ಸರ್ಕಾರಿ ನೌಕರರ ಪಟ್ಟು. ಪ್ರಯಾಣಿಕರಿಗೆ ಇಕ್ಕಟ್ಟು.

0
984

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ಕೈಗೊಂಡಿದ್ದು, ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ಬಿ.ಎಂ.ಟಿ.ಸಿ., ಕೆ.ಎಸ್.ಆರ್.ಟಿ.ಸಿ., ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ಕೈಗೊಂಡಿದ್ದು, ನಿನ್ನೆಯಿಂದಲೇ ಬಹುತೇಕ ಕಡೆಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಿದೆ. ಸರ್ಕಾರ ಹಾಗೂ ನೌಕರರ ಸಂಘಟನೆಗಳು ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಮುಷ್ಕರದ ಬಿಸಿ ತಟ್ಟಿದೆ. ಶೇ.30ರಷ್ಟು ವೇತನ ಹೆಚ್ಚಳಕ್ಕೆ ನೌಕರರು ಪಟ್ಟು ಹಿಡಿದಿದ್ದಾರೆ. ಸರ್ಕಾರ ಶೇ.10 ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿದೆ. ಆದರೆ, ನೌಕರರ ಸಂಘಟನೆಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದೆ.

ಇದರ ಪರಿಣಾಮ ಪ್ರಯಾಣಿಕರ ಮೇಲೆ ಉಂಟಾಗಿದ್ದು, ಸರ್ಕಾರಿ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಮುಷ್ಕರದ ಹಿನ್ನಲೆಯಲ್ಲಿ 2 ದಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲವೆಡೆ ಖಾಸಗಿ ಬಸ್ ವ್ಯವಸ್ಥೆ ಇರುವುದರಿಂದ ರಜೆ ಕೊಟ್ಟಿಲ್ಲ. ಇದೂ ಕೂಡ ಗೊಂದಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ರಸ್ತೆಗಿಳಿತಿಲ್ಲ KSRTC, BMTC,ಸಾರಿಗೆ ಬಸ್ಸುಗಳು , ತಡರಾತ್ರಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡಿದ ಪ್ರಯಾಣಿಕರು, ಹಾಗೂ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ವಾಗಿದೆ. ಇನ್ನು ಕೆಲವರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ, ಆದರೆ ಆಟೋದಲ್ಲಿ ಸಂಚಾರಕ್ಕೆ ಎಂದಿಗಿಂತ 4-5 ಪಟ್ಟು ವಸೂಲಿ ಮಾಡುತಿದ್ದಾರೆ, ಮುಷ್ಕರವನ್ನು ಬಂಡವಾಳವಾಗಿ ಮಾಡಿಕೊಂಡ ಖಾಸಗಿ ಬಸ್ಸುಗಳು. ಒಟ್ಟಿನಲ್ಲಿ ಈಪ್ರಯಾಣಿಕರ ಬಳಿ ಸುಲಿಗೆ ನಡಿಯುತ್ತಿದೆ.

ಸಾರಿಗೆ ಬಸ್ ಮುಷ್ಕರ ಹಿನ್ನೆಲೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ.

ಸರ್ಕಾರ ಕೈಕಟ್ಟಿ ಸುಮ್ಮನೆ ಕೂರಲಾಗದು. ಜನರ ಹಿತ ನಮಗೆ ಮುಖ್ಯ. ಈ ಸಂಘಟನೆಗಳ ಹಠಮಾರಿತನಕ್ಕೆ ಏನೂ ಮಾಡಲಾಗದು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಅವರ ಪ್ರಕಾರ 4600ಕೋಟಿ ರೂ. ಹೆಚ್ಚಾಗುತ್ತೆ. ಅಷ್ಟೊಂದು ಹಣ ಎಲ್ಲಿಂದ ತರೋದು. ಆಂದ್ರ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಸಾರಿಗೆ ನೌಕರರಿಗೆ ಹೆಚ್ಚು ಸಂಬಳ ಇದೆ. ಅದನ್ನು ನಿಗಮಗಳ ನೌಕರರು ಅರ್ಥ ಮಾಡಿಕೊಳ್ಳಬೇಕು. ಸರ್ಕಾರ, ಸಿಎಂ ಮಾತುಕತೆಗೆ ಕರೆದಿದ್ದಾರೆ. ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆಗೆ ಸಿದ್ದರಿದ್ದೇವೆ. ಆದ್ರೆ ಮೊಂಡು ಹಠ ಸರಿಯಾದದ್ದಲ್ಲ. ಜನರ ಹಿತ ಬದಿಗಿಟ್ಟು ಸರ್ಕಾರ ಅಸಹಾಯಕತೆ ಪ್ರದರ್ಶನ ಮಾಡಲಾಗದು. ಈಗಾಗಲೇ ನಾವು ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದೇವೆ. ಪ್ರತಿ ಬಾರಿ ಯಾವುದೇ ಮುಷ್ಕರ ನಡೆದಾಗಲೂ ಇದೇ ರೀತಿ ಸಾರಿಗೆ ಇಲಾಖೆಗೆ ನಷ್ಡವಾಗುತ್ತಿದೆ. ಒಂಒಂದಿ ದಿನಕ್ಕೆ ಸಾರಿಗೆ ಸಂಸ್ಥೆಗೆ ನಾಲ್ಕೂ ನಿಗಮದಿಂದ 13 ಕೋಟಿ ರೂ. ನಷ್ಟವಾಗುತ್ತೆ. ಹೀಗಾಗಿ ಇಂದು ಮುಷ್ಕರವನ್ನು ನೋಡಿ ಮುಂದಿನ ಕ್ರಮ. ಇಲ್ಲ ಅವರ ಎಲ್ಲ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಬೇಡಿಕೆಗಳನ್ನು ಈಡೇರಿಸಿದ್ದೇವೆ.

-ಮಾದ್ಯಮಗಳಿಗೆ ರಾಮಲಿಂಗಾರೆಡ್ಡಿ ಹೇಳಿಕೆ