ಸಿ ಎಂ ಸಿದ್ದರಾಮಯ್ಯ V/S ಬಿ.ಎಸ್.ಯಡಿಯೂರಪ್ಪ

0
1072

ಕನಾರ್ಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಆದರೆ ಇಲ್ಲಿಯವರೆಗೂ ನಮ್ಮ ಮೇಲೆ ಯಾವುದೇ ಗಂಭೀರ ಆರೋಪಗಳು ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿ ಗೋಷ್ಠಿ ಯಲ್ಲಿ ಶನಿವಾರ ಮಾತನಾಡಿದ ಅವರು ಇಲ್ಲಿಯವರೆಗೂ ಬೇಲ್ ತಗೊಂಡಿಲ್ಲ, ಜೈಲಿಗೆ ಹೋಗಿಲ್ಲ. ಎಲ್ಲ ಇಲಾಖೆಗಳಲ್ಲಿ ಕಳೆದ ಸರಕಾರಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದೇ.
ಜಗದೀಶ್ ಶೆಟ್ಟರ್ ,ಬಿಎಸ್ ವೈ ಹಾಗೂ ಜೆಡಿಎಸ್ ನವರ ಆರೋಪ ಆಧಾರ ರಹಿತ.
ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಭ್ರಮೆಯಲ್ಲಿ ಬೇರೆ ಪಕ್ಷದವರಿದ್ದಾರೆ ಎಂದರು.
೨೦೧೮ ರ ಚುನಾವಣೆಯಲ್ಲಿನಾವೇ ಅಧಿಕಾರಕ್ಕೆ ಬರುತ್ತೇವೆ. ಈ ಕುರಿತು ಅನುಮಾನವೇ ಇಲ್ಲ. ಬಿಜೆಪಿ ಗೆ ಜನ ಆಶೀರ್ವಾದ ಮಾಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಶಿವಮೊಗ್ಗ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿ.ಎಸ್.ಯಡಿಯೂರಪ್ಪ
ಸಿದ್ಧರಾಮಯ್ಯನವರದು ಆಡಳಿತ ನಿಯಂತ್ರಣವಿಲ್ಲದ ತುಘಲಕ್ ಸರಕಾರ.
ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಮೋಸಮಾಡಿದ್ದಾರೆ. ಕೇವಲ ಮುಖ್ಯಮಂತ್ರಿಯಾಗಬೇಕು ಎನ್ನುವ ಕಾರಣ ಈ ಸಮುದಾಯದವರನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಸಂಪುಟ ಸಚಿವರ ಭ್ರಷ್ಟಾಚಾರ ಮುಚ್ಚಲು ಎಸಿಬಿ ರಚನೆ ಮಾಡಿದ್ದಾರೆ. ಜನರು ಬೀದಿಗೆ ಇಳಿದು ಹೋರಾಟ ಮಾಡುವ ಕಾಲ ದೂರ ಇಲ್ಲ ಎಂದು ಎಚ್ಚರಿಸಿದ್ದಾರೆ