ರಿಯೋ ಪ್ಯಾರಾಲಿಂಪಿಕ್ಸ್:ಭಾರತದಕ್ಕೆ ಡಬಲ್ ಧಮಾಕಾ ಚಿನ್ನ ಮತ್ತು ಕಂಚಿನ ಪದಕ ಸಾಧನೆ

0
1315

ರಿಯೋ ಡಿ ಜನೈರೋ: ರಿಯೋರಿಯೋ ಒಲಿಂಪಿಕ್ಸ್‌ನಲ್ಲಿ  ಭಾರತೀಯ ಅಥ್ಲೀಟ್‌ಗಳು ಚಿನ್ನದ ಪದಕ ಗೆಲ್ಲುವಲ್ಲಿ ವಿಫ‌ಲವಾಗಿದ್ದರೂ  ಅಂಗವಿಕಲರ ಪ್ಯಾರಾಲಿಂಪಿಕ್ಸ್‌ನಲ್ಲಿ  ಭಾರತದ ಹೈಜಂಪ್‌ ಪಟುಗಳಿಬ್ಬರು ಐತಿಹಾಸಿಕ ಸಾಧನೆ ನಿರ್ಮಿಸಿದ್ದು , ಚಿನ್ನ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

2 ನೇ ದಿನದಲ್ಲಿ ಟಿ42 ಹೈಜಂಪ್‌ನಲ್ಲಿ  ಮರಿಯಪ್ಪನ್‌ ತಂಗವೇಲು ಅವರು ಚಿನ್ನದ ಪದಕ ಗೆದ್ದರೆ ,ವರುಣ್‌ ಭಾಟಿ ಅವರು ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದರು.

ತಂಗವೇಲು ಅವರು 1.89 ಮೀಟರ್‌ ಎತ್ತರ ಜಿಗಿದರೆ ವರುಣ್‌  1.86 ಮೀ.ಜಿಗಿದರು , ಅಮೆರಿಕದ ಸ್ಯಾಮ್‌ ಗ್ರೀವ್‌ ಅವರು 1.86 ಮೀ.ಜಿಗಿದು ಬೆಳ್ಳಿ ಪದಕ ಪಡೆದರು.

ಭಾರತದಕ್ಕೆ ಡಬಲ್ ಧಮಾಕಾ… ರಿಯೊ ಪ್ಯಾರಲಿಂಪಿಕ್ಸ್ ನ ಪುರುಷರ ಹೈ ಜಂಪ್ ನಲ್ಲಿ ಮರಿಯಪ್ಪನ್ ತಂಗವೇಲು ಚಿನ್ನ ಗರದ್ದರೆ, ವರುಣ್ ಸಿಂಗ್ ಭಾಟಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಪ್ಯಾರಲಿಂಪಿಕ್ಸ್ ನಲ್ಲಿ 1.89 ಮೀಟರ್ ಜಿಗಿದು ಚಿನ್ನ ಗೆದ್ದ ಮೊದಲ ಭಾರತೀಯ ಹೈಜಂಪರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಮರಿಯಪ್ಪನ್ ಇತಿಹಾಸ ನಿರ್ಮಿಸಿದ್ದಾರೆ.

1.86 ಮೀಟರ್ ಜಿಗಿದ ಭಾಟಿ ಮೂರನೇ ಸ್ಥಾನಕ್ಕೆ ತೃಪ್ತರಾದರು. ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಮತ್ತೋಬ್ಬ ಸ್ಪರ್ದಿ ಶರದ್ ಕುಮಾರ್ ಆರನೇ ಸ್ಥಾನಕ್ಕೆ ಇಳಿದಿದ್ದಾರೆ.

ಪ್ಯಾರಲಿಂಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಭಾರತೀಯರಿಗೆ 75 ಲಕ್ಷ ರೂ., ಬೆಳ್ಳಿ ಪದಕ ಗೆದ್ದವರಿಗೆ 50 ಲಕ್ಷ ರೂ. ಕಂಚಿನ ಪದಕ ಗೆದ್ದವರಿಗೆ 30 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕ್ರೀಡಾ ಸಚಿವಾಲಯ ಈ ಹಿಂದೆ ಘೋಷಿಸಿತ್ತು.