ಸಬ್ಬಕ್ಕಿ ಫ್ರೂಟ್ ಮಾಡುವ ವಿಧಾನ

0
1342

ಬೇಕಾಗುವ  ಸಾಮಗ್ರಿ:

ನೆನೆಸಿದ ಸಬ್ಬಕ್ಕಿ-1 ಕಪ್,

ಸಕ್ಕರೆ-1 ಕಪ್,

ಹಾಲು-1 ಕಪ್,

ಏಲಕ್ಕಿ ಪುಡಿ-1/4 ಚಮಚ,

ವೆನಿಲಾ ಎಸೆನ್ಸ್ ಅಥವಾ (ಮಿಕ್ಸೆಡ್ ಫ್ರೂಟ್ ಎಸೆನ್ಸ್)-2 ಹನಿ,

ಸೇಬಿನ ಚೂರು-6 ಚಮಚ,

ಬಾಳೆಹಣ್ಣು-6 ಚಮಚ,

ಸಪೋಟ-6 ಚಮಚ,

ಗೋಡಂಬಿ,

ದ್ರಾಕ್ಷಿ,

ಸಿಹಿಯಾದ ಪಪ್ಪಾಯಿ ಚೂರು-6 ಚಮಚ.

ಮಾಡುವ ವಿಧಾನ 

ಹಾಲಿಗೆ 1/4 ನೀರು ಸೇರಿಸಿ ಕುದಿಸಿ. ನಂತರ ನೆನೆಸಿದ ಸಬ್ಬಕ್ಕಿ ಸೇರಿಸಿ ಇದು ಬೆಂದ ಕೂಡಲೇ ಸಕ್ಕರೆ ಸೇರಿಸಿ ಕುದಿಸಿ. ಇದು ಸ್ವಲ್ಪ ಗಟ್ಟಿ ಆದ ನಂತರ ಎಸೆನ್ಸ್, ಏಲಕ್ಕಿ ಪುಡಿ ಸೇರಿಸಿ ಕುದಿಸಿ. ಗಟ್ಟಿ ಪಾಯಸದ ಹದ ಬಂದ ನಂತರ ಇಳಿಸಿ. ಸ್ವಲ್ಪ ಆರಿದ ನಂತರ ಸಿಪ್ಪೆ ತೆಗೆದ ಸೇಬಿನ ಚೂರು, ಬಾಳೆಹಣ್ಣು, ಸಪೋಟಾ, ಪಪ್ಪಾಯ ಹೋಳು ಸೇರಿಸಿ ಕಲಕಿ. ಮೇಲೆ ದ್ರಾಕ್ಷಿ, ಗೋಡಂಬಿ ಸೇರಿಸಿ. ಇದು ಬಿಸಿಯಲ್ಲೂ, ತಣ್ಣಗೂ, ಐಸ್‍ಕ್ರೀಂ ಜೊತೆಗೂ ಸವಿಯಲು ರುಚಿ.