ಭಾರತೀಯ ಅಧಿಕಾರಿಗಳನ್ನೇ ಲಂಡನ್ ಗೆ ಕರೆದ ವಿಜಯ್ ಮಲ್ಯ !

0
1424

ಲಂಡನ್: ಘೋಷಿತ ಅಪರಾಧಿಯಾಗಿ ಬದಲಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಇಂಗ್ಲೆಂಡಿನಲ್ಲಿ ಆರಾಮವಾಗಿ ಕುಳಿತುಕೊಂಡಿದ್ದಾರೆ. ಇತ್ತ ಸಾಲ ಕೊಟ್ಟ ಭಾರತದ ಬ್ಯಾಂಕ್ ಗಳು ಮತ್ತೆ ಸುಪ್ರೀಂ ಕೋರ್ಟ್ ಬಾಗಿಲು ಬಡಿದಿವೆ. ವಿಜಯ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಹೇಳಿಯೂ ಆಗಿದೆ. ವಿಜಯ್ ಮಲ್ಯ ಇನ್ನು ತಮ್ಮ ಆಸ್ತಿ ಘೋಷಣೆ ಮಾಡಿಲ್ಲ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿರುವ ಬ್ಯಾಂಕ್ ಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.

ಆದರೆ ಇದಿಗಾ ಭಾರತೀಯ ಬ್ಯಾಂಕ್ ಕೋಟ್ಯಂತರ ರೂಪಾಯಿ ವಂಚಿಸಿ ಲಂಡನ್ ಗೆ ಪಲಾಯನ ಮಾಡಿದ್ದ ಮದ್ಯ ದೊರೆ ವಿಜಯ್ ಮಲ್ಯ ಇದೀಗ ಭಾರತೀಯ ಅಧಿಕಾರಿಗಳ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಅಧಿಕಾರಿಗಳು ಅನಗತ್ಯವಾಗಿ ತಮ್ಮನ್ನು ಕಾಡುತ್ತಿದ್ದು, ವಿಚಾರಣೆ ನಡೆಸಬೇಕಾದರೆ ಇಲ್ಲಿಗೇ ಬರಲಿ ಎಂದು ಸವಾಲು ಹಾಕಿದ್ದಾರೆ. ಅಧಿಕಾರಿಗಳ ಬಳಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದು ಮಲ್ಯ ಹೇಳಿಕೊಂಡಿದ್ದಾರೆ.

ಅಟೊಸ್ಪೋರ್ಟ್ಸ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಫೋರ್ಸ್ ಇಂಡಿಯಾ ಫಾರ್ಮ್ಯುಲಾ-1 ತಂಡದ ಮುಖ್ಯಸ್ಥರಾಗಿರುವ ಮಲ್ಯ, ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಪಡಿಸಿರುವುದರಿಂದ ಭಾರತಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.’ “ಭಾರತೀಯ ಅಧಿಕಾರಿಗಳು ನನ್ನನ್ನು ಅನಗತ್ಯವಾಗಿ ಕಾಡುತ್ತಿದ್ದಾರೆ ಎನ್ನುವುದಕ್ಕಿಂತ ಹೆಚ್ಚೇನೂ ಹೇಳುವಂತಿಲ್ಲ. ಬಿರುಗಾಳಿಯ ವಿರುದ್ಧ ನಾನು ಸವಾರಿ ಮಾಡಬೇಕು” ಎಂದು ಮಲ್ಯ ಹೇಳಿದ್ದಾರೆ. ಕಿಂಗ್ ಫಿಶರ್ ನ ಹಲವು ಮಂದಿ ಉನ್ನತಾಧಿಕಾರಿಗಳನ್ನು ಅವರು ವಿಚಾರಣೆ ನಡೆಸಿ, ಸಾವಿರಾರು ದಾಖಲೆಗಳನ್ನೂ ಪಡೆದುಕೊಂಡಿದ್ದಾರೆ. ಕೊಂಡಿ ತಪ್ಪಿರುವುದು ನನ್ನ ಸಂದರ್ಶನ ಮಾತ್ರ. ಲಂಡನ್ ಗೆ ಬಂದು ನನ್ನನ್ನೂ ಭೇಟಿ ಮಾಡಲಿ. ರೇಡಿಯೊ ಕಾನ್ಫರೆನ್ಸ್ ಮೂಲಕ ಸಂದರ್ಶಿಸಲಿ. ನನಗೆ ಇ-ಮೇಲ್ ಮೂಲಕ ಪ್ರಶ್ನೆ ಕೇಳಲಿ. ನಾನು ಉತ್ತರಿಸುತ್ತೇನೆ. ಇದರಲ್ಲಿ ಮುಚ್ಚಿಡುವಂಥದ್ದೇನೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.