ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತೀಯರೇ 6 ಮಂದಿ

0
1533

ಕ್ರಿಕೆಟ್ ನಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂಬ ಮಾತಿದೆ. ಯಾವುದೇ ಒಬ್ಬ ಆಟಗಾರ ಯಶಸ್ಸು ಸಾಧಿಸುತ್ತಿದ್ದಂತೆಯೇ ಆತ ರಾತ್ರೋರಾತ್ರಿ ಸ್ಟಾರ್ ಆಗಿ ಬಿಡುತ್ತಾನೆ. ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಮುಂದಾಗುವ ಜಾಹೀರಾತು ಕಂಪನಿಗಳು ಅಂತವರ ಹಿಂದೆ ಮುಗಿ ಬೀಳುತ್ತವೆ. ಇದರಿಂದಾಗಿ ಆಟಗಾರರು ಕೋಟ್ಯಾಂತರ ರೂ. ಆದಾಯ ಗಳಿಸುತ್ತಾರೆ.

ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತೀಯರೇ 6 ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಕ್ರಿಕೆಟ್ ನಿಂದ ನಿವೃತ್ತರಾಗಿದ್ದರೂ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

images

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಆಗಾಗ ಏರಿಳಿತವೂ ಆಗುತ್ತಿದ್ದು, ಸದ್ಯ ಜನಪ್ರಿಯತೆಯ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿಯವರು ಮೊದಲ ಸ್ಥಾನ ಗಳಿಸುವತ್ತ ದಾಪುಗಾಲಿಡುತ್ತಿದ್ದಾರೆ.

ಕ್ರಿಕೆಟ್ ಆಟಗಾರರು ಹಾಗೂ ಅವರ ಆದಾಯ ಕೆಳಕಂಡಂತಿದೆ.

ಮಹೇಂದ್ರ ಸಿಂಗ್ ಧೋನಿ, 31.5 ಮಿಲಿಯನ್ ಅಮೆರಿಕನ್ ಡಾಲರ್

ಸಚಿನ್ ತೆಂಡೂಲ್ಕರ್, 18 ಮಿಲಿಯನ್ ಅಮೆರಿಕನ್ ಡಾಲರ್

ವಿರಾಟ್ ಕೊಹ್ಲಿ, 12 ಮಿಲಿಯನ್ ಅಮೆರಿಕನ್ ಡಾಲರ್

ಗೌತಮ್ ಗಂಭೀರ್, 8 ಮಿಲಿಯನ್ ಅಮೆರಿಕನ್ ಡಾಲರ್

ಕ್ರಿಸ್ ಗೇಯ್ಲ್, 7 ಮಿಲಿಯನ್ ಅಮೆರಿಕನ್ ಡಾಲರ್

ಶೇನ್ ವ್ಯಾಟ್ಸನ್, 6 ಮಿಲಿಯನ್ ಅಮೆರಿಕನ್ ಡಾಲರ್

ರೋಹಿತ್ ಶರ್ಮಾ, 5 ಮಿಲಿಯನ್ ಅಮೆರಿಕನ್ ಡಾಲರ್

ಯುವರಾಜ್ ಸಿಂಗ್, 5 ಮಿಲಿಯನ್ ಅಮೆರಿಕನ್ ಡಾಲರ್

ಕೆವಿನ್ ಪೀಟರ್ಸನ್, 4.5 ಮಿಲಿಯನ್ ಡಾಲರ್

ಎಬಿ ಡಿವಿಲಿಯರ್ಸ್, 4 ಮಿಲಿಯನ್ ಅಮೆರಿಕನ್ ಡಾಲರ್.