ವಿಸ್ಮಯ! ಗ್ರಹದ ಜೀವಿಗಳ ರೂಪದಲ್ಲಿ ಮಗುಜನನ

0
2160

ಸೃಷ್ಟಿಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಸ್ಮಯ, ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಉದಾಹರಣೆಯಾಗಿ ತಾಯಿಯೊಬ್ಬಳಿಗೆ ವಿಚಿತ್ರ ಮಗು ಜನನವಾಗಿದೆ. ಇಷ್ಟುದಿನ ಪ್ರಾಣಿಗಳ ರೀತಿ, ನಾಲ್ಕು, ಎಂಟು ಕಾಲು ಕೈಗಳಿರುವ ಮಕ್ಕಳು ಜನಿಸಿದ್ದನ್ನು ನೋಡಿದ್ದೀರ. ಆದ್ರೆ ಇದೀಗ ಉತ್ತರ ಪ್ರದೇಶದಲ್ಲಿ  ವಿಚಿತ್ರ ಮಗುವೊಂದು ಜನಿಸಿದ್ದು, ಈ ಮಗುವೊಂದು ಏಲಿಯನ್ ರೂಪದ ಜನಿಸಿದೆ. ಮಗು ಹುಟ್ಟಿ ಕೆಲವೇ ಗಂಟೆಗಳಲ್ಲಿ ಮಗುವನ್ನು ನೋಡಲು ಜನ ಸಾಗರವೇ ಹರಿದು ಬರ್ತಾ ಇದೆ. ಅಕ್ಕ-ಪಕ್ಕದ ಹಳ್ಳಿಯ ಜನರು ಶಿಶುವನ್ನು ನೋಡಲು ಆಸ್ಪತ್ರೆಗೆ ಬರ್ತಿದ್ದಾರೆ. ಈ ಶಿಶು ಮನುಷ್ಯನ ರೀತಿಯಲ್ಲಿಲ್ಲ, ಬೇರೆ ಗ್ರಹದ ಜೀವಿಗಳ ರೂಪ ತಳೆದಿದೆ ಎನ್ನುತ್ತಿದ್ದಾರೆ ವೈದ್ಯರು.

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಪದ್ರೌನ ತೆಹಸಿಲ್ ಗ್ರಾಮದ ರಂಜಿತ್ ಚೌಹಾಣ್ ಪತ್ನಿ ಶೆಲ್ ದೇವಿ, ಏಲಿಯನ್ ರೀತಿಯ ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನ ಕಣ್ಣು, ಕಿವಿ, ಕೈ ಮತ್ತು ಮೂಗು ಬೆಳವಣಿಗೆಯಾಗಿಲ್ಲ. ಗರ್ಭಿಣಿಯಾಗಿದ್ದಾಗ ಶೆಲ್ ಗೆ ಯಾವುದೇ ಸಮಸ್ಯೆಯಾಗಿರಲಿಲ್ಲವಂತೆ. ಹೆರಿಗೆ ಕೂಡ ನಾರ್ಮಲ್ ಆಗಿದೆ. ಜೀನ್ ಸಮಸ್ಯೆಯಿಂದ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮಗುವಿನ ಚರ್ಮದ ಮೇಲೆ ಕೆರಾಟಿನ್ ಪದರವಿದೆ. ಇದು ಡೈಮಂಡ್ ಆಕಾರದಲ್ಲಿರುವುದರಿಂದ ಮಗುವಿನ ಚರ್ಮಕ್ಕೆ ಆಮ್ಲಜನಕ ಸಿಗ್ತಾ ಇದೆ. ಹಾಗಾಗಿ ಮಗು ಇನ್ನೂ ಜೀವಂತವಾಗಿದೆ. ಇದೊಂದು ಚಮತ್ಕಾರ ಎನ್ನುತ್ತಾರೆ ವೈದ್ಯರು. ಆದ್ರೆ ಮಗು ಈ ರೀತಿ ಜನ್ಮ ತಾಳಿರುವುದು ಕುಟುಂಬಸ್ಥರ ನೋವಿಗೆ ಕಾರಣವಾಗಿದೆ. ಭಾರತದಲ್ಲಿ ಇದು ಎರಡನೇ ಮಗುವಾಗಿದೆ. ಈ ಹಿಂದೆ ನಾಗ್ಪುರದಲ್ಲಿ ಏಲಿಯನ್ ರೀತಿಯ ಮಗು ಜನಿಸಿತ್ತು.

3 ಲಕ್ಷ ಮಕ್ಕಳಲ್ಲಿ ಒಬ್ಬರು ಈ ರೀತಿ ವಿಚಿತ್ರವಾಗಿ ಜನಿಸುತ್ತಾರೆ ಎನ್ನಲಾಗಿದ್ದು, ವಂಶವಾಹಿ(ಜೀನ್ಸ್) ಸಮಸ್ಯೆಯಿಂದ ಹುಟ್ಟುತ್ತಾರೆ. ಇದಕ್ಕೆ ಹರ್ಲೆಕ್ವಿನ್ ಮತ್ಸ್ಯವ್ಯಾಧಿ(ಮೀನುದೊಗಲು ರೋಗ) ಎಂದು ಕರೆಯಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.