ಶಿರಾಡಿ ಘಾಟ್‌ನಲ್ಲಿ ಸುರಂಗ ಕೊರೆಯುವ ಪ್ರಸ್ತಾವಕ್ಕೆ ಕೇಂದ್ರ ಅರಣ್ಯ ಸಚಿವಾಲಯ ಸಮ್ಮತಿ

0
1024

ಶಿರಾಡಿ ಘಾಟ್‌ನ ಕಾಡಿನಲ್ಲಿ ಸುರಂಗ ಕೊರೆಯುವ ಪ್ರಸ್ತಾವಕ್ಕೆ ಕೇಂದ್ರ ಅರಣ್ಯ ಸಚಿವಾಲಯ ಸಮ್ಮತಿ ಸೂಚಿಸಿದೆ. ರಾಜ್ಯದ ಅರಣ್ಯ ಇಲಾಖೆಯಿಂದ ಅಧಿಕೃತ ಅನುಮತಿ ಸಿಕ್ಕಿದ ಕೂಡಲೇ ಸುರಂಗ ಕೊರೆಯಲು ಪಶ್ಚಿಮ ಘಟ್ಟದಲ್ಲಿನ ಮಣ್ಣು, ಕಲ್ಲು, ನೆಲದಡಿಯ ಪರಿಸ್ಥಿತಿಗಳನ್ನು ಅರಿಯಲು ಮಣ್ಣು ಪರೀಕ್ಷೆಗೆ ಡ್ರಿಲ್ಲಿಂಗ್ ಆರಂಭವಾಗಲಿದೆ.

cf97585b-dfa8-4dc7-97bc-2b0cff247336
ಪಶ್ಚಿಮ ಘಟ್ಟದ ಮಣ್ಣಿನ ಗುಣ ಹಾಗೂ ಸುರಂಗ ಮಾರ್ಗದ ನಿರ್ಮಾಣಕ್ಕೆ ಯಂತ್ರ ಸೇರಿದಂತೆ ನಾನಾ ತಾಂತ್ರಿಕ ಅಂಶಗಳನ್ನು ಅರಿಯಲು ಸುಮಾರು 300 ಮೀ. ಗಳಷ್ಟು ಆಳಕ್ಕೆ ಕೊಳವೆ ಕೊರೆಯಲು ಅರಣ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ಆದರೆ ಈ ವೇಳೆ ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿಯಾಗಬಾ ರದು. ಡ್ರಿಲ್ಲಿಂಗ್ ವೇಳೆ ಹೆಚ್ಚಿನ ಜಾಗರೂಕತೆ ಅವಶ್ಯ ಎಂದು ಅರಣ್ಯ ಇಲಾಖೆ ಷರತ್ತು ಹಾಕಿದೆ.

nt7v9fxಮಣ್ಣು ಪರೀಕ್ಷೆಗೆ ಗುತ್ತಿಗೆ: ಡ್ರಿಲ್ಲಿಂಗ್‌ಗೆ ಆಧುನಿಕ ತಂತ್ರಜ್ಞಾನದ ಅವಶ್ಯವಿದ್ದು, ಆಸ್ಟ್ರಿಯನ್ ಮೂಲದ ಜಿಯೋ ಕನ್ಸಲ್ಟೆಂಟ್ ಪ್ರೈ.ಲಿ. ಸಂಸ್ಥೆಗೆ ಮಣ್ಣುಪರೀಕ್ಷೆ ನಡೆಸಲು ಗುತ್ತಿಗೆ ನೀಡಲಾಗಿದೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ರಾಜ್ಯ ಅರಣ್ಯ ಇಲಾಖೆಯಿಂದ ಅನುಮತಿ ನಿರೀಕ್ಷಿಸಲಾಗುತ್ತಿದೆ.

ಮೂರ‍್ನಾಲ್ಕು ತಿಂಗಳಲ್ಲಿ ಡ್ರಿಲ್ಲಿಂಗ್ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಹಿಂದೆ ಜಿಯೋ ಕನ್ಸಲ್ಟೆಂಟ್ ಸಂಸ್ಥೆ ಸಾಮಾಜಿಕ ಹಾಗೂ ಟ್ರಾಫಿಕ್ ಸರ್ವೆ ನಡೆಸಿ, ಪ್ರತ್ಯೇಕ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಅವಶ್ಯ ಬಗ್ಗೆ ವರದಿ ನೀಡಿತ್ತು. ಆರು ಲೇನ್‌ಗಳ ಒನ್‌ವೇ ಸುರಂಗ ನಿರ್ಮಾಣ ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಸಂಸ್ಥೆಯ ವರದಿ ಆಧಾರದ ಮೇಲೆ ಸುರಂಗ ಕೊರೆಯಲು ಬಳಸುವ ಯಂತ್ರ, ಸಿಮೆಂಟ್ ಅಥವಾ ಕಾಂಕ್ರಿಟ್ ಪ್ರಮಾಣ, ರಿಸ್ಕ್ ಏರಿಯಾ ಇತ್ಯಾದಿ ವಿವರಗಳು ಲಭ್ಯವಾಗಲಿದೆ. ಈ ವರದಿ ಬಳಿಕವೇ ವಿಸ್ತೃತ ಯೋಜನಾ ವೆಚ್ಚ ಅಂತಿಮ ಗೊಳ್ಳಲಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಕಾಮಗಾರಿಗೆ ಸಿದ್ಧತೆ: ಜೈಕಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಒಟ್ಟು 22.8 ಕಿ.ಮೀ ಉದ್ದದ ಸುರಂಗ ಮಾರ್ಗದ ಬೈಪಾಸು ರಸ್ತೆ ನಿರ್ಮಿಸಲು ಕಳೆದ ವರ್ಷ ಪೇಪರ್ ವರ್ಕ್ ಆರಂಭಿಸಲಾಗಿತ್ತು. ಸರ್ವೆ ಹಾಗೂ ಸ್ಯಾಟಲೈಟ್ ನಕ್ಷೆ ಆಧಾರವಾಗಿ ಟ್ಟುಕೊಂಡು ಮಾರ್ಗದ ವಿನ್ಯಾಸ ಮಾಡಲಾಗಿತ್ತು. ಸುಮಾರು 10 ಸಾವಿರ ಕೋಟಿ ರು.ಗಳಿಗೆ ವಿಸ್ತೃತಯೋಜನಾ ವರದಿಯ ಅಂದಾಜಿನೊಂದಿಗೆ ನಾನಾ ಹಂತದ ಕಾಮಗಾರಿಗೆ ಸಿದ್ಧತೆ ನಡೆಸಲಾಗಿತ್ತು. ಮೇ ತಿಂಗಳಲ್ಲಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸುರಂಗ ಮಾರ್ಗದ ವಿನ್ಯಾಸಕ್ಕೆ ಅಸ್ತು ಎಂದಿತ್ತು.