ವಾಯುಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

0
843

ಬೆಂಗಳೂರು: ಭಾರತೀಯ ವಾಯುಸೇನೆಯಲ್ಲಿ ಗ್ರೂಪ್‌ ಎಕ್ಸ್‌ ಮತ್ತು ವೈ ದರ್ಜೆಯ ಏರ್‌ಮನ್‌ ಹುದ್ದೆಗಳಿಗೆ ಆಸಕ್ತ ಅವಿವಾಹಿತ ಭಾರತ ಹಾಗೂ ನೇಪಾಳ ನಾಗರಿಕರಿಂದ ವಾಯುಸೇನೆ ಅರ್ಜಿ ಆಹ್ವಾನಿಸಿದೆ.

1997ರ ಜುಲೈ 7ರಿಂದ 2000ರ ಡಿಸೆಂಬರ್‌ 20ರ ನಡುವೆ ಜನಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಕ್ಸ್‌ ದರ್ಜೆ ಹುದ್ದೆಗಳಿಗೆ ದ್ವಿತೀಯ ಪಿಯುಸಿ, ತತ್ಸಮಾನ ವ್ಯಾಸಂಗ ಮಾಡಿದ್ದು, ಗಣಿತ, ಭೌತಶಾಸ್ತ್ರ, ಇಂಗ್ಲಿಷ್‌ನಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಗಳಿಸಿರಬೇಕು ಅಥವಾ ಮಾನ್ಯತೆ ಪಡೆದ ಪಾಲಿಟೆಕ್ನಿಕ್‌ ಸಂಸ್ಥೆಯಲ್ಲಿ 3 ವರ್ಷದ ಡಿಪ್ಲೊಮಾ ಎಂಜಿನಿಯರಿಂಗ್‌ ಅನ್ನು ಕನಿಷ್ಠ ಶೇ 50 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು. ವೈ ದರ್ಜೆ ಹುದ್ದೆಗಳಿಗೆ ಪಿಯುಸಿ, ತತ್ಸಮಾನ ವ್ಯಾಸಂಗ ಪೂರ್ಣಗೊಳಿಸಿದ್ದು, ಕನಿಷ್ಠ ಶೇ 50ರಷ್ಟು ಅಂಕ ಪಡೆದಿರಬೇಕು.

ಆಯ್ಕೆ ಪರೀಕ್ಷೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 29ರವರೆಗೆ ಕಾಲಾವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ನಂ.7 ಏರ್‌ಮ್ಯಾನ್‌ ಆಯ್ಕೆ ಕೇಂದ್ರ, ನಂ.1 ಕಬ್ಬನ್‌ರಸ್ತೆ, ಬೆಂಗಳೂರು. ದೂ: 080-25592199 ಸಂಪರ್ಕಿಸಬಹುದು.

Web Title: Air Force invited to apply for various posts