ರಸ್ತೆ ಟೋಲ್ ದುಡ್ಡು ಕೊಡದೆ ಸಂಚರಿಸಿ… ನಾಳೆವರೆಗೂ ಮಾತ್ರ ಈ ಆಫರ್….

0
739

ಪೆಟ್ರೋಲ್ ಪಂಪ್, ಟೋಲ್ ಗೇಟ್, ಬಸ್ಸುಗಳ ನಿರ್ವಾಹಕರು, ಮಾರುಕಟ್ಟೆಗಳು ಸಹಿತ ದೇಶದ ವಿವಿಧಡೆ 500 ಹಾಗೂ 1000 ರೂ. ನೋಟುಗಳಿಗೆ ಚಿಲ್ಲರೆ ನೀಡುತ್ತಿಲ್ಲ. ಇನ್ನೂ ಕೆಲವೆಡೆ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಈ ಕಾರಣದಿಂದ ಕಿ.ಲೋ. ದೂರದ ತನಕ ವಾಹನಗಳು ಕ್ಯೂನಲ್ಲಿ ನಿಂತಿವೆ…

ಮೋದಿ ತೆಡೆದುಕೊಂಡಿರುವ ತೀರ್ಮಾನದಿಂದ 500,1000 ರೂ. ಮುಖಬೆಲೆ ನೋಟುಗಳ ರದ್ದತಿಯಿಂದ ದೇಶದ ಹೆದ್ದಾರಿ ಸುಂಕದ ಕಟ್ಟೆಗಳಲ್ಲಿ ಬುಧವಾರ ಉಂಟಾಗಿದ್ದ ಸಂಘರ್ಷದ ವಾತಾವರಣದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಕ್ತ ಸಂಚಾರದಿಂದ ಸಂಸ್ಥೆಗಳಿಗೆ ಉಂಟಾಗುವ ನಷ್ಟವನ್ನು ಸರಕಾರವೇ ತುಂಬಿಕೊಡಲಿದೆ. ಶನಿವಾರದ ಹೊತ್ತಿಗೆ ಜನರ ಬಳಿ ಸಾಕಷ್ಟು ಹಣ ಸೇರುವುದರಿಂದ ಸುಂಕ ಪಾವತಿಗೆ ಸಮಸ್ಯೆಯಾಗದು ಎಂದು ಗಡ್ಕರಿ ತಿಳಿಸಿದರು.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿನ ಅತ್ತಿಬೆಲೆ ಟೋಲ್‌ಗೇಟ್‌ನಲ್ಲಿ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಚಿಲ್ಲರೆ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆದಿದೆ. ಸಾರ್ವಜನಿಕರಿಗೆ ಚಿಲ್ಲರೆ ಕಾಸು ನೀಡಲು ಸಾಧ್ಯವಾಗದೇ ಪರದಾಟ ನಡೆಸುತ್ತಿದ್ದಾರೆ. 500 ಮತ್ತು ಸಾವಿರ ರೂ.ಗಳ ನೋಟ್ ಬ್ಯಾನ್‌ಗೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಕ್ರವಾರ ಮಧ್ಯರಾತ್ರಿವರೆಗೆ ವಾಹನ ಸವಾರರು ಸುಂಕ ಪಾವತಿಸುವ ರಗಳೆಯಿಲ್ಲದೇ ಮಕ್ತವಾಗಿ ಸಂಚರಿಸಬಹುದಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಹೆದ್ದಾರಿಗಳ ಸುಂಕದ ಕಟ್ಟೆಗಳಲ್ಲಿ ನ.10ರವರೆಗೆ 500, 1000 ನೋಟುಗಳನ್ನು ಸ್ವೀಕರಿಸಲು ಸರಕಾರ ಅವಕಾಶ ನೀಡಿತ್ತು. ಆದರೆ, ಬುಧವಾರ ಎಲ್ಲ ವಾಹಗಳ ಪ್ರಯಾಣಿಕರೂ 500, 1000 ನೋಟುಗಳನ್ನೇ ನೀಡಿದ್ದರಿಂದ ಚಿಲ್ಲರೆ ನೀಡಲಾಗದೇ, ಜನರು ಮತ್ತು ಟೋಲ್‌ ಸಿಬ್ಬಂದಿ ನಡುವೆ ಗಲಾಟೆ ಆರಂಭಗೊಂಡಿತ್ತು. ಇದರಿಂದ ಸಂಚಾರ ದಟ್ಟಣೆಯೂ ಹೆಚ್ಚಿತ್ತು. ಈ ಸಂಬಂಧ ಟೋಲ್‌ಗೇಟ್‌ಗಳನ್ನು ನಿರ್ವಹಿಸುವ ಬಿಒಟಿ, ಒಎಂಟಿ ನಿರ್ವಾಹಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಬಸ್‌ನ ಸಿಬ್ಬಂದಿ-ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ಜಗಳವಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲೂ ಚಿಲ್ಲರೆ ಸಮಸ್ಯೆಯಿಂದಾಗಿ ವ್ಯಾಪಾರಿಗಳು ಪರದಾಟ ನಡೆಸುತ್ತಿದ್ದಾರೆ.