ಯು.ಪಿ.ಎಸ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಯ ಗರಿಷ್ಠ ವಯೋಮಿತಿ 27 ವರ್ಷಕ್ಕೆ ಇಳಿಕೆ

0
1131

ನವದೆಹಲಿ: ಯು.ಪಿ.ಎಸ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಯ ಗರಿಷ್ಠ ವಯೋಮಿತಿಯನ್ನು ಕಡಿಮೆಗೊಳಿಸಲು ಮಾಜಿ ಶಿಕ್ಷಣ ಕಾರ್ಯದರ್ಶಿ ಬಿಎಸ್ ಬಸ್ವಾನ್ ಅಧ್ಯಕ್ಷತೆಯ ಸಮಿತಿಯು ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದೆ. ಕೇಂದ್ರ ಸರ್ಕಾರ ಸಮಿತಿ ನೀಡಿರುವ ಶಿಫಾರಸ್ಸನ್ನು ಅಂಗೀಕರಿಸಿದರೆ, ಮುಂಬರುವ ಕೇಂದ್ರ ಲೋಕಸೇವಾ ಆಯೋಗಕ್ಕೆ ನಡೆಸಲಾಗುವ ಪರೀಕ್ಷೆ (ಐಎಎಸ್, ಐಪಿಎಸ್)ಯಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಪ್ರಸ್ತುತ ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವುದಕ್ಕೆ ಇರುವ ಗರಿಷ್ಠ ವಯೋಮಿತಿ 32 ವರ್ಷವಾಗಿದ್ದು, ಇದನ್ನು 27 ವರ್ಷಕ್ಕೆ ಇಳಿಕೆ ಮಾಡಲು ಶಿಫಾರಸ್ಸು ಮಾಡಲಾಗಿದೆ. ಇದರಿಂದಾಗಿ ಗರಿಷ್ಟ ಎಸ್‍ಸಿ ಎಸ್‍ಟಿ ಅಭ್ಯಥಿ೯ಗಳಿಗೆ ಐದು ವಷ೯ ಹೆಚ್ಚಿನ ಕಾಲಾವಕಾಶ ನೀಡಲಾಗಿದ್ದು, ಹಿ೦ದುಳಿದ ವಗ೯ದವರಿಗೆ ಮೂರು ವರ್ಷ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ದಿವ್ಯಾ೦ಗರಿಗೆ 10 ವರ್ಷ ಹೆಚ್ಚಿನ ಅವಕಾಶ ಒದಗಿಸಲಾಗಿದೆ.

ಪ್ರಸ್ತುತ ET ಮೂಲಗಳ ಪ್ರಕಾರ 32 ವರ್ಷ ವಯಸ್ಸಿನವರು ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ನೇಮಕ ತುಂಬಾ ಹಳೆಯದು ಎಂದು ಹೇಳಲಾಗಿದೆ.

ದೇಶಾದ್ಯಂತ ಐಎಎಸ್‌ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು (ಐಎಎಸ್, ಐಪಿಎಸ್) ಮುಖ್ಯ ಪಾತ್ರವಹಿಸುತ್ತಾರೆ. ಮೂರು ಅಖಿಲ ಭಾರತ ಸೇವೆಗಳಲ್ಲಿ ಇದೂ ಒಂದು. ಭಾರತದಲ್ಲಿನ ಹಲವು ಆಡಳಿತಾತ್ಮಕ ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ನಾಗರಿಕ ಸೇವಾ ಪರೀಕ್ಷೆ ನಡೆಸಲಾಗುತ್ತದೆ. ಕೇಂದ್ರೀಯ ಲೋಕ ಸೇವಾ ಆಯೋಗವು (ಯು ಪಿ ಎಸ್ ಸಿ)ಈ ನಾಗರಿಕ ಸೇವಾ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಮೂರು ಹಂತಗಳಿವೆ: ಪ್ರಾಥಮಿಕ ಪರೀಕ್ಷೆ, ಪ್ರಧಾನ ಪರೀಕ್ಷೆ ಹಾಗೂ ಸಂದರ್ಶನವಿದೆ.

ಮೂಲಗಳ ಪ್ರಕಾರ ಯುಪಿಎಸ್‍ಯ ಸಲಹೆ ಮೇರೆಗೆ ವಯಸ್ಸಿನ ವಯೋಮಿತಿಯನ್ನು ಕಡಿಮೆಗೊಳಿಸವ ಅಂತಿಮ ನಿರ್ಧಾರವನ್ನು ಕೇ೦ದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಹೇಳಿದರು..