ರೋಸಿ ಹೋಗಿದ್ದಾನೆ ರಿಲಯನ್ಸ್ ಗ್ರಾಹಕ…

0
1694

ನಿಮಗೆ ಗೊತ್ತಿರಲಿ, ರಿಲಯನ್ಸ್ ಸಿಮ್ ಗೋಸ್ಕರ ರಾತ್ರಿ ಇಡೀ ಕನವರಿಸುತ್ತ ಕಾಲ ಕಳೆದವರು ಇದ್ದಾರೆ, ರಿಲಯನ್ಸ್ ಸಿಮ್ ಸಿಕ್ಕರೆ ಸಾಕು ನೂರು ತೆಂಗಿನಕಾಯಿ ಹೊಡೆಯುತ್ತೇನೆ ಎಂದು ಹರಕೆ ಹೊತ್ತವರು ಕೂಡ ಇದ್ದಾರೆ, ಆದರೆ ಸಿಮ್ ಸಿಕ್ಕರೂ activation ಆಗದೆ ಕೈ ಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತಾಗಿದೆ ರಿಲಯನ್ಸ್ ಗ್ರಾಹಕನ ಪರಿಸ್ಥಿತಿ.

ಜೀವನ ಪೂರ್ತಿ ಉಚಿತ ಕರೆ ಹಾಗೂ ಡಿಸೆಂಬರ್ 31ರವರೆಗೆ 4ಜಿ ಸ್ಪೀಡ್ ನ 4 ಜಿಬಿ ಡಾಟಾ ಯಾರಿಗೆ ಬೇಡ ಹೇಳಿ. ಆದ್ರೆ ಸಿಮ್ ಪಡೆದವರು ಹಾಗೂ ಪಡೆಯಲು ಆಸೆ ಪಟ್ಟವರೆಲ್ಲರೂ ಈಗ ಕಷ್ಟ ಅನುಭವಿಸಬೇಕಾಗಿದೆ. ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಗ್ರಾಹಕರ ತಲೆಕೆಡಿಸಿದ್ದಂತೂ ಸುಳ್ಳಲ್ಲ. ಪ್ರತಿಯೊಬ್ಬ ಮೊಬೈಲ್ ಗ್ರಾಹಕನೂ ಜಿಯೋ 4ಜಿ ಉಚಿತ ಸಿಮ್ ಪಡೆಯಲು ಕಾತರನಾಗಿದ್ದಾನೆ.

ಸಿಮ್ ಆಯಕ್ಟಿವೇಟ್ ಆಗ್ತಿಲ್ಲ. ರಿಲಾಯನ್ಸ್, ಸಿಮ್ ಬಿಡುಗಡೆ ಮಾಡಿದಾಗ ಸುಲಭವಾಗಿ ಗ್ರಾಹಕರಿಗೆ ಸಿಮ್ ಸಿಗಲಿದೆ ಹಾಗೂ ಬೇಗ ಆಯಕ್ಟೀವ್ ಆಗುತ್ತೆ ಎಂದಿತ್ತು. ಆದ್ರೆ ಕಂಪನಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ.
ಬೇಡಿಕೆಗೆ ತಕ್ಕಷ್ಟು ಸಿಮ್ ಗ್ರಾಹಕರಿಗೆ ಸಿಗ್ತಾ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಅಬ್ಬಾ ಸಿಮ್ ಸಿಕ್ತು ಎಂದು ನಿಟ್ಟುಸಿರು ಬಿಟ್ಟವರಿಗೆ ಸಿಮ್ ಬಳಸಲು ಸಾಧ್ಯವಾಗ್ತಿಲ್ಲ.

ಸಮಸ್ಯೆ ಏನು, ಹಾಗೆ ಅದಕ್ಕೆ ಪರಿಹಾರವೇನು ಎನ್ನುವ ಬಗ್ಗೆ ಅಧಿಕಾರಿಗಳ ಮಟ್ಟದಿಂದ ಯಾವುದೇ ಉತ್ತರ ಸಿಗ್ತಾ ಇಲ್ಲ. ಮೂಲಗಳ ಪ್ರಕಾರ, ಕಂಪನಿ ಸಿಮ್ ಮಾರಾಟದ ಪ್ರಮಾಣವನ್ನು ಕಡಿಮೆ ಮಾಡಿದೆ ಎನ್ನಲಾಗಿದೆ. ಮೊದಲು ನೀಡಿದ ಸಿಮ್ ಆಯಕ್ಟಿವೇಟ್ ಮಾಡ್ತೇವೆ. ನಂತ್ರ ಸಿಮ್ ನೀಡ್ತೇವೆ ಎನ್ನುತ್ತಿದೆ ಕಂಪನಿ.

ಶಿಮ್ಲಾದ ಪರಿಸ್ಥಿತಿ ಕೂಡ ಹೀಗೆ ಇದೆ. ಸಿಮ್ ಗೆ ಬೇಡಿಕೆ ಜಾಸ್ತಿಯಾಗ್ತಿದೆ. ಆದ್ರೆ ವಿತರಕರಿಗೆ ಬೇಡಿಕೆಯಷ್ಟು ಸಿಮ್ ನೀಡಲು ಸಾಧ್ಯವಾಗ್ತಿಲ್ಲ. ಸಿಮ್ ಪಡೆದವರು ಕೂಡ ಆಯಕ್ಟಿವ್ ಆಗಿಲ್ಲ ಎಂಬ ಟೆನ್ಷನ್ ನಲ್ಲಿದ್ದಾರೆ.