ಬ್ರಿಟಿಷ ರಾಜ ಮನೆತನದ ವಶದಲ್ಲಿರುವ ಅಮೂಲ್ಯ ವಜ್ರ

0
1272

ಕೋಹಿನೂರಿಗೆವಜ್ರ

kohinoor

ವಿಶ್ವ ವಿಖ್ಯಾತ ವಜ್ರವಾಗಿ ಕೋಹಿನೂರಿಗೆ ಅಗ್ರ ಸ್ಥಾನವಿದೆ. ಕೋಹಿನೂರು ಇದರ ಅರ್ಥ ಬೆಳಕಿನ ಬೆಟ್ಟ ಎಂದು. ಪ್ರಥಮ ಪಾಣಿಪತ ಯುದ್ಧವಾದ ಬಳಿಕ ಗ್ವಾಲಿಯರ್ ರಾಜ ಕ್ರಿ.ಶ 1526 ರಲ್ಲಿ ಹುಮಾಯುನ್‍ನಿಗೆ ಕೊಟ್ಟ ವಜ್ರವಿದು ಎಂಬುದು ಕೆಲವು ಚರಿತ್ರೆಕಾರರ ಅನಿಸಿಕೆಯಾದರೆ, ಕರ್ನಾಟಕದ ಕೊಲ್ಲೂರು ಗಣಿಯಲ್ಲಿ ದೊರೆತ ವಜ್ರವನ್ನು 1656 ರಲ್ಲಿ ಮೀರ್ ಜುಮ್ಲಾ ಎಂಬಾತ ಷಹಜಾನ್‍ನಿಗೆ ಕಾಣಿಕೆಯಾಗಿ ಕೊಟ್ಟಿದ್ದ ಎಂಬ ಇನ್ನೊಂದು ವಾದವಿದೆ. ಕ್ರಿ.ಶ 1739ರಲ್ಲಿ ಕೋಹಿನೂರ್ ಮೊಘಲ್ ಚಕ್ರವರ್ತಿಗಳ ಬಳಿ ಇತ್ತು.

queen

ಪರ್ಷಿಯಾದ ನಾದಿರ್ ಷಾ ದೆಹಲಿಯ ಮಹ್ಮದ್ ಷಾನನ್ನು ಸೋಲಿಸಿ ಕೊಳ್ಳೆ ಹೊಡೆದ ಕಾಲದಲ್ಲಿ ಕೋಹಿನೂರ್‍ನ್ನೂ ತೆಗೆದು ಕೊಂಡ ಹೋದ. ನಾದರ್ ಷಾ ಸಾವನ್ನಪ್ಪಿದ ಬಳಿಕ ಅದು ಅಪಘಾನಿಸ್ತಾನದ ದುರಾನಿ ಅರಸರ ಕೈ ಸೇರಿತು. ಆ ವಂಶದ ಅಹ್ಮದ್ ಷಾ ಭಾರತಕ್ಕೆ ಓಡಿ ಬಂದಿದ್ದಾಗ ಪಂಜಾಬಿನ ರಣಜೀತ್ ಸಿಂಗ್ 1813 ರಲ್ಲಿ ಕೋಹಿನೂರನ್ನು ವಶಪಡಿಸಿಕೊಂಡ. ರಣಜೀತ ಸಿಂಗ್ ಮೃತನಾದ ಮೇಲೆ ಪಂಜಾಬ ಪ್ರಾಂತ್ಯ ಈಸ್ಟ ಇಂಡಿಯಾ ಕಂಪನಿಯ ವಶವಾಯಿತು. ವಜ್ರ ಬ್ರಿಟಿಷರ ಕೈ ಸೇರಿತು. ಅವರ ಕೋಹಿನೂರನ್ನು 1849 ರಲ್ಲಿ ವಿಕ್ಟೋರಿಯಾ ರಾಣಿಗೆ ಕಾಣಿಕೆಯಾಗಿ ಕೊಟ್ಟರು. ಇದನ್ನು 1851 ರಲ್ಲಿ ಲಂಡನ್ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದ್ದರು. 191 ಕ್ಯಾರೆಟ್ ತೂಕವಿದ್ದ ಕೋಹಿನೂರನ್ನು 1852 ರಲ್ಲಿ ಸಾಣೆ ಹಿಡಿದ ಮೇಲೆ ಅದರ ತೂಕ 108 ಕ್ಯಾರೆಟ್‍ಗೆ ಇಳಿಯಿತು. ಈಗ ಕೋಹಿನೂರ ಬ್ರಿಟಿಷ ರಾಜ ಮನೆತನದ ವಶದಲ್ಲಿರುವ ಅಮೂಲ್ಯ ವಜ್ರವಾಗಿದೆ.