ವೆಜ್ ಆರ್ಡರ್‌ ಮಾಡಿದ ಗ್ರಾಹಕರ ಟೇಬಲ್‌ಗೆ ನಾನ್‌ವೆಜ್, ಆಕ್ರೋಶಗೊಂಡ ಗ್ರಾಹಕನ ಸವಾಲ್

0
809

ಬೆಂಗಳೂರು: ಬೆಂಗಳೂರು ನಗರದ ಪ್ರತಿಸ್ಟಿತ ಒರಿಯನ್ ಮಾಲ್‌ನಲ್ಲಿರುವ ‘ಮೇನ್ ಲ್ಯಾಂಡ್ ಚೈನಾ’ ಎಂಬ ಹೋಟೆಲ್‌ನಲ್ಲಿ  ಹೋಟೆಲ್ ಒಂದರಲ್ಲಿ ವೆಜ್ ನೂಡಲ್ಸ್ ಆರ್ಡರ್ ಮಾಡಿದ ಗ್ರಾಹಕರಿಗೆ ನಾನವೆಜ್ ಸರ್ವ್ ಮಾಡಿದ ಹೋಟಲ್   ಸಪ್ಲೈಯರ್‍ , ಆಕ್ರೋಶಗೊಂಡ ಗ್ರಾಹಕ ಪೊಲೀಸ್ ಕಂಪ್ಲೇಂಟ್ ಮಾಡಿದ್ದಾರೆ, ಆಕ್ರೋಶಗೊಂಡ ಗ್ರಾಹಕ ಸವಾಲ್ ಕೊಡ ಮಾಡಿದಾರೆ.

ವಿಜಯನಗರದ ಉದ್ಯಮಿ ಪಿಯೂಶ್ ಅಂಕೇಶ್ ತಮ್ಮ ಕುಟುಂಬದ 10 ಸದಸ್ಯರೊಂದಿಗೆ ಒರಿಯನ್ ಮಾಲ್‌ನಲ್ಲಿರುವ ‘ಮೇನ್ ಲ್ಯಾಂಡ್ ಚೈನಾ’ ಎಂಬ ಹೋಟೆಲ್‌ನಲ್ಲಿ ಭಾನುವಾರ  ರಾತ್ರಿ ಡಿನ್ನರ್‌‌‌ಗೆ ತೆರಳಿ ವೆಜ್‍ ನೂಡಲ್ಸ್ ಆರ್ಡರ್‍ ಮಾಡಿದ್ದಾರೆ. ಅಲ್ಲದೆ ಇವರು ಕುಳಿತದ್ದು ಕೂಡಾ ಸಸ್ಯಾಹಾರದ ಕೊಠಡಿಯಲ್ಲಿ.

Customer-got-Non-veg-noodles-

 ಸಪ್ಲೈಯರ್‍ ಮಾಡಿದ ಒಂದು ಯಡವಟ್ಟಿನಿಂದಾಗಿ 10 ರಲ್ಲಿ ಒಂದು ಪ್ಲೇಟ್ ಚಿಕನ್ ನೂಡಲ್ಸ್ ಟೇಬಲ್‍ ತಲುಪಿದೆ. ಅದನ್ನು ಪಿಯೂಶ್ ಪತ್ನಿ ಸೇವಿಸುತ್ತಿದ್ದಾಗ ಚಿಕನ್ ಪೀಸ್ ಪತ್ತೆಯಾಗಿದೆ. ಈ ಬಗ್ಗೆ ಅವರು ಪತಿಗೆ ತಿಳಿಸಿದ್ದು, ಪಿಯೂಶ್‌‌‌‌ ಹೋಟೆಲ್‌ನವರನ್ನು ಕರೆದು ಪ್ರಶ್ನಿಸಿದ್ದಾರೆ. ಸಮರ್ಪಕ ಉತ್ತರ ಕೊಡದ ಸಿಬ್ಬಂದಿ, ‘ತಪ್ಪಾಗಿದೆ, ಹೊಸದಾಗಿ ವೆಜ್ ನೂಡಲ್ಸ್ ತಂದು ಕೊಡುತ್ತೇವೆ’ ಎಂದು ನಿರ್ಲಕ್ಷೆಯ್ಯಿಂದ  ಉತ್ತರ ನೀಡಿದ್ದಾರೆ.

ಹೋಟೆಲ್‌ನ ಸಿಬಾಂದಿಯ ವರ್ತನೆಯಿಂದ ಬೇಸರಗೊಂಡ ಗ್ರಾಹಕ ಆಕ್ರೋಶದಿಂದ ಪಿಯೂಶ್, ಬಿಲ್ ಮತ್ತು ಕ್ಷಮಾಪಣಾ ಪತ್ರಕ್ಕೆ ಒತ್ತಾಯಿಸಿದ್ದಾರೆ. ಆಗ ಹೋಟೆಲ್‌‌ನವರು ಬಿಲ್‌ನಲ್ಲಿ ಮುದ್ರಣವಾಗಿದ್ದ ‘ಗೆಸ್ಟ್ ಫೌಂಡ್ ಚಿಕನ್’ ಎಂಬುದನ್ನು ವೈಟ್ನರ್‌ನಿಂದ ಅಳಿಸಲು ಯತ್ನಿಸಿದಾಗ. ಇದನ್ನು ಗಮನಿಸಿದ ಪಿಯೂಶ್‌‌‌‌‌‌‌‌‌‌‌ ಮತ್ತಷ್ಟು ಕೆರಳಿದ್ದಾರೆ. ಈ ಸಂಬಂಧ ತಡರಾತ್ರಿವರೆಗೂ ವಾಗ್ವಾದ ಮುಂದುವರೆದಿದೆ. ಕೊನೆಗೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಹೋಟೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಹೋಟೆಲ್ನಿಂದ ಪರಿಹಾರ ಬದಲಿಗೆ ಅನ್ನದಾನ ಮಾಡಿ  ಎಂದ ಗ್ರಾಹಕ

ಆರ್ಡರ್ ಮಾಡುವಾಗಲೇ ನಾನ್‌ವೆಜ್ ಪದಾರ್ಥ ತರಬಾರದು ಎಂದು ಹೇಳಿದ್ದೆ, ಅಲ್ಲದೆ ಇವರು ಕುಳಿತದ್ದು ಕೂಡಾ ಸಸ್ಯಾಹಾರದ ಕೊಠಡಿಯಲ್ಲಿ.  ಆದರೂ, ಚಿಕನ್ ನೂಡಲ್ಸ್ ಕೊಟ್ಟಿದ್ದಾರೆ. ನಮ್ಮ ಆಹಾರ ಪದ್ಧತಿಗೆ ಅಪಚಾರವಾಗಿದೆ. ನನಗೆ ಹೋಟೆಲ್‌ನಿಂದ ಪರಿಹಾರ ಬೇಕಿಲ್ಲ. ಬದಲಿಗೆ ಅವರಿಗೆ ಗೊತ್ತಿರುವ ಅನಾಥಾಶ್ರಮದಲ್ಲಿ 100 ಮಂದಿಗೆ ಅನ್ನದಾನ ಮಾಡಿ, ಆ ಬಗ್ಗೆ ಆಶ್ರಮದಿಂದ ಪಡೆದ ಪತ್ರವನ್ನು ತಂದು ತೋರಿಸಲಿ. ದೂರು ವಾಪಸ್ ಪಡೆಯುತ್ತೇನೆಂದು ಪಿಯೂಶ್ ಮಾಧ್ಯಮದವರಿಗೆ ತಿಳಿಸಿದ್ದಾರೆ.