‘ರಾಜ್ ಲೀಲಾ ವಿನೋದ’ viral ಆಗ್ತಿದೆ…

0
3678

ರವಿ ಬೆಳಗೇರಿಯವರ ‘ರಾಜ್ ಲೀಲಾ ವಿನೋದ’

ವಿಷ್ಯ ವೈರಲ್ ಆಗ್ತಿದೆ, ಹಳೆಯ ಕತೆ ಈಗ ಯಾರು ಕೆಣಕುತ್ತಿರುವವರು ಅಂತ ನಿಮಗೆ ಅನ್ನಿಸಬಹುದು, ಅವರೇ ಪತ್ರಕರ್ತ-ಲೇಖಕ ರವಿ ಬೆಳಗೆರೆ. ನಟಿ ಲೀಲಾವತಿಯವರ ಜೀವನಚರಿತ್ರೆಯಾಗಿದೆ, ರಾಜಕುಮಾರ್ ಅವರ ಬಗ್ಗೆ ನಿಜವಾದ ಅಭಿಮಾನ ಇಟ್ಟುಕೊಂಡು ಬದುಕುತ್ತಿರುವ ಶ್ರೀಮತಿ ಲೀಲಾವತಿ ಅವರ ಜೀವನ ಚರಿತ್ರೆಯನ್ನ ಬರೆದಿದ್ದೀನಿ… ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಪುಸ್ತಕದ ಬಗ್ಗೆ ನಿರ್ಣಯ ತೆಗೆದುಕೊಳ್ಳಿ ಹಾಗೇ ಈ ಪುಸ್ತಕದಲ್ಲಿ ರಾಜಕುಮಾರ್ ರವರನ್ನು ನೋವಿಸಿಲ್ಲ” ಎಂದರು ಪತ್ರಕರ್ತ-ಲೇಖಕ ರವಿ ಬೆಳಗೆರೆ.

 

ಹಾಯ್ ಬೆಂಗಳೂರ್ ವಾರಪತ್ರಿಕೆ ಆರಂಭವಾದ ಎರಡ್ಮೂರು ವರ್ಷ ಆಗಿತ್ತು. ಅದೊಮ್ಮೆ ನಾನೊಬ್ಬನೇ ಡ್ರೈವ್ ಮಾಡಿಕೊಂಡು ಹೋಗುವಾಗ ಶಿರಾ ರಸ್ತೆಯ ಹೋಟೆಲ್ ವೊಂದರಲ್ಲಿ ತಿಂಡಿ ತಿನ್ನೋಕೆ ನಿಲ್ಲಿಸಿದೆ. ಅಲ್ಲಿ ಹೊರಗಡೆ ಲೀಲಾವತಿ ಹಾಗೂ ವಿನೋದ್ ರಾಜ್ ಇದ್ದರು. ಅವರ ಜೊತೆಗಿದ್ದ ನಾಯಿಯನ್ನು ಒಳಗೆ ಬಿಡೋದಿಲ್ಲ ಅನ್ನೋ ಕಾರಣಕ್ಕೆ ಅಲ್ಲಿ ಕೂತಿದ್ದರು, ಅಂದು ಅವರ ಜೊತೆಗೆ ಮಾತನಾಡುವಾಗ ಜೀವನಚರಿತ್ರೆ ಬರೆಯುವ ಪ್ರಸ್ತಾಪವನ್ನು ಮೊದಲ ಬಾರಿಗೆ ಮಾಡಿದ್ದೆ. ಆಗಿಂದ ಎಷ್ಟೋ ಸಲ ಕೇಳಿದ್ದೇನೆ.

14241411_532186540310586_2681091238634608471_o

“ಹಲವು ಸಭೆ-ಸಮಾರಂಭಗಳಲ್ಲಿ ನಟಿ ಲೀಲಾವತಿಯವರನ್ನು ವಿನಂತಿ ಮಾಡಿದ್ದೆ, ಅವರೀಗ ಮನಸ್ಸು ಮಾಡಿದರು ಅಷ್ಟೆ. ಈ ಮಧ್ಯೆ ನಾನೂ ಕೆಲ ದಿನ ಕಾಯಿಲೆ ಬಿದ್ದಿದ್ದೆ. ಆದ್ದರಿಂದ ಬರವಣಿಗೆ ಸಾಗಲಿಲ್ಲ. ಲೀಲಾವತಿ ಅವರಿಗೀಗ ಎಪ್ಪತ್ತರ ಮೇಲೆ ವಯಸ್ಸಾಗಿದೆ. ವಯೋ ಸಹಜವಾಗಿ ಮರೆವಾಗಬಹುದು ಎಂಬ ಆತಂಕ ಅವರದು. ಆದ್ದರಿಂದ ಅವರಾಗಿಯೇ ತಮ್ಮ ಬದುಕಿನ ಬಗ್ಗೆ ಹೇಳೋಕೆ ನಿರ್ಧರಿಸಿದ್ದಾರೆ.

ban45

‘ರಾಜ್ ಲೀಲಾ ವಿನೋದ’ ಶ್ರೀಮತಿ ಲೀಲಾವತಿ ಅವರ ಅಧಿಕೃತವಾದ ಜೀವನ ಚರಿತ್ರೆ. ಎಲ್ಲೂ ಹೇಳಿಕೊಳ್ಳದ ಎಷ್ಟೋ ರಹಸ್ಯಗಳನ್ನು ಹೇಳಿಕೊಂಡಿದ್ದಾರೆ. ರಾಜಕುಮಾರ್ ಹಾಗೂ ಲೀಲಾವತಿ ಅವರ ಮಧ್ಯೆ ಇರುವ ಸಂಬಂಧದ ಬಗ್ಗೆಯೇ ಈ ಪುಸ್ತಕದಲ್ಲಿ ಪ್ರಮುಖ ಭಾಗವಿರುತ್ತದೆ” ಎಂದು ಬೆಳಗೆರೆ ಹೇಳಿದರು.

1454217625802

ಲೀಲಾವತಿ ಅವರಿಗೆ ತೀರಾ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿರುತ್ತಾರೆ. ಹಣಕ್ಕೂ ಸಮಸ್ಯೆ ಇರುತ್ತೆ. ಅಗ ಬಿ.ಆರ್.ಪಂತಲು ಮೂಲಕ “ಅವರು” ಏಳುನೂರಾ ಐವತ್ತು ರುಪಾಯಿ ಕೊಡ್ತಾರೆ. ಅಕೆಗಾಗಿ ಇಡೀ ಜೀವನದಲ್ಲಿ ಅವರು ನೀಡಿದ್ದು ಅಷ್ಟು ಮಾತ್ರ. ಇಂಥ ಹಲವು ಸಂಗತಿಗಳು, ಬರೆದ ಪತ್ರಗಳು, ಫೋಟೋಗ್ರಾಫ್ ಗಳು ಪುಸ್ತಕದಲ್ಲಿ ಇರುತ್ತವೆ.

14231968_886703534766856_1553932995413953665_o

ಹಾಯ್ ಬೆಂಗಳೂರ್ ವಾರಪತ್ರಿಕೆಯ ವಾರ್ಷಿಕೋತ್ಸವಕ್ಕೆ ಈ ಪುಸ್ತಕದ ಬಿಡುಗಡೆ ಎಂದು ಅವರಾಗಲೇ ಬರೆದುಕೊಂಡಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಅದು ಅಕ್ಟೋಬರ್ ಗೆ ಮುಂದೆ ಹೋಗಿದೆ. ಅದಕ್ಕೆ ಕೋರ್ಟ್ ಕಾರಣಗಳೇನೂ ಇಲ್ಲ. ಈಗಾಗಲೇ ಕೋರ್ಟ್ ನಿಂದ ಕೇವಿಯಟ್ ತಗೊಂಡು ಆಗಿದೆ. ಅದ್ದರಿಂದ ಯಾರೂ ಸ್ಟೇ ತರುವುದಿಕ್ಕೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನನ್ನ ಮೂವತ್ತು ವರ್ಷದ ಪತ್ರಿಕೋದ್ಯಮದಲ್ಲಿ ತುಂಬ ಪುಸ್ತಕಗಳನ್ನ ಬರೆದಿದ್ದೀನಿ. ಪತ್ರಿಕೆಗಳಲ್ಲಿ ಬರೀತಾನೇ ಇದೀನಿ. ಐ ಡೋಂಟ್ ಸೇ ಐಯಾಮ್ ಎ ಬೋಲ್ಡ್ ಮ್ಯಾನ್, ಬಟ್ ಐ ಕ್ಯಾನ್ ಫೇಸ್ ಎನಿಥಿಂಗ್.

source : oneindia