ಶ್ಯಾಂ ಭಟ್ ನೇಮಕಕ್ಕೆ ಗೌರ್ವನರ್ ಅಸ್ತು

0
985

ಬೆಂಗಳೂರು: ಕರ್ನಾಟಕದ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಅಧ್ಯಕ್ಷರಾಗಿ ಶ್ಯಾಂ ಭಟ್ ನೇಮಕಗೊಂಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಆಯುಕ್ತ ಟಿ. ಶ್ಯಾಂ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿತ್ತು. ಸರ್ಕಾರದ ಈ ಶಿಫಾರಸ್ಸಿಗೆ ಕೊನೆಗೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.

ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂ ಭಟ್ ಅವರನ್ನು ನೇಮಿಸಲು ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸ್ಸಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಬಂದಿದ್ದರಿಂದ ರಾಜ್ಯಪಾಲರು ಕಡತವನ್ನು ವಾಪಸ್ಸು ಕಳುಹಿಸಿದ್ದರು.

ಸರ್ಕಾರಧ ಶಿಪಾರಸ್ಸುಗೆ ರಾಜ್ಯಪಾಲರ ಅಂಕಿತ. ಎರಡು ಭಾರಿ ಶ್ಯಾಂ ಭಟ್ ಹೆಸರು ತಿರಸ್ಕಾರ ಮಾಡಿದ್ದ ರಾಜ್ಯಪಾಲರು ಶ್ಯಾಂ ಭಟ್ ಮೇಲಿರೋ ದೂರಿನ ಬಗ್ಗೆ ಲೋಕಾಯುಕ್ತಗೆ ವರದಿ ಕೇಳಿದ್ದರು. ಅರ್ಕಾವತಿ ಲೇಔಟ್ ಹಗರಣ ಸೇರಿದಂತೆ ವಿವಿಧ ಹಗರಣದ ಆರೋಪ ಶ್ಯಾಂ ಭಟ್ ಮೇಲಿದೆ ಮತ್ತು ಇತ್ತೇಚೆಗಷ್ಟೇ ಬಿಡಿಎ ಯಿಂದ ಸಹಕಾರ ಇಲಾಖೆಗೆ ವರ್ಗಾವಣೆ ಈ ರೀತಿಯ ವಿವಾದ  ಹೊಂದಿದ್ದರೂ ಕೂಡ ಸರ್ಕಾರದ ಶಿಫಾರಸ್ಸುಗೆ ಕೊನೆಗೂ ವಿವಾದಿತ ವ್ಯಕ್ತಿ ಶ್ಯಾಂ ಭಟ್ ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕ ಮಾಡುವುದಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಸ್ತು ಎಂದಿದ್ದಾರೆ.