ಸಿಂಧನೂರು ಬಳಿ ನಿಷೇಧಿತ ನೋಟು ಸಾಗಿಸುತ್ತಿದ್ದ ಲಾರಿ ಪಲ್ಟಿ

0
777

ಹಳೆ ನೋಟು ಸಾಗಿಸುತ್ತಿದ್ದ ಲಾರಿ ಪಲ್ಟಿ ಆರ್‍ಬಿಐ ನೋಟುಗಳನ್ನು ಸಾಗಾಣೆ ಮಾಡುತ್ತಿರುವ ಒಟ್ಟು 13 ಲಾರಿಗಳಲ್ಲಿ ಒಂದು ಲಾರಿ ನಿಯಂತ್ರಣ ತಪ್ಪಿ ರಾಯಚೂರಿನ ಸಿಂಧನೂರು ತಾಲೂಕಿನ ಬಸ್ಸಾಪುರ ಬಳಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

source: http://vijaykarnataka.indiatimes.com/
source: vijaykarnataka.indiatimes.com

ಸಿಂಧನೂರು ತಾಲೂಕಿನ ಬಸ್ಸಾಪುರ ಬಳಿ ಇರುವ ಕುನ್ನಟಗಿ ಕ್ಯಾಂಪ್ ಬಳಿ ಹಳೆಯ ಸ್ಕ್ರ್ಯಾಪ್ ನೋಟುಗಳನ್ನ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿದೆ, ಆದರೆ ಲಾರಿಯಲ್ಲಿದ್ದ ಹಳೆಯ ನೋಟುಗಳಿದ್ದ ಪೆಟ್ಟಿಗೆಗಳು ಸುರಕ್ಷಿತವಾಗಿದ್ದು, ಅದರ ಸುತ್ತಲೂ ಇರಿಸಿದ್ದ ಕಾಗದಗಳು ಮಾತ್ರ ಚೆಲ್ಲಾಪಿಲ್ಲಿಯಾಗಿವೆ. ತುರುವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.