ಸರ್ವೋಚ್ಚಯ ನ್ಯಾಯಾಲಯದಿಂದ ‘ಜಯಮ್ಮನಿಗೆ’ ತರಾಟೆ

0
2109

ಮಾನಹಾನಿ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಷಯದಲ್ಲಿ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಮತ್ತೆ ನೋಟಿಸ್ ನೀಡಿದೆ.

ಮಾನಹಾನಿ ಪ್ರಕರಣಗಳನ್ನು ಸ್ವಂತಕ್ಕೆ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಸಾರ್ವಜನಿಕ ವ್ಯಕ್ತಿಯಾಗಿ ಟೀಕೆಗಳನ್ನು ಎದುರಿಸಲು ಕಲಿಯಿರಿ ಎಂದು ಬುಧವಾರ ಹೇಳಿದ್ದು, ಎಲ್ಲ ಸಮಯದಲ್ಲೂ ಮಾನಹಾನಿ ಪ್ರಕರಣಗಳನ್ನು ದಾಖಲಿಸುವುದು ಸರಿಯಲ್ಲ ಎಂದಿದೆ.

ಪ್ರಕರಣದ ವಿವರ

hqdefault

ತಮಿಳು ನಟ, ರಾಜಕಾರಣಿ ವಿಜಯಕಾಂತ್ ಅವರು ಚುನಾವಣಾ ಪ್ರಚಾರಗಳಲ್ಲಿ ಜಯಲಲಿತಾ ಮತ್ತವರ ಸರ್ಕಾರವನ್ನು ಟೀಕಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಜಯಲಲಿತಾ ಸರ್ಕಾರ ವಿಜಯಕಾಂತ್ ವಿರುದ್ಧ 28 ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಜ್ಯ ಸರ್ಕಾರ ತಮ್ಮ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿದ್ದ ನಟ-ರಾಜಕಾರಣಿ ಡಿಎಂಡಿಕೆ ಮುಖಂಡ ವಿಜಯಕಾಂತ್ ಅವರ ಅರ್ಜಿ ಆಲಿಸುವಾಗ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ.

ಸಾರ್ವಜನಿಕ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರವಾಗಿ ಸೆಪ್ಟೆಂಬರ್ 22 ಕ್ಕೆ ಕೋರ್ಟ್ ಅರ್ಜಿ ಆಲಿಸಲಿದೆ.

ಕಳೆದ 5 ವರ್ಷಗಳಲ್ಲಿ ತಮಿಳುನಾಡು ಸರ್ಕಾರ ಸುಮಾರು 200 ಮಾನನಷ್ಟ ಮೊಕದ್ದಮೆ ಹೂಡಿದೆ. ಅವುಗಳಲ್ಲಿ 85 ಕೇಸ್‌ಗಳು ಡಿಎಂಕೆ ವಿರುದ್ಧ ಮಾಧ್ಯಮಗಳ ವಿರುದ್ಧ 55 ಕೇಸ್‌ಗಳು ದಾಖಲಾಗಿವೆ.

ಸರ್ಕಾರವನ್ನು ಟೀಕಿಸಿದ್ದಕ್ಕೆ ವಿಜಯಕಾಂತ್ ಒಬ್ಬರ ವಿರುದ್ಧವೇ 14 ಮಾನಹಾನಿ ಪ್ರಕರಣಗಳು ದಾಖಲಾಗಿಸಿವೆ.

ಸುಪ್ರೀಂ ಕೋರ್ಟ್ ಹೇಳಿಕೆ

“ಜನಪ್ರತಿನಿಧಿಗಳಾದ ಮೇಲೆ ಟೀಕೆ ಟಿಪ್ಪಣಿ ಎದುರಿಸಬೇಕು. ಎಲ್ಲ ಸಮಯದಲ್ಲಿ ಮಾನಹಾನಿ ಪ್ರಕರಣ ದಾಖಲು ಮಾಡಲು ಬರುವುದಿಲ್ಲ. ಆರೋಗ್ಯಕರ ಪ್ರಜಾಪ್ರಭುತ್ವ ನಡೆಯಬೇಕಾದ ವಿಧಾನ ಇದಲ್ಲ. ಮಾನಹಾನಿಯ ಸಾರ್ವಜನಿಕ ನಡವಳಿಕೆಯನ್ನು ರಾಜ್ಯ ನಿಯಂತ್ರಿಸುತ್ತದೆ. ಇಂತಹ ಪ್ರಕರಣಗಳನ್ನು ಹೂಡುವಾಗ ನೀವು (ಜಯಲಲಿತಾ) ಸ್ವಲ್ಪ ನಿಯಂತ್ರಣ ಹೇರಿಕೊಳ್ಳಬೇಕು” ಎಂದು ಸರ್ವೋಚ್ಛ ನ್ಯಾಯಾಲಯ ಬುದ್ಧಿ ಹೇಳಿದೆ.

ತಮಿಳುನಾಡು ಸರ್ಕಾರ ದುರ್ಬಳಕೆ ಮಾಡಿರುವುಷ್ಟು ಮಾನಹಾನಿ ಕಾನೂನನ್ನು ಬೇರೆ ಯಾವ ರಾಜ್ಯಗಳು ಮಾಡಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.