದೇ ದಿನ ರಾತ್ರಿ 9 ರಿಂದ ಮುಂಜಾನೆ 5 ಗಂಟೆವರೆಗೆ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೋದಿ ಅವರ ಆಪ್ತರು ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್ ಶಾ ಕೂಡ ಹಣ ಬದಲಾವಣೆಯಲ್ಲಿ ತೊಡಗಿ ಕೊಂಡಿದ್ದು, ಗುಜರಾತ್‌ನಲ್ಲಿ ದೊಡ್ಡ ಮಟ್ಟದಲ್ಲಿ ಈ ದಂಧೆ ನಡೆಯುತ್ತಿದೆ. ಇದರ ವೀಡೀಯೊ ಚಿತ್ರೀಕರಿಸಲಾಗಿದ್ದು, ಅದು ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದಾರೆ.
ಮೋದಿ ಅವರೇ ನಾನು ಮಾಡಿದ ಆರೋಪ ತಪ್ಪು ಎಂದು ಸಾಬೀತುಪಡಿಸಿದರೆ ನಾನು ಸಾರ್ವಜನಿಕವಾಗಿ ಬಹಿರಂಗವಾಗಿ ಕ್ಷಮೆಕೋರುತ್ತೇನೆ. ಇಲ್ಲದಿದ್ದರೆ ನೀವು ಕ್ಷಮೆಕೋರಬೇಕು ಎಂದು ಆಗ್ರಹಿಸಿದ್ದಾರೆ.

ದೇಶದಲ್ಲಿ 300ಕ್ಕೂ ಅಧಿಕ ಉದ್ಯಮಿಗಳಿದ್ದಾರೆ. ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆದಾರರು, ಸರಕಾರದ ಕಾಮಗಾರಿಗಳ ಗುತ್ತಿಗೆದಾರರು ಅಲ್ಲದೇ ಪ್ರಮುಖವಾಗಿ ಅದಿರು ಮುಂತಾದ ಗಣಿಗಾರಿಕೆ ನಡೆಸುತ್ತಿರು ವವರು, ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗ ಎಷ್ಟು ಮಂದಿ ಬ್ಯಾಂಕ್‌ನಲ್ಲಿ ಎಷ್ಟು ಹಣ ಇರಿಸಿದ್ದಾರೆ ಎಂದು ತಿಳಿಯಲು ಜನರು ಕಾಯುತ್ತಿದ್ದಾರೆ ಎಂದರು.