ರಾಜಕಾಲುವೆ ಒತ್ತುವರಿ ತೆರವು: ಹುತಾತ್ಮ ಯೋಧ ನಿರಂಜನ್ ಮನೆ ಕೂಡ ತೆರವು!

0
1042

ಬೆಂಗಳೂರು: ಪಠಾಣ್‌ಕೋಟ್‌ ದಾಳಿ ಯಲ್ಲಿ ಸಾವನ್ನಪ್ಪಿದ್ದ ಲೆಫ್ಟಿನೆಂಟ್‌ ಕರ್ನಲ್‌ ನಿರಂಜನ್‌ ಕುಮಾರ್‌ ಅವರ ಮನೆಗೆ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಗುರುತು ಹಾಕಿದ್ದಾರೆ. ಇಂದು ತೆರವು ಮಾಡಲಾಗುತ್ತದೆ

ದೊಡ್ಡ ಬೊಮ್ಮಸಂದ್ರದ ಸುಬ್ಬಣ್ಣ ಬಡಾವಣೆಯಲ್ಲಿರುವ ನಿರಂಜನ್‌ ಅವರ ಮನೆ ರಾಜಕಾಲುವೆಗೆ ಹೊಂದಿಕೊಂಡಿದೆ. ಮುಖ್ಯಗೇಟ್‌ನಿಂದ ಮನೆಯ ಮುಂದಿನ ಪಿಲ್ಲರ್‌ಗಳವರೆಗೆ ಗುರುತು ಮಾಡಲಾಗಿದೆ. ಮನೆಯಲ್ಲಿ ನಿರಂಜನ್‌ ಅವರ ತಾಯಿ ರಾಧಾ ವಾಸವಿದ್ದು, ಅಧಿಕಾರಿಗಳು ಮನೆಗೆ ಗುರುತು ಮಾಡುವುದನ್ನು ಗಮನಿಸುತ್ತಿದ್ದ ದೃಶ್ಯ ಕಂಡುಬಂತು. ಇಂದು ತೆರವು ಮಾಡಲಾಗುತ್ತದೆ

ದೊಡ್ಡ ಬೊಮ್ಮಸಂದ್ರದ ಸುಬ್ಬಣ್ಣ ಬಡಾವಣೆಯಲ್ಲಿರುವ ನಿರಂಜನ್ ಅವರ ಮನೆ ರಾಜಕಾಲುವೆಗೆ ಹೊಂದಿಕೊಂಡಿದೆ. ಮುಖ್ಯ ಗೇಟಿನಿಂದ ಮನೆಯ ಮುಂದಿನ ಕಂಬಗಳವರೆಗೆ ಗುರುತು ಮಾಡಲಾಗಿದ್ದು, ಇಂದು ತೆರವು ಮಾಡಲಾಗುತ್ತದೆ

ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ಮನೆಗಳಲ್ಲಿ ಬಾಡಿಗೆಗೆ ಇದ್ದವರು ಮನೆ ಖಾಲಿ ಮಾಡಿಕೊಂಡು ಬೇರೆಡೆ ಹೋಗುತ್ತಿದ್ದಾರೆ. ಜೀವನೋಪಾಯಕ್ಕಾಗಿ ಅಂಗಡಿ ಹೊಂದಿದ್ದವರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹುತಾತ್ಮ ಯೋಧ ನಿರಂಜನ್‍ ಅವರ ಮನೆ ತೆರವು ವಿಚಾರವಾಗಿ ಮಾತನಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ, ಕಾನೂನು ಎಲ್ಲರಿಗೂ ಒಂದೇ. ಒತ್ತುವರಿಯಾಗಿದ್ದರೆ ತೆರವು ಮಾಡುತ್ತೇವೆ. ನಿರಂಜನ್‍ ಮನೆಯಿಂದ ಜಾಗ ಒತ್ತುವರಿಯಾಗಿದ್ದರೆ ತೆರವು ಅನಿವಾರ್ಯ ಎಂದಿದ್ದಾರೆ.