ಸಭೆಯಲ್ಲಿ ನಿದ್ದೆ ಮಾಡಿದ ಸಚಿವನ ಹತ್ಯೆ

0
2502

ಸಿಯೋಲ್ (ದಕ್ಷಿಣ ಕೊರಿಯ): ಉತ್ತರ ಕೊರಿಯಾ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್-ಉನ್ನ ಕ್ರೂರತ್ವ ಮತ್ತೂಮ್ಮೆ ಸಾಬೀತಾಗಿದೆ. ಸಭೆಯಲ್ಲಿ ಅಗೌರವಯುತವಾಗಿ ನಡೆದುಕೊಂಡ ಆರೋಪದ ಮೇಲೆ ಗುಂಡಿಕ್ಕಿ ಕೊಲ್ಲಲು ಅಧ್ಯಕ್ಷ ಕಿಮ್ ಜಾಂಗ್-ಉನ್ ಸಶಸ್ತ್ರ ಪಡೆಗೆ ಆದೇಶಿಸಿದ್ದಾರೆ

”ಪಕ್ಷ ವಿರೋಧಿ ಹಾಗೂ ಕ್ರಾಂತಿಕಾರಿ ವಿರೋಧಿ ಚಳವಳಿಗಾರ” ಎಂಬ ಹಣೆಪಟ್ಟಿ ಕಟ್ಟಿ ಅವರನ್ನು ಜುಲೈನಲ್ಲಿ ಕೊಲ್ಲಲಾಗಿದೆ ಎಂದರು.”ಉತ್ತರ ಕೊರಿಯದ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದಾಗ ಕೆಟ್ಟ ಶೈಲಿಯಲ್ಲಿ ಕುಳಿತುಕೊಂಡ ಆರೋಪವನ್ನು ಕಿಮ್ ಯಾಂಗ್ ಜಿನ್ ಎದುರಿಸುತ್ತಿದ್ದರು.

ಬಳಿಕ ಅವರನ್ನು ವಿಚಾರಣೆಗೊಳಪಡಿಸಿದಾಗ ಅವರ ಇನ್ನಷ್ಟು ಅಪರಾಧಗಳು ಹೊರಬಂದವು” ಎಂದರು.”ಕಿಮ್ ಜಾಂಗ್ ಅಧ್ಯಕ್ಷತೆಯ ಸಭೆಯಲ್ಲಿ ನಿದ್ದೆ ಮಾಡಿದುದಕ್ಕಾಗಿ ಉಪ ಪ್ರಧಾನಿ ತನ್ನ ನಾಯಕನ ಅವಕೃಪೆಗೆ ಗುರಿಯಾಗಿದ್ದರು. ಅವರನ್ನು ಸ್ಥಳದಲ್ಲೇ

ಉತ್ತರ ಕೊರಿಯಾ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್-ಉನ್ನ ಕ್ರೂರತ್ವ ಮತ್ತೂಮ್ಮೆ ಸಾಬೀತಾಗಿದೆ. ಕಿಮ್ ಜಾಂಗ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಅಗೌರವಯುತವಾಗಿ ನಡೆದುಕೊಂಡ ಆರೋಪದ ಮೇಲೆ ಶಿಕ್ಷಣ ಸಚಿವನನ್ನು, ವಿಮಾನಗಳನ್ನು ಹೊಡೆದುರುಳಿಸಲು ಬಳಸುವ ಗನ್ ಮೂಲಕ ಹತ್ಯೆ ಮಾಡಲಾಗಿದೆ. 71 ವರ್ಷದ ಸಚಿವ ಕಿಮ್ ಯಾಂಗ್-ಜಿನ್ ಸಭೆ ನಡೆವ ವೇಳೆ ನಿದ್ದೆ ಮಾಡುತ್ತಿದ್ದರು ಮತ್ತು ಸರಿಯಾದ ಕ್ರಮದಲ್ಲಿ ಕುಳಿತಿರಲಿಲ್ಲ ಅದಕ್ಕಾಗಿ ಅವರಿಗೆ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಈ ಕುರಿತು ತನಿಖೆ ವೇಳೆ ಅವರ ಇನ್ನಿತರ ಅಪರಾಧಗಳು ಪತ್ತೆಯಾಗಿವೆ. ಬಳಿಕ ಇವರನ್ನು ಗುಂಡಿಕ್ಕಿ ಕೊಲ್ಲಲು ಅಧ್ಯಕ್ಷ ಕಿಮ್ ಜಾಂಗ್-ಉನ್ ಸಶಸ್ತ್ರ ಪಡೆಗೆ ಆದೇಶಿಸಿದ್ದಾರೆ ಅದರಂತೆ ಅವರು ಕಿಮ್ರನ್ನು ಜುಲೈ ತಿಂಗಳಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

2011ರಲ್ಲಿ ತಂದೆಯ ಮರಣದ ನಂತರ ಅಧಿಕಾರಕ್ಕೆ ಬಂದಂದಿನಿಂದ ಕಿಮ್ ಹಲವಾರು ಹಿರಿಯ ಅಧಿಕಾರಿಗಳನ್ನು ನೇಣಿಗೇರಿಸಿದ್ದಾರೆ ಹಾಗೂ ಪದಚ್ಯುತಿಗೊಳಿಸಿದ್ದಾರೆ. ಇದು ಆಡಳಿತದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಲು ಅವರು ನಡೆಸುತ್ತಿರುವ ಪ್ರಯತ್ನ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.”ಶಿಕ್ಷಣ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಉಪ ಪ್ರಧಾನಿ ಕಿಮ್ ಯಾಂಗ್-ಜಿನ್ರನ್ನು ಗಲ್ಲಿಗೇರಿಸಲಾಗಿದೆ” ಎಂದು ಸಿಯೋಲ್ನ ಏಕೀಕರಣ ಸಚಿವಾಲಯದ ವಕ್ತಾರರೋರ್ವರು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.