ರಸೀದಿಗಳನ್ನು ‘ಗೆದ್ದಲು ತಿಂದವು’ ವಾದವನ್ನು ತಿರಸ್ಕರಿಸಿದ ಅಧಿಕಾರಿಗಳು: ‘ಕೈ’ ನಾಯಕ ಸಿಂಘ್ವಿ ಗೆ 56 ಕೋಟಿ ದಂಡ

0
623

ಪ್ರಖ್ಯಾತ ವಕೀಲರು ಮತ್ತು ‘ಕೈ’ ಪಾಳಯದ ಹಿರಿಯ ಸಂಸದ ಅಭಿಷೇಕ್ ಸಿಂಘ್ವಿ ಯವರ ಆದಾಯ ತೆರಿಗೆ ಸಂಬಂದಿಸಿದ ವ್ಯಾಜ್ಯಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಹೈ ಪ್ರೊಫೈಲ್ ವಕೀಲರಾದ ಸಿಂಘ್ವಿ ರವರ ಆದಾಯ ಮೂಲಕ್ಕೆ ೯೧.೯೫ ಕೋಟಿಯನ್ನು ಸೇರಿಸುವುದಲ್ಲದೆ; ೫೬.೬೭ ಕೋಟಿ ದಂಡವನ್ನು ಪಾವತಿಸಲು ಸೆಟಲ್ಮೆಂಟ್ ಕಮಿಷನ್ ಆದೇಶ ಹೊರಡಿಸಿದೆ.

ಸೆಟಲ್ಮೆಂಟ್ ಕಮಿಷನ್ ನವರ ಈ ಆದೇಶವನ್ನು ಸಿಂಘ್ವಿ ಯವರು ಪ್ರಶ್ನಿಸಿ, ಜೋದ್ಪುರ್ ಉಚ್ಚ ನ್ಯಾಯಾಲಯದಿಂದ ‘ತಡೆಯಾಜ್ಞೆ’ ಪಡೆದಿದ್ದಾರೆ.

ತನ್ನ ಖರ್ಚುವೆಚ್ಚಗಳನ್ನು ಧೃಡೀಕರಿಸಲು ಸೂಕ್ತ ಕಾಗದಪತ್ರಗಳ ಕೊರತೆಯಿದೆ ಎಂದು ಮನಗಂಡ ಸಿಂಘ್ವಿ ಯವರು ನನ್ನ ಚಾರ್ಟೆರ್ಟ್ದ್ ಅಕೌಂಟೆಂಟ್ ಕಚೇರಿಯಲ್ಲಿ ಟೆರ್ಮೈಟ್ ದಾಳಿಯಿಂದಾಗಿ ನಾಶವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಹೇಳಿದ್ದರು.

ಸಿಂಘ್ವಿ ರವರು ತಾನು ಮೂರು ಹಣಕಾಸಿನ ವರ್ಷಗಳಲ್ಲಿ ಐದು ಕೋಟಿ ಮೌಲ್ಯದ ಲ್ಯಾಪ್ಟಾಪ್ ಗಳನ್ನು ಖರೀದಿ ಮಾಡಿದ್ದೇನೆಂದು ತೋರಿಸಿದ ದಾಖಲೆಯನ್ನು ಆದಾಯ ತೆರಿಗೆ ಇಲಾಖೆ ಮತ್ತು ಸೆಟಲ್ಮೆಂಟ್ ಕಮಿಷನ್ ಪ್ರಶ್ನೆ ಮಾಡಿದೆ ಮತ್ತು ಇದನ್ನು ಕಾಂಟೆಸ್ಟ್ ಮಾಡಿದೆ.

ಇಷ್ಟೇಅಲ್ಲದೆ ತಮ್ಮ ಸಂಸ್ಥೆಯಾದ ‘ರಿಷಬ್ ಎಂಟರ್ಪ್ರೈಸಸ್’ ಸಂಸ್ಥೆಗೆ 35 .98 ಕೋಟಿ ಮೌಲ್ಯದ ಸೋಲಾರ್ ಪ್ಯಾನೆಲ್ಗಳನ್ನು ಖರೀದಿ ಮಾಡಿದ್ದೇನೆಂದು ಆದಾಯ ತೆರಿಗೆಗೆ ಸಲ್ಲಿಸಿದ ದಾಖಲೆಯಲ್ಲಿದೆ. ತೆರಿಗೆ ವಂಚನೆಗೋಸ್ಕರ ಸೋಲಾರ್ ಪ್ಯಾನೆಲ್ಗಳ ಬೆಲೆಯನ್ನು ಅದರ ಅಸಲೀ ಮೌಲ್ಯಕ್ಕಿಂತ ಹೆಚ್ಚಾಗಿ ತೋರಿಸಿದ್ದಾರೆಂದು ಆದಾಯ ತೆರಿಗೆ ಅಧಿಕಾರಿಗಳು ಆರೋಪಿಸಿದ್ದಾರೆ. ಸೋಲಾರ್ ಪ್ಯಾನೆಲ್ ಗಳನ್ನು ಖರೀದಿ ಮಾಡಿದ ಸಂಸ್ಥೆಯು ತನ್ನ ಖಾತೆಗೆ ಕೇವಲ 21 .39 ಕೋಟಿ ಹಣ ಪಾವತಿಯಾಗಿದೆಯೆಂದು ದಾಖಲೆ ಸಲ್ಲಿಸಿದೆ.

ಇಷ್ಟೇ ಅಲ್ಲದೆ ಸೋಲಾರ್ ಪ್ಯಾನೆಲ್ ಸಂಸ್ಥೆಯ ಮಾಲೀಕರು ಪ್ಯಾನೆಲ್ ಖರೀದಿಯಲ್ಲಿ ಅಂಕಿ-ಅಂಶಗಳನ್ನು ಅದರ ಮೌಲ್ಯಕ್ಕಿಂತಾ ಹೆಚ್ಚಾಗಿ ತೋರಿಸಿದೆ ಎಂದು ಲಿಖಿತ ರೂಪದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಗೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ಚೆಕ್ ಮೂಲಕ ಪಾವತಿಮಾಡಲಾದ ವ್ಯವಹಾರಗಳಿಗೂ ಆದಾಯ ತೆರಿಗೆ ಇಲಾಖೆ ಮತ್ತು ಸೆಟಲ್ಮೆಂಟ್ ಕಮಿಷನ್ ಪ್ರಶ್ನೆ ಮಾಡಿದೆ. ಸುಮಾರು 10 .97 ಕೋಟಿ ಯಷ್ಟು ಪಾವತಿ ಮಾಡಿದ ೯೧ ಸಂಸ್ಥೆ/ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟೀಸು ಕಳಿಸಿದಾಗ; ಅದರಲ್ಲಿ 37 ನೋಟೀಸುಗಳು ವಾಪಸ್ ಬಂದಿದ್ದವು.

ನ್ಯಾಷನಲ್ ಹೆರಾಲ್ಡ್ ನಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪರ ವಾದ ಮಾಡುತ್ತಿರುವ ಸಿಂಘ್ವಿ ಮತ್ತು ದೇಶದ ಶ್ರೇಷ್ಠ ನ್ಯಾಯವಾದಿಗಳಾಗಿರುವ ಸಿಂಘ್ವಿ ರವರು ‘ಆದಾಯ ತೆರಿಗೆ ಸುಳಿಯಲ್ಲಿ’ ಸಿಕ್ಕಿಹಾಕೊಂಡಿದ್ದಾರೆ.