ದೈನಂದಿನ ರಾಶಿಫಲ: ಯಾರಿಗೆ ಲಾಭ, ನಷ್ಟ

0
1235

ಜುಲೈ 18

ದೈನಂದಿನ ರಾಶಿಫಲ: ಯಾರಿಗೆ ಲಾಭ, ನಷ್ಟ

Mesha

ಮೇಷ :: ಈ ದಿನವು ನಿಮಗೆ ಮಿಶ್ರ ಫಲವನ್ನು ನೀಡುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ದೈಹಿಕವಾಗಿ ಅಸ್ವಸ್ಥರಾಗಿರಬಹುದು ಮತ್ತು ಆತಂಕದಿಂದ ಕೂಡಿರಬಹುದು. ಅವಿಶ್ರಾಂತಿ, ಆಯಾಸ ಮತ್ತು ಆಲಸ್ಯವು ನಿಮ್ಮನ್ನು ಬಾಧಿಸಬಹುದು. ದಿನವಿಡೀ ನೀವು ದುರಾಕ್ರಮಣ ಪ್ರವೃತ್ತಿಯನ್ನು ಹೊಂದಿರುವಿರಿ. ಇದು ನಿಮ್ಮ ಕಾರ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ನಿಮ್ಮ ಮಾರ್ಗದಲ್ಲಿ ಪ್ರಾಮಾಣಿಕರಾಗಿರಲು ಪ್ರಯತ್ನಿಸಿ. ನೀವು ಯೋಜಿತ ಕಾರ್ಯವನ್ನು ಕೈಗೆತ್ತಿಕೊಳ್ಳುವಿರಿ. ಯಾತ್ರಾಸ್ಥಳಕ್ಕೆ ತೆರಳುವಿರಿ. ಯಾವುದೇ ಕೆಲಸ ಮಾಡುವಾಗಲೂ ನೀವು ಹಠಮಾರಿತನದಿಂದ ಕೂಡಿರುತ್ತೀರಿ.

400x400_MIMAGE28ed18d16e36ea9970c7cc1b1e6d5b18

ವೃಷಭ :: ಈ ದಿನ ಎಚ್ಚರಿಕೆ ಪದ ನಿಮಗೆ ಸೂಕ್ತವಾಗಿದೆ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಇಂದು ನೀವು ನೂರು ಪ್ರತಿಶತ ಸುಸ್ಥಿತಿಯಲ್ಲಿರುವುದಿಲ್ಲ. ಆರೋಗ್ಯಕರ ಆಹಾರ ಸೇವಿಸಿ. ಉದ್ವೇಗ, ದೈಹಿಕ ಆಯಾಸವು ನಿಮ್ಮನ್ನು ಕಾಡುತ್ತಿರಬಹುದು. ಕಚೇರಿ ಕೆಲಸವು ನಿಮಗೆ ದಣಿವು ನೀಡಬಹುದು. ಪ್ರಯಾಣವು ಫಲಕಾರಿಯಾಗಿರುತ್ತದೆ. ಸಾಧ್ಯವಿದ್ದರೆ, ಸಾಕಷ್ಟು ಸಮಯವನ್ನು ಆಧ್ಯಾತ್ಮದಲ್ಲಿ ಕಳೆಯಲು ಪ್ರಯತ್ನಿಸಿ.

400x400_MIMAGEa143e67819b34e4ffc529e1862274dec

ಮಿಥುನ :: ಲೈಂಗಿಕ ಆಕಾಂಕ್ಷೆಗಳು ಇಂದು ಈಡೇರಲಿವೆ ಮತ್ತು ಸಂತೋಷದ ದಿನವು ನಿಮ್ಮದಾಗಲಿದೆ. ಇಂದು ನೀವು ವಿವಿಧ ರೀತಿಯ ಜನರನ್ನು ಭೇಟಿ ಮಾಡಲಿದ್ದೀರಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹರ್ಷಭರಿತ ಪ್ರವಾಸ ತೆರಳಬಹುದು.ಹೊಸ ಬಟ್ಟೆಗಳ ಖರೀದಿಗಾಗಿ ಶಾಪಿಂಗ್ ಹೋಗುವಿರಿ. ಪ್ರಣಯದೇವತೆಯ ಪ್ರೀತಿಯ ಬಾಣವು ಗಾಳಿಯಲ್ಲಿರುವುದರಿಂದ ನಿಮ್ಮನ್ನು ನೀವು ಬೆಂಬಲಿಸುವ ಸಮಯ. ನಿಮ್ಮ ದೈಹಿತ ಆರೋಗ್ಯ, ಸಾಮಾಜಿಕ ಗೌರವ ಮತ್ತು ಕೀರ್ತಿ ದೂರದವರೆಗೆ ಹಬ್ಬಲಿದೆ. ನಿಮ್ಮ ಸಂಗಾತಿಯೊಂದಿಗಿನ ದೈಹಿಕ ಅನ್ಯೋನ್ಯತೆಯು ಅದ್ಭುತವಾಗಿರುತ್ತದೆ. ಗಣೇಶನ ಆಶೀರ್ವಾದವು ದಿನವಿಡೀ ನಿಮ್ಮೊಂದಿಗಿರುತ್ತದೆ.

400x400_MIMAGE698903ad8ea2539fe8f1665d2bd0288a

ಕರ್ಕಾಟಕ :: ಈ ದಿನವು ನಿಮಗೆ ಉತ್ತಮ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕುಟುಂಬದ ವಾತಾವರಣವು ಶಾಂತಿ ಹಾಗೂ ಉತ್ಸಾಹದಿಂದ ಇರಲಿದೆ. ಕೆಲವು ಸಂಭ್ರಮದ ಕ್ಷಣಗಳನ್ನು ಆನಂದಿಸುವಿರಿ. ಇಂದು ನೀವು ಪೂರ್ಣಗೊಳಿಸುವ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ದೈಹಿಕವಾಗಿ ಇಂದು ನೀವು ಆರೋಗ್ಯದಿಂದಿರುತ್ತೀರಿ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸೇವೆಯಲ್ಲಿರುವವರ ದಿನವು ಇಂದು ಫಲಪ್ರದವಾಗಿರುತ್ತದೆ. ಸಹೋದ್ಯೋಗಿಗಳಿಂದ ಪ್ರಯೋಜನ ಪಡೆಯುವಿರಿ. ಮಹಿಳಾ ಸ್ನೇಹಿತರ ಭೇಟಿಯು ನಿಮಗೆ ಸಂತಸವನ್ನು ತರಲಿದೆ. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳುವರು.

400x400_MIMAGE6fa749964e5cf585da5635991abdcb92

ಸಿಂಹ :: ನೀವು ನಿಮ್ಮ ದಿನವನ್ನು ಸಂತೋಷದಿಂದ ಕಳೆಯುವಿರಿ. ನಿಮ್ಮ ಪ್ರತಿಭೆಯ ಸಾಮರ್ಥ್ಯವು ವೃದ್ಧಿಸಲಿದೆ. ನಿಸರ್ಗ ಮತ್ತು ಅದರ ಸೃಷ್ಟಿಯ ಕುರಿತಾಗಿ ಕವನ ಬರೆಯುವ ಪ್ರೇರೇಪಣೆಯು ಇನ್ನಷ್ಟು ಹೆಚ್ಚಲಿದೆ. ಪ್ರೀತಿಪಾತ್ರರೊಂದಿಗಿನ ಭೇಟಿಯು ಫಲಪ್ರದವಾಗಿರುತ್ತದೆ ಮತ್ತು ಇದು ನಿಮಗೆ ಸಂತೋಷವನ್ನು ತರುತ್ತದೆ. ನಿಮ್ಮ ಮಕ್ಕಳ ಅಭಿವೃದ್ಧಿಯು ನಿಮಗೆ ಸಂತೋಷದ ಸುದ್ದಿಯನ್ನು ತರಲಿದೆ. ವಿದ್ಯಾರ್ಥಿಗಳು ಅವರ ಅದ್ಯಯನದಲ್ಲಿ ಯಶಸ್ಸು ಸಾಧಿಸಲಿದ್ದಾರೆ. ಸ್ನೇಹಿತರ ಭೇಟಿಯಾಗುವಿರಿ ಮತ್ತು ಸ್ನೇಹಿತೆಯರಿಂದ ಲಾಭ ಸಿಗುವ ಸಾಧ್ಯತೆಯಿದೆ. ದಾನ ಮುಂತಾದ ಚಟುವಟಿಕೆಗಳಲ್ಲಿ ತೊಡೆಗಿಕೊಳ್ಳುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ.

400x400_MIMAGEbe10caab148db629c7c46ed7646a52ea

ಕನ್ಯಾ :: ಈ ದಿನವು ನಿಮಗೆ ಅಷ್ಟೊಂದು ಉತ್ತಮ ದಿನವಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಒತ್ತಡವನ್ನು ಅನುಭವಿಸುವ ಸಾಧ್ಯತೆಯಿದೆ. ಎಲ್ಲಾ ಆಸ್ತಿ ಸಂಬಂಧಿತ ದಾಖಲೆಪತ್ರಗಳನ್ನು ಸುರಕ್ಷಿತ ಸ್ಥಳದಲ್ಲಿಡಿ. ನೀರಿನ ಭಯವು ನಿಮಗೆ ತೊಂದರೆಯನ್ನುಂಟುಮಾಡಬಹುದು. ಮಹಿಳೆಯರೊಂದಿಗಿನ ಸಂವಾದವನ್ನು ತಪ್ಪಿಸಿ. ನಿಮ್ಮ ಅವಮರ್ಯಾದಗೆ ಕಾರಣವಾಗುವಂತಹ ಪರಿಸ್ಥಿತಿಗಳಲ್ಲಿ ತೊಡುಗುವುದನ್ನು ತಪ್ಪಿಸಿ. ಖರ್ಚುವೆಚ್ಚಗಳು ಉಂಟಾಗಬಹುದು.

400x400_MIMAGEfb4c4829d93bd9ac6ba88d9bef39141c

ತುಲಾ :: ಈ ದಿನವು ಅತ್ಯಂತ ಫಲದಾಯಕವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಹೋದರರೊಂದಿಗಿನ ಸಂಬಂಧವು ಅನ್ಯೋನ್ಯವಾಗಿರುತ್ತದೆ. ಅವರು ನಿಮ್ಮೊಂದಿಗೆ ಕೆಲವು ಸಂದೇಹಗಳ ಬಗ್ಗೆ ಚರ್ಚಿಸಬಹುದು. ಯಾತ್ರೆಗೆ ತೆರಳುವ ಸಾಧ್ಯತೆಯಿದೆ. ಹಣಕಾಸು ಲಾಭ ಉಂಟಾಗಲಿದೆ. ವಿದೇಶದಿಂದ ಶುಭಸುದ್ದಿಯನ್ನು ನಿರೀಕ್ಷಿಸಬಹುದು. ಹೊರಪ್ರದೇಶದ ಸಾಮಾಜಿಕ ಸಮಾರಂಭಗಳು ನಡೆಯಬಹುದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ನಿಯಂತ್ರಣದಲ್ಲಿರುತ್ತೀರಿ. ಈ ದಿನವು ಹೂಡಿಕೆದಾರರ ಮುಖದಲ್ಲಿ ನಗುವನ್ನು ತರುತ್ತದೆ. ಮಹಿಳಾ ಅದೃಷ್ಟವು ನಿಮ್ಮ ಕಡೆಗಿದೆ.

400x400_MIMAGE1e8f3b7959caba4148b21f35be354eb8

ವೃಶ್ಚಿಕ :: ಗಣೇಶನ ಪ್ರಕಾರ ನಿಮ್ಮ ಲಾಭವು ದಿನವಿಡೀ ಸಮೃದ್ಧವಾಗಿರಲಿದೆ. ಅನಗತ್ಯ ಖರ್ಚಿನ ಮೇಲೆ ನಿಯಂತ್ರಣವಿರಸಬೇಕು. ನಿಮ್ಮ ಕುಟುಂಬದಲ್ಲಿ ಜಗಳದ ವಾತಾವರಣವನ್ನು ಉಂಟುಮಾಡಬಲ್ಲ ಪರಿಸ್ಥಿತಿಗಳಿಂದ ದೂರಿವಿರ. ನಿಮ್ಮ ಕುಟುಂಬ ಸದಸ್ಯರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸಿ. ದೈಹಿಕ ಆರೋಗ್ಯದಿಂದಾಗಿ ನೀವು ಖಿನ್ನತೆಗೆ ಒಳಗಾಗಬಹುದು. ಋಣಾತ್ಮಕ ಆಲೋಚನೆಯನ್ನು ತಪ್ಪಿಸಿ ಮತ್ತು ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಬೋಧಿಸಿರುವ ಪಠ್ಯಗಳನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಷ್ಟಕರವೆನಿಸಬಹುದು.

400x400_MIMAGEce047f799c1e991de6bb6be4380c7693

ಧನು :: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಯೋಜಿತ ಕಾರ್ಯಗಳನ್ನು ನಿರ್ವಹಿಸುವಲ್ಲಿ ನೀವು ಸಫಲರಾಗುತ್ತೀರಿ. ಹಣಕಾಸು ಲಾಭ ಉಂಟಾಗಲಿದೆ. ಯಾತ್ರಾಸ್ಥಳಕ್ಕೆ ತೆರಳುವಿರಿ. ಸಂಬಂಧಿಕ ಪ್ರದೇಶದಲ್ಲಿ ನೀವು ಶುಭಕರ ಸಮಾರಂಭಗಳಲ್ಲಿ ಭಾಗವಹಿಸಬಹುದು. ನಿಮ್ಮ ಸ್ನೇಹಿತರೊಂದಿಗಿನ ಸ್ನೇಹಕೂಟವು ನಿಮಗೆ ಸಂತೋಷವನ್ನು ತರಬಹುದು. ನಿಮ್ಮ ವೈವಾಹಿಕ ಜೀವನವು ವಿಮಹೆ ಸಂತೋಷ ಮತ್ತು ನೆಮ್ಮದಿಯನ್ನು ತರುತ್ತದೆ. ಇಂದು ನಿಮ್ಮ ವರ್ತನೆಯು ಸ್ಥಿರವಾಗಿರುವ ಸಾಧ್ಯತೆಯಿದೆ. ಸವಿತಿನಿಸುಗಳ ತಯಾರಿಕೆಯಲ್ಲಿ ನೀವು ತೊಡಗಬಹುದು. ಸಾಮಾಜಿಕವಾಗಿ ನಿಮ್ಮ ಹೆಸರು ಮತ್ತು ಖ್ಯಾತಿ ವರ್ಧಿಸಲಿದೆ.

400x400_MIMAGEf85f76260a795f5301b4b772bf89ea69

ಮಕರ :: ಪ್ರತೀ ಹೆಜ್ಜೆಯಲ್ಲೂ ನೀವು ಜಾಗರೂಕರಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ನೀವು ಸಹಾಯವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಖರ್ಚು ಆದಾಯಕ್ಕಿಂತ ಹೆಚ್ಚಾಗಲಿದೆ. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನೀವು ಕ್ರಿಯಾಶೀರಾಗಿರುವಿರಿ ಇದು ನಿಮ್ಮ ಖರ್ಚನ್ನು ವರ್ಧಿಸುತ್ತದೆ. ಆರೋಗ್ಯ ಸಂಬಂಧಿ ಚಿಂತೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಮಗ ಅಥವಾ ಸಂಬಂಧಿಗಳೊಂದಿಗೆ ಸಣ್ಣ ಜಗಳಕ್ಕೆ ಒಳಗಾಗಬಹುದು. ಇಂದು ಯಶಸ್ಸು ಪಡೆಯಬೇಕಾದರೆ ಕಠಿಣ ಶ್ರಮ ಪಡಬೇಕಾಗುತ್ತದೆ. ಆತಂಕವು ನಿಮ್ಮನ್ನು ತೊಂದರೆಗೀಡುಮಾಡಬಹುದು.ಅಪಘಾತದ ಸಂಭಾವ್ಯತೆಯಿದೆ. ಎಚ್ಚರಿದಿಂದಿರಿ.

400x400_MIMAGE5bfd1bc35a806aecf0e42330679dfbf2

ಕುಂಭ :: ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಶುಭಕರ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ವೃತ್ತಿಗೆ ಸಂಬಂಧಿಸಿ(ಸೇವೆ ಮತ್ತು ವ್ಯವಹಾರ) ಇಂದು ನೀವು ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಮಹಿಳಾ ಸ್ನೇಹಿತರು ನಿಮಗೆ ಹೊಸ ಕಾರ್ಯಗಳನ್ನು ನಿಗದಿಪಡಿಸಬಹುದು. ಲಕ್ಷ್ಮೀದೇವಿಯ ಅನುಗ್ರಹವು ಇಂದು ನಿಮಗಿದೆ. ನಿಮ್ಮ ಸಾಮಾಜಿಕ ಕೀರ್ತಿಯು ಧನಾತ್ಮಕ ಉತ್ತೇಜನವನ್ನು ಪಡೆಯಲಿದೆ. ನೀವು ಇಂದು ನಿಮ್ಮ ಮಕ್ಕಳೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತೀರಿ. ನಿಮ್ಮ ಮಕ್ಕಳು ಮತ್ತು ಹೆಂಡತಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸಿ. ವಿವಾಹದ ಆಲೋಚನೆಯಲ್ಲಿರುವವರಿಗೆ ಉತ್ತಮ ದಿನ. ಸಂತೋಷಭರಿತ ಪ್ರವಾಸ ತೆರಳಬಹುದು.

400x400_MIMAGEd3b1d0d49af97eae68d81e2191f2450a

ಮೀನ :: ಈ ದಿನವು ಬಹಳ ಫಲಪ್ರದವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಕೆಲಸದ ಯಶಸ್ವೀ ಪೂರ್ಣಗೊಳಿಸುವಿಕೆ ಮತ್ತು ನಿಮ್ಮ ಮೇಲಾಧಿಕಾರಿಗಳ ಪ್ರಶಂಸೆಯಿಂದಾಗಿ ನೀವು ಉತ್ಸಾಹದಿಂದಿರುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಇಂದು ಉತ್ತಮ ದಿನ. ನೀವು ಸಾಲ ಪಡೆಯುವ ಸಾಧ್ಯತೆಯಿದೆ. ನಿಮ್ಮ ತಂದೆ ಮತ್ತು ಹಿರಿಯರಿಂದ ಪ್ರಯೋಜನ ಉಂಟಾಗಲಿದೆ. ಲಕ್ಷ್ಮೀದೇವಿಯು ನಿಮ್ಮನ್ನು ಹರಸುತ್ತಾಳೆ. ನಿಮ್ಮ ಕುಟುಂಬದ ವಾತಾವರಣವು ಹರ್ಷದಾಯಕವಾಗಿರುತ್ತದೆ. ದೈಹಿಕ ಆರೋಗ್ಯವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಸರಕಾರದಿಂದ ನೀವು ಪ್ರಯೋಜನ ಪಡೆಯುವಿರಿ. ನಿಮ್ಮ ಘನತೆ ಹೆಚ್ಚಲಿದೆ. ನಿಮ್ಮ ಸಾಮಾಜಿಕ ಜೀವನವು ದಿನವಿಡೀ ಹರ್ಷದಾಯಕವಾಗಿರುತ್ತದೆ.