ಶಿವಣ್ಣನ ‘ಶ್ರೀಕಂಠ’ ಸಿನಿಮಾ ಬಿಡುಗಡೆ ತಡ ಆಗ್ತಿರೋದಕ್ಕೆ ಕಾರಣ ಮೋದಿ!

0
785

ಮೋದಿಯ ನೋಟ್ ಬ್ಯಾನ್ ಯೋಜನೆ ಈಗ ಕನ್ನಡ ಚಿತ್ರರಂಗದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಪ್ರಧಾನಿ ಮೋದಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನ ಬ್ಯಾನ್ ಸಿನಿ ರಸಿಕರ ಪಾಲಿಗೆ ಮಾತ್ರ ಮೋದಿ ವಿಲನ್ ಆಗಿದ್ದಾರೆ. ಎಲ್ಲಾ ಕಡೆ ಹಣದ ಕೊರತೆ ಉಂಟಾಗಿದ್ದು, ಚಿಲ್ಲರೆ ಕೂಡ ಸಿಗ್ತಿಲ್ಲ. ಅದರಿಂದಾಗಿ ಸಿನಿಮಾ ನಿರ್ಮಾಪಕರು ತಮ್ಮ ಚಿತ್ರ ರಿಲೀಸ್ ಮಾಡೋಕೆ ಹಿಂದೆ ಮುಂದೆ ನೋಡ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರದ ಮೇಲೂ ನೋಟ್ ಬ್ಯಾನ್ ಎಫೆಕ್ಟ್ ಆಗಿದೆ ನಿರ್ಮಾಪಕ ಮನು ಸಿನಿಮಾ ರಿಲೀಸ್ ಮಾಡಲು ತಡಮಾಡುತ್ತಿದ್ದರೆ.

‘ಶ್ರಾವಣಿ-ಸುಬ್ರಮಣ್ಯ’ ಚಿತ್ರದ ನಂತರ ನಿರ್ದೇಶಕ ಮಂಜು ಸ್ವರಾಜ್ ರವರ ಕನಸಿನ ಕೂಸು ‘ಶ್ರೀಕಂಠ’ ಚಿತ್ರ. ಸಾಮಾಜಿಕ ಸಂದೇಶ ಸಾರುವ ಸಿನಿಮಾ. ಶಿವರಾಜ್ ಕುಮಾರ್ ಇಲ್ಲಿ ‘CM’ ಅರ್ಥಾತ್ C (ಕಾಮನ್) M (ಮ್ಯಾನ್) ಆಗಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಶ್ರೀಕಂಠ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿ ಎರಡು ತಿಂಗಳು ಕಳೆದಿದೆ.

ಇದೇ ತಿಂಗಳ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಬೇಕಾಗಿತ್ತು. ಆದ್ರೆ ಹಣವಿಲ್ಲದೆ ಪ್ರೇಕ್ಷಕ ಥಿಯೇಟರ್ಗೆ ಬರ್ತಿಲ್ಲ.. ರಿಲೀಸ್ ಆಗಿರೋ ಸಿನಿಮಾಗಳೆಲ್ಲಾ ಕಲೆಕ್ಷನ್ ಇಲ್ಲದೆ ಥಿಯೇಟರ್ಗಳು ಬಣ ಗುಡುತ್ತಿವೆ. ಹೀಗಾಗಿ ಶ್ರೀಕಂಠ ಚಿತ್ರದ ರಿಲೀಸ್ ಡೇಟ್‌ಅನ್ನ ಚಿತ್ರತಂಡ ಡಿಸೆಂಬರ್ 23ಕ್ಕೆ ಮುಂದೂಡಿದೆ. ಶಿವಣ್ಣನ ಶ್ರೀಕಂಠ ಚಿತ್ರದ ದರ್ಶನಕ್ಕೆ ಸಿನಿ ರಸಿಕರು ಇನ್ನೂ ಒಂದುವರೆ ತಿಂಗಳು ಕಾಯಬೇಕಾದ ಸ್ಥಿತಿ ನಿರ್ಮಾಣ ಆಗಿದೆ.