ಸತತ 6 ದಿನಗಳ ಹೋರಾಟದಿಂದ ಕಡೆಗೂ ಎಚ್ಚೆತ್ತು ಕೊಂಡ ರಾಜ್ಯ ಸರಕಾರ.

0
1580

ಕರ್ನಾಟಕ ಬಂದ್ ಬಳಿಕ ರಾಜ್ಯ ಸರಕಾರ ಕಡೆಗೂ ಎಚ್ಚೆತ್ತು ಕೊಂಡಿದೆ. ಪ್ರತಿದಿನ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂಬ ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯದಲ್ಲಿ ಗಂಭೀರ ಸ್ಥಿತಿ ಸೃಷ್ಟಿಯಾಗಿದ್ದು, ಈ ಆದೇಶವನ್ನು ಮರು ಪರಿಶೀಲಿಸಬೇಕು. ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಅಂಗೀಕರಿಸಬೇಕು ಎಂದು ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ಪ್ರತಿದಿನ 15,000 ಕ್ಯುಸೆಕ್ನಂತೆ 10 ದಿನಗಳ ಕಾಲ 13 ಟಿಎಂಸಿಯಷ್ಟು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಾಡು ಮಾಡಬೇಕೆಂದು ಕೋರಿ ಶನಿವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ರವಿವಾರ ನಡೆದಿದೆ.

ಕಾವೇರಿ ಮೇಲುಸ್ತುವಾರಿ ಸಮಿತಿಗೂ ಶನಿವಾರ ರಾತ್ರಿ ತನ್ನ ಆಕ್ಷೇಪ ಸಲ್ಲಿಸಿದೆ. ಕಾವೇರಿ ಮೇಲುಸ್ತುವಾರಿ ಸಮಿತಿ ಮುಖ್ಯಸ್ಥ ಕೇಂದ್ರ ಜಲ ಸಂಪನ್ಮೂಲ ಖಾತೆಯ ಕಾರ್ಯ ದರ್ಶಿಗೆ ರಾಜ್ಯ ತನ್ನ ಆಕ್ಷೇಪವನ್ನು ಇ-ಮೇಲ್ ಮಾಡಿದೆ.ಇದೇ ವೇಳೆ, ಕೋರ್ಟ್ ಸೂಚನೆಯಂತೆ ಸಮಿತಿ ಮೊಂದೆಯೂ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ಸೋಮವಾರ ಬೆಳೆಗ್ಗೆ 11:30 ಕ್ಕೆ ನಡೆಯಲಿದೆ.