ಸತ್ತವರು ರಣಹೇಡಿಗಳಂತೆ!  ಎಂದ ಡಿ.ಕೆ.ಶಿ

0
1164

 

ಬೆಂಗಳೂರು: ಸತ್ತವರು ರಣಹೇಡಿಗಳು, ಸ್ವಾತಂತ್ರ್ಯಕ್ಕಾಗಿ ಅವರ ಕೊಡುಗೆ ಏನಿದೆ. ಸಾಯಿ ಅಂತ ಅವರಿಗೆ ಹೇಳಿದ್ಯಾರು ? ಹೀಗಂತ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 70 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಶಾರದಾ ಸಂಸ್ಥೆಯ ಮಕ್ಕಳು ಮಾಡುತ್ತಿದ್ದ ನೃತ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆದಿದೆ.ಈ ವಿಷಯಕ್ಕೆ ಸಂಬಧಿಸಿದಂತೆ ಮಾದ್ಯಮಕ್ಕೆ ಡಿ.ಕೆ.ಶಿವಕುಮಾರ್ ರವರು ಪ್ರತಿಕ್ರಿಯಿಸಿದರು .

ಬೆಂಗಳೂರಿನಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ಮೃತಪಟ್ಟ ಅಧಿಕಾರಿಗಳ ಬಗ್ಗೆ ಡಿ.ಕೆ.ರವಿ, ಗಣಪತಿ, ಕಲ್ಲಪ್ಪ ರಣಹೇಡಿಗಳಾ ?  ಈ ರೀತಿ ಹೇಳಿಕೆ ನೀಡಿದ್ದಾರೆ.

ಅನುಮಾನಾಸ್ಪದವಾಗಿ ಸಾವು ಕಂಡ ಧಕ್ಷ ಅಧಿಕಾರಿಗಳಾದ ಡಿ‌.ಕೆ.ರವಿ, ಗಣಪತಿ, ಕಲ್ಲಪ್ಪ ಬಗ್ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಸ್ವಾತಂತ್ರ್ಯ ದಿನೋತ್ಸವದ ದಿನ ಡಿ.ಕೆ.ರವಿ, ಗಣಪತಿ, ಕಲ್ಲಪ್ಪ ಭಾವಚಿತ್ರ ಹಿಡಿದು ನೃತ್ಯ ಮಾಡುವಾಗ ತಡೆಯೊಡ್ಡಿದ್ದರ ಬಗ್ಗೆ ಸಚಿವರು ಈ ರೀತಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರ ಈ ಹೇಳಿಕೆ ಸರಿಯಾ ?

ಮಂಡ್ಯ ಕಾರ್ಯಕ್ರಮದ ಭಾವಚಿತ್ರ ಪ್ರದರ್ಶನ ವಿಚಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್.

ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದ, ಅದಕ್ಕಿಂತ ಮುಂಚಿತವಾಗಿ ಇದ್ದ ರಾಷ್ಟ್ರ ನಾಯಕರುಗಳ ಭಾವಚಿತ್ರ ಮಾತ್ರ ಪ್ರದರ್ಶಿಸಲು ಹೇಳಿದ್ದೇನೆ. ಓರ್ವ ಜವಾಬ್ದಾರಿಯುತ ನಾಗರೀಕ ನಾಗಿ, ಮಂತ್ರಿಯಾಗಿ ರಾಷ್ಟ್ರಭಕ್ತನಾಗಿ ನಾನು ಕೆಲಸ ಮಾಡಿದ್ದೇನೆ. ಸತ್ತವರು ರಣ ಹೇಡಿಗಳು, ಸ್ವಾತಂತ್ರಕ್ಕೆ ಅವರ ಕೊಡುಗೆ ಏನಿದೆ? ಸಾಯಿ ಅಂತ ಅವರಿಗೆ ಯಾರು ಹೇಳಿದ್ರು.

 -ಡಿಕೆಶಿ.