ರಿಲಯನ್ಸ್ Jio ಹೇಗೆ ಕೆಲಸ ಮಾಡುತ್ತೆ ಗೊತ್ತಾ?? ಇಲ್ಲಿ ನೋಡಿ

0
2973

ಈಗ ಎಲ್ಲೆಲ್ಲೂ ರಿಲಾಯನ್ಸ್ ಜಿಯೋದ ಸುದ್ದಿ. ಎಷ್ಟೆಷ್ಟು ಆಫರ್ ಕೊಡ್ತಿದ್ದಾರಲ್ಲಾ ಎಂದು ಮೂಗಿನ ಮೇಲೆ ಬೆರಳಿಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಉಚಿತ ಫೋನ್ ಕಾಲ್ ನೀಡುತ್ತೇವೆ ಎಂದು ಕಂಪನಿ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಅದು ಹೇಗೆ ಸಾಧ್ಯ? ಇಲ್ಲಿದೆ ಲಾಜಿಕ್.

ಬಿಎಸ್’ಎನ್’ಎಲ್, ಏರ್ಟೆಲ್ ಮೊದಲಾದ ಹಾಲಿ ಟೆಲಿಕಾಂ ಆಪರೇಟರ್’ಗಳು 2ಜಿ ಮತ್ತು 3ಜಿ ನೆಟ್ವರ್ಕ್’ನಲ್ಲಿ ವಾಯ್ಸ್ ಕಾಲ್ ಸೇವೆ ನೀಡುತ್ತವೆ. 4ಜಿ ನೆಟ್ವರ್ಕ್’ನಲ್ಲಿ ಇಂಟರ್ನೆಟ್ ಒದಗಿಸುತ್ತವೆ. ಮೊಬೈಲ್ ಇಂಟರ್ನೆಟ್ ಆಫ್ ಮಾಡಿದರೆ ಡಾಟಾ ಆಫ್ ಆಗುತ್ತದೆ. ಆದರೆ, ರಿಲಯನ್ಸ್ ಜಿಯೋದ ತಂತ್ರಜ್ಞಾನ ಸ್ವಲ್ಪ ಭಿನ್ನ. VoLTE ಎಂಬ ತಂತ್ರಜ್ಞಾನವನ್ನು ಜಿಯೋ ಬಳಸುತ್ತದೆ. ಧ್ವನಿ ಕರೆಗಳನ್ನು ಡಾಟಾ ಪ್ಯಾಕೆಟ್’ಗಳ ಮೂಲಕ ರವಾನಿಸುತ್ತದೆ. ಮೊಬೈಲ್ ಇಂಟರ್ನೆಟ್ ಆಫ್ ಮಾಡಿದರೂ ಡಾಟಾ ಪ್ಯಾಕೆಟ್’ಗಳ ಮೂಲಕ ಫೋನ್ ಕರೆ ಮಾಡಲು ಸಾಧ್ಯ. ಆದರೆ, ಇದಕ್ಕೆ ಡಾಟಾ ದರಗಳು ಅನ್ವಯವಾಗುತ್ತವೆ.

ಎಷ್ಟು ಡಾಟಾ ಖರ್ಚಾಗುತ್ತೆ?
ಸಾಮಾನ್ಯವಾಗಿ ಔಟ್’ಗೋಯಿಂಗ್ ಕಾಲ್’ಗಳಿಗೆ ದರಗಳು ವ್ಯಯವಾಗುತ್ತದೆ. ಆದರೆ, ಜಿಯೋ ನೆಟ್ವರ್ಕ್’ನಲ್ಲಿ ಔಟ್’ಗೋಯಿಂಗ್ ಜೊತೆಗೆ ಇನ್’ಕಮಿಂಗ್ ಕಾಲ್’ಗಳಿಗೂ ಡಾಟಾ ದರ ಅನ್ವಯವಾಗುತ್ತದೆ. ಫೋನ್’ನಲ್ಲಿ ನಾವು ಮಾತನಾಡಿದಷ್ಟೂ ಅವಧಿಗೂ ಡಾಟಾ ಖರ್ಚಾಗುತ್ತಾ ಹೋಗುತ್ತದೆ. ಜೊತೆಗೆ ನಾವು ಮಾಡುವ ಬ್ರೌಸಿಂಗ್’ಗಳಿಂದ ಖರ್ಚಾಗುವ ಡಾಟಾ ಸೇರಿಸಿಕೊಂಡರೆ ರಿಲಯನ್ಸ್ ಜಿಯೋದವರ ಆಫರ್’ಗಳು ಮನಮೋಹಕ ಅಂತ ಕಾಣಿಸುವುದಿಲ್ಲ. ಅಳಿಯ ಎಂದು ನೇರವಾಗಿ ಅನ್ನುವ ಬದಲು ಮಗಳ ಗಂಡ ಎಂದು ಹೇಳುವಂತಿದೆ ಜಿಯೋದವರ ಆಫರ್’ಗಳು.