ವರುಣನ ಆರ್ಭಟ ಕೊಡಗು ಮಕ್ಕಳಿಗೆ ಪೀಕಲಾಟ…

0
2108
School children return home in Madikeri on Monday as heavy rain hitting the region. --KPN

ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಿಂದಾಗಿ ಒಂದು ದಿನದ ಮಟ್ಟಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲು ಮಡಿಕೇರಿ ಜಿಲ್ಲಾಧಿಕಾರಿ ರಿಚರ್ಡ್ ಡಿಸೋಜಾ ಆದೇಶಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕ್ಕಿನ ಕರಿಕೆ, ಸಂಪಾಜೆ, ಚೆಂಬು ಭಾಗದಲ್ಲಿ ಭಾರಿ ಮಳೆಯಾಗಿದೆ.

ನೆನ್ನೆ ರಾತ್ರಿ ಇಂಧ ಸುರಿದ ಬಾರಿ ಮಳೆಯಿಂದ ಜನ ಜೀವನ ಅಸ್ತ-ವೆಸ್ಟಾಗೊಂಡಿದ್ದು ಮುಂದಿನ ಅನಾಹುತ ತಪ್ಪಿಸಲು ಈ ಕ್ರಮ ಅನುಸರಿಸಿದ್ದಾಗಿ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ. ಪವಿತ್ರ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಬಾಗಶ: ಮುಳುಗಡೆಯಾಗಿದೆ, ಕೊಡಗು ಜಿಲ್ಲೆಯ ಹಲವಾರು ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ದುರಸ್ತಿ ಕಾರ್ಯ ನೆಡೆಯುತ್ತಿದೆ. ನೆನ್ನೆ ಇಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಸಾರ್ವಜನಿಕರು ತೊಂದರೆಗೊಂಡಿದ್ದಾರೆ.