ರಸ್ತೆ ಸಂಚಾರ ನಿಯಮಕ್ಕೆ ಮೋದಿ ಸರ್ಕಾರದಿಂದ ಸರ್ಜಿಕಲ್ ಸ್ಟ್ರೈಕ್!!!

0
3045

 

ಮನೆಯಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲದಿದ್ದರು ಅದನ್ನು ಖರಿದಿಸಿ ರಸ್ತೆ ಪುಟ್ ಪಾತ್ ನಲ್ಲಿ ನಿಲ್ಲಿಸುವ ಜನಕ್ಕೆ ಕೇಲವೇ ದಿನಗಳಲ್ಲಿ ಶಾಕಿಂಗ್ ನ್ಯೂಸ್ ಕಾದಿದೆ.

ಈ ನಡುವೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೆ ಕೇಂದ್ರ ಸರ್ಕಾರ ಹೊಸದೊಂದು ನಿಯಮ ತರಲು ರೂಪಿಸಿದೆ.

ಕಾರು ಪಾರ್ಕಿಂಗ್ ಮಾಡಲು ಜಾಗ ಲಭ್ಯವಿದೆ ಎಂಬುದನ್ನು  ಸ್ಥಳೀಯ ಸಂಸ್ಥೆಗಳಿಗೆ ಪ್ರಮಾಣ ಪತ್ರವನ್ನು ಪ್ರಸ್ತುತ ಬಳಿಕವೇ ಹೊಸ ಕಾರು ಕೊಳ್ಳುವುದಕ್ಕೆ ಅನುಮತಿಯನ್ನು ನೀಡುವುದು ಎಂದು ಸರ್ಕಾರ ಚಿಂತಿಸುತ್ತಿದೆ. ಇಂತಹದೊಂದು ನಿಯಮ ತರುವ ಸುಳಿವು ನೀಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ರಸ್ತೆಗಳನ್ನ ದಟ್ಟನೆ ಯಿಂದ ಮುಕ್ತ ಗೋಳಿಸುವ ಸಲುವಾಗಿ ಜಾಗದ ಸಲುವಾಗಿ ಪ್ರಮಾಣ ಪತ್ರ  ಸಲ್ಲಿಸಿದರಷ್ಟೆ ನೊಂದಣಿಗೆ ಅವಕಾಶವನ್ನ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ

ಈ ಸಂಬಂಧ ನಗರ ಸಚಿವಾಯ ಮತ್ತು ಭೂ ಸಾರಿಗೆ ಸಚಿವಾಯಗಳನಡುವೆ ಮಾತುಕತೆ ನಡೆಸುತ್ತಿದೆ.

ಗಮನಾರ್ಹ ಬೆಳವಣಿಗೆಯೊಂದರಲ್ಲಿ ಕ್ರಾಂತಿಕಾರಿ ಪ್ರಸ್ತಾಪವೊಂದನ್ನು ಮುಂದಿಟ್ಟಿರುವ ಕೇಂದ್ರ ಸರಕಾರವು, ವಾಹನ ನಿಲುಗಡೆ ಜಾಗವಿದ್ದಲ್ಲಿ ಮಾತ್ರ ಕಾರು ಮತ್ತು ಬೈಕ್ ಕೊಳ್ಳಲು ಅವಕಾಶ ನೀಡುವ ವಿನೂತನ ಕಾಯ್ದೆ ರೂಪಿಸಲು ಹೊರಟಿದೆ.

 

ಕೇಂದ್ರ ಸರಕಾರ ಹೊರಡಿಸಿರುವ ಪ್ರಸ್ತಾವನೆಯಲ್ಲಿ ಹೊಸತಾಗಿ ಕಾರು ಅಥವಾ ಬೈಕ್ ಖರೀದಿಸುವ ಗ್ರಾಹಕರು, ಅಧಿಕಾರಿಗಳಿಗೆ ವಾಹನ ನಿಲುಗಡೆ ಮಾಡಲು ಹೊಂದಿರುವ ಸ್ಥಳದ ಪುರಾವೆಯನ್ನು ತೋರಿಸಬೇಕಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಮಾರಾಟದಲ್ಲಿ ಗಣನೀಯವಾದ ವರ್ಧನೆಯುಂಟಾಗುತ್ತಿದೆ. ಇನ್ನೊಂದೆಡೆ ದೇಶದ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಪ್ರದೇಶದ ಅಭಾವ ಎದುರಾಗುತ್ತಿದೆ.

 

2015 ಮಾರ್ಚ್ ವೇಳೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 26 ಲಕ್ಷಕ್ಕೂ ಹೆಚ್ಚು ಕಾರುಗಳು ನೆಲೆಗೊಂಡಿದೆ. ಇದು ದೇಶದ ಇತರೆಲ್ಲ ನಗರಗಿಂತಲೂ ಅತ್ಯಧಿಕವಾಗಿದೆ.

ಭವಿಷ್ಯದಲ್ಲಿ ಶೌಚಾಲಯವಿಲ್ಲದೆ ಯಾವುದೇ ಕಟ್ಟಡ ನಿರ್ಮಾಣಕ್ಕೂ ಆಸ್ಪದ ಕೊಡಲಾಗುವುದಿಲ್ಲ. ಅದೇ ರೀತಿ ಸಾಕಷ್ಟು ಪಾರ್ಕಿಂಗ್ ಪ್ರದೇಶ ಲಭ್ಯತಾ ಪ್ರಮಾಣಪತ್ರವಿಲ್ಲದೆ ಕಾರು ಅಥವಾ ಬೈಕ್ ಗಳ ನೊಂದಣಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಈ ಸಂಬಂಧ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಮಾತುಕತೆ ನಡೆಸಲಿರುವ ವೆಂಕಯ್ಯ ನಾಯ್ಡು ನಗರ ಪ್ರದೇಶಗಳ ಸೂಕ್ಷ್ಮತೆಯ ಬಗ್ಗೆ ಪರಿಶೋಧನೆ ನಡೆಸಲಿದ್ದು, ದಿಟ್ಟ ಹೆಜ್ಜೆಯನ್ನಿಡಲಿದ್ದಾರೆ.

 

ಈ ಮಹತ್ತರ ಯೋಜನೆಯನ್ನು ವಾಹನ ತಜ್ಞರು ಸ್ವಾಗತಿಸಿದರೂ ಸಹ ಅನೇಕ ಸವಾಲುಗಳು ಎದುರಾಗಲಿದೆ ಎಂದು ಅಸಮದಾನ ತೋರಿಸಿದ್ದಾರೆ. ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) 2016ರಲ್ಲಿ ರಸ್ತೆ ಸುರಕ್ಷತೆಯಲ್ಲಿ ಸುಧಾರಣೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದಕ್ಕೆ ಸಂಸದೀಯ ಅಂಗೀಕಾರ ದೊರಕಬೇಕಾಗಿದೆ.

 

ಹಾಗಿದ್ದರೂ ಪಾರ್ಕಿಂಗ್ ನಿಯಮ ಜಾರಿಗೆ ತರುವುದು ಅಷ್ಟೊಂದು ಸುಲಭದ ವಿಚಾರವಲ್ಲ. ಯಾಕೆಂದರೆ ದೆಹಲಿ ಜನಸಂಖ್ಯೆಯ ಮೂರರಲ್ಲಿ ಒಂದಂಶವು ಅನಧಿಕೃತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ರಸ್ತೆ ಸಂಚಾರಕ್ಕೆ ಇದು ಮೋದಿ ಸರ್ಕಾರದ ಸುರ್ಜಿಕಲ್ ಸ್ಟ್ರೈಕ್ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ …

 

ನಿಮಗೆ ಏನು ಅನ್ಸುತ್ತೆ, ಇದು ಒಳ್ಳೆದಾ ಅಥವಾ ಸರ್ಕಾರ ಜನರಿಗೆ ಸುಖಾ ಸುಮ್ಮನೆ ನಿರ್ಬಂಧ ಹೇರುತ್ತಿದೆ ಅನ್ಸುತ್ತಾ ..ಕಾಮೆಂಟ್ ಮಾಡಿ ಹೇಳಿ