ಇಂದು ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತ..

0
1200

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ನಿಗಮಗಳ ನೌಕರರು ಮುಷ್ಕರ ಕೈಗೊಂಡಿದ್ದು, ಭಾನುವಾರ ಮಧ್ಯರಾತ್ರಿಯಿಂದ ಬಸ್ ಸಂಚಾರ ಸ್ಥಗಿತವಾಗಲಿದೆ.

ಸರ್ಕಾರ ಶೇ.10 ರಷ್ಟು ವೇತನ ಹೆಚ್ಚಳಕ್ಕೆ ಮುಂದಾಗಿದೆ. ಆದರೆ, ನಿಗಮದ ನೌಕರರ ಸಂಘದ ಪ್ರಮುಖರು ಶೇ.35ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ನಿಗಮದ ನೌಕರರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ಮುಷ್ಕರ ನಡೆಸಲು ನೌಕರರು ತೀರ್ಮಾನಿಸಿದ್ದಾರೆ. ಈ ನಡುವೆ ಕೆಲವು ಸಂಘಟನೆಗಳು ಮುಷ್ಕರದಿಂದ ಹೊರಗುಳಿಯಲಿವೆ ಎನ್ನಲಾಗಿದೆ.

ಕೆ.ಎಸ್.ಆರ್.ಟಿ.ಸಿ., ಬಿ.ಎಂ.ಟಿ.ಸಿ.ಯ ಸಂಯುಕ್ತ ನೌಕರರ, ಎಸ್.ಸಿ., ಎಸ್.ಟಿ. ನೌಕರರ ಸಂಘಟನೆ ಮೊದಲಾದವು ಮುಷ್ಕರದಿಂದ ದೂರ ಉಳಿಯಲಿವೆ ಎನ್ನಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಂಘಟನೆಯ ಪ್ರತಿನಿಧಿಗಳೊಂದಿಗೆ ನಿರಂತರವಾಗಿ ಸಭೆ ನಡೆಸಿ, ಮುಷ್ಕರ ಕೈ ಬಿಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಮಧ್ಯರಾತ್ರಿಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಡಿಪೋಗಲ್ಲಿ ಇಂದೇ ಗೈರು ಹಾಜರಾದ ಚಾಲಕ ಹಾಗೂ ನಿರ್ವಹಕರು. ಲಾಂಗ್ ರೂಟ್  ಗೆ ತೆರಳುವ ಚಾಲಕರು ಹಾಗು ನಿರ್ವಾಹಕರು ಇಂದೇ  ಗೈರು ಅದ್ದರಿಂಧ ದೂರ ಪ್ರಯಾಣದ ಪ್ರಯಾಣಿಕರಿಗೆ ಇಂದೇ  ತಟ್ಟಿದ ಮುಷ್ಕರದ  ಬಿಸಿ.

ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸೋಕೆ ಸರ್ಕಾರ ನಿರ್ಧರಿಸಿದೆ. ಹಾಗೂ ಹೊರ ರಾಜ್ಯಗಳಿಂದ ಖಾಸಗಿ ವಾಹನಗಳು ಜೊತಗೆ ಮ್ಯಾಕ್ಸಿ ಹಾಗು ಓಲಾ ಕ್ಯಾಬ್ ಗಳನ್ನು ಕಲ್ಪಿಸುವ ಚಿಂತನೆ ಮಾಡಿದೆ ಎಂದು ತಿಳಿದು ಬಂದಿದೆ.