ಸಸ್ಯಲೋಕದ ಮಾಂಸಹಾರಿಗಳು..!!

0
1007

ಜಗತ್ತಿನಲ್ಲಿ ಮಾನವ, ಪ್ರಾಣಿ, ಪಕ್ಷಿ, ಜಲಚರಗಳಲ್ಲಿ ಮಾಂಸಹಾರಿಗಳಿವೆ. ಮನುಷ್ಯರು, ಪ್ರಾಣಿಗಳಲ್ಲಿ ಮಾಂಸಹಾರಿ-ಸಸ್ಯಹಾರಿಗಳಿದ್ದಾರೆ. ಆಹಾರ ಪದಾರ್ಥಗಳ ಜೊತೆಗೆ ಸಸ್ಯಜನ್ಯ ತರಕಾರಿ, ಹಣ್ಣುಗಳನ್ನಷ್ಟೇ ತಿನ್ನುವವರರನ್ನು ಸಸ್ಯಹಾರಿ ಅಥವಾ ಶಾಖಾಹಾರಿ ಎನ್ನುತ್ತಾರೆ. ವಿಚಿತ್ರವೆಂದರೆ ಪ್ರಾಣಿಲೋಕದಂತೆ ಸಸ್ಯಲೋಕದಲ್ಲೂ ಮಾಂಸಹಾರಿಗಳಿವೆ. ಚಲನೆಯ ಶಕ್ತಿಯಿಲ್ಲದ ಈ ಸಸ್ಯಗಳು ತಮ್ಮೆಡೆಗೆ ಬಂದ ಸಣ್ಣ ಪ್ರಾಣಿಗಳನ್ನು ಭಕ್ಷಿಸಿ, ಅರಗಿಸಿಕೊಳ್ಳುತ್ತವೆ. ಅದಕ್ಕಾಗಿ ವಿಶೇಷವಾದ ಬಲೆಗಳನ್ನು ಹೊಂದಿರುವ ಇಂತಹ 600ಕ್ಕೂ ಹೆಚ್ಚು ಮಾಂಸಹಾರಿ ಸಸ್ಯಗಳಿವೆ. ಅಂಟಾರ್ಟಿಕವನ್ನು ಹೊರತುಪಡಿಸಿ ವಿಶ್ವದೆಲ್ಲೆಡೆ ಇರುವ ಈ ಸಸ್ಯಗಳು ಕೀಟ ಹಾಗೂ ಸಣ್ಣ ಪ್ರಾಣಿಗಳನ್ನು ಹಿಡಿಯಲು ಬೇಕಾದ ಬಲೆಗಳನ್ನು ಹೊಂದಿದ್ದು ಅವನ್ನು ಬೀಳುಹಳ್ಳದ ಬಲೆ(ಪಿಟ್‍ಪಾಲ್ ಟ್ರಾಪ್ಸ್), ನೊಣಕಾಗದದ ಬಲೆ( ಫ್ಲೈಪೇಪರ್ ಟ್ರಾಪ್ಸ್), ಕ್ಷಿಪ್ರ ಬಲೆ(ಸ್ನಾಪ್ ಟ್ರಾಪ್ಸ್) ಎನ್ನುತ್ತಾರೆ.

ಡಾರ್ಲಿಂಗ್ಟೋನಿಯಾ

440px-darlingtonia_californica_ne8

ಕ್ಯಾಲಿಫೋರ್ನಿಯಾಕ್ಯಾಲಿಫೋರ್ನಿಯ ಪಿಚರ್ ಪ್ಲಾಂಟ್, ಕೋಬ್ರಾ ಲಿಲಿ, ಕೋಬ್ರಾ ಪ್ಲಾಂಟ್ ಮುಂತಾದ ಹೆಸರಿನ ಈ ಮಾಂಸಹಾರಿ ಸಸ್ಯ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಂಡುಬರುತ್ತದೆ. ಬೇಟೆಯನ್ನು ಹಿಡಿಯಲು ಪಿಚರ್ ಬಲೆ ಬಳಸುತ್ತದೆ. ಇತರ ಪಿಚರ್ ಸಸ್ಯಗಳಂತೆ ಮಳೆ ನೀರನ್ನು ಹಿಡಿದಿಟ್ಟುಕೊಳ್ಳದೆ ತನ್ನ ಬೇರಿನಿಂದ ಪಂಪ್ ಮಾಡುತ್ತದೆ. ಸಾಮಾನ್ಯ ಭಾಗಗಳ ಜೊತೆಗೆ ಬೇಟೆಗೆ ಸುಳ್ಳು ನಿರ್ಗಮನದ ಹಾದಿಯನ್ನೂ ಹೊಂದಿದ್ದು, ಸಮರ್ಥ ಮಾಂಸಹಾರಿ ಸಸ್ಯಗಳಲ್ಲೊಂದಾಗಿದೆ.

ವೀನಸ್ ಫ್ಲೈಟ್ರಾಪ್

meat-plant

ವೈಜ್ಞಾನಿಕವಾಗಿ ಡಯೋನಿಯಾ ಮುಸಿಪುಲಾ ಹೆಸರಿದ್ದು, ಮಾಂಸಹಾರಿ ಸಸ್ಯ ಪ್ರಬೇಧದಲ್ಲಿ ಅತ್ಯಂತ ಪ್ರಖ್ಯಾತವಾದದ್ದು. ಯುನೆಟೆಡ್‍ಸ್ಟೇಟ್ಸ್‍ನ ಪೂರ್ವ ಕರಾವಳಿಯಲ್ಲಿದ್ದು ಸಣ್ಣ ಕೀಟಗಳನ್ನು ತಿನ್ನುತ್ತದೆ. ಬಲೆಗೆ ಬೀಳಿಸುವ ಯಾಂತ್ರಿಕ ಎಲೆಗಳು ಸೂಕ್ಷ್ಮ ಕೂದಲಿನ ಉತ್ತೇಜನದಿಂದ ಪ್ರಚೋದಿಸಲ್ಪಡುತ್ತದೆ. ಕೀಟ ಸಿಕ್ಕಿದೊಡನೆ ಎಲೆಗಳು ಮುಚ್ಚಿಕೊಳ್ಳುತ್ತವೆ. ಗಿಡ ಅದನ್ನು ಹೀರಿಕೊಂಡು ಜೀರ್ಣಿಸಿಕೊಳ್ಳುತ್ತದೆ. ಈ ಪ್ರಕ್ರಿಯೆಯೆ ಕನಿಷ್ಟ ಹತ್ತು ದಿನಗಳು ಬೇಕಾಗುತ್ತವೆ.

ನೆಪೆಂಥೆಸ್

460px-nepenthes_khasiana

ಮಂಕಿ ಕಪ್ಸ್, ಟ್ರಾಪಿಕಲ್ ಪಿಚರ್ ಪ್ಲಾಂಟ್ ಮುಂತಾದ ಹೆಸರಿನ ಈ ಸಸ್ಯದ ನೂರೈವತ್ತಕ್ಕೂ ಹೆಚ್ಚಿನ ಪ್ರಬೇಧಗಳಿವೆ. ಆಗ್ನೇಯ ಏಷಿಯಾ, ಚೀನಾ, ಭಾರತ, ಮಡಗಾಸ್ಕರ್, ಸೈಚೆಲಿಸ್ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ. ಎಲೆಗಳ ತುದಿಯಲ್ಲಿ ಪಿಚರ್ ಡ್ರಾಪ್ಸ್‍ಗಳಿದ್ದು ಜಾರುದ್ರವವನ್ನು ಹೊಂದಿದೆ. ಟ್ರಾಪ್ ಕೆಳಭಾಗದಲ್ಲಿರುವ ಗ್ಲಾಂಡ್ಸ್‍ಗಳು ಬೇಟಿಯ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಪ್ರಮುಖವಾಗಿ ಕೀಟಗಳನ್ನು ಭಕ್ಷಿಸುವ ಈ ಸಸ್ಯ ಕೆಲವೊಮ್ಮೆ ಇಲಿ, ಸಣ್ಣ ಹಕ್ಕಿಗಳನ್ನೂ ಕಬಳಿಸುತ್ತದೆ.

ಹೆಲಿಯಾಂಪೋರ

het-x-ionassi-crop

ಮೂಲತಃ ದಕ್ಷಿಣ ಅಮೆರಿಕಾದ ಈ ಸಸ್ಯವನ್ನು ಸನ್ ಪಿಚರ್ ಪ್ಲಾಂಟ್ ಎಂದೂ ಕರೆಯುತ್ತಾರೆ. 23 ಪ್ರಬೇಧದ ಮಾಂಸಹಾರಿ ಸಸ್ಯಗಳನ್ನು ಹೊಂದಿದೆ. ಕೀಟದ ಆಕರ್ಷಣೆಗೆ ಪಿಟ್‍ಫಾಲ್ ಟ್ರಾಪ್ಸ್ ಬಳಸಿದರೂ ಜೀರ್ಣಿಸಿಕೊಳ್ಳಲು ಸಿಂಬಯಾಟಿಕ್ ಬ್ಯಾಕ್ಟೀರಿಯಾದ ಅವಶ್ಯಕತೆಯಿದೆ. ನೀರಿನ ಸಂಗ್ರಹವಿರುವ ಕೊಳವೆಯಾಕಾರದ ಎಲೆಗಳಿದ್ದು, ಬೇಟೆಯನ್ನು ತಕ್ಷಣವೇ ನೀರಿನೊಳಗೆ ತಳ್ಳುತ್ತದೆ. ಬ್ಯಾಕ್ಟೀರಿಯಾ ಸಹಾಯದಿಂದ ಜೀರ್ಣಿಸಿಕೊಳ್ಳುತ್ತದೆ. ಈ ಕುಲದ ಸಸ್ಯಗಳು ಸಾಮಾನ್ಯವಾಗಿ ಇರುವೆಗಳನಷ್ಟೇ ತಿನ್ನುತ್ತವೆ. ಹೆಲಿಯಂಪೋರಾ ತತೈ ಎಂಬ ಸಸ್ಯ ವಿಭಿನ್ನವಾಗಿದ್ದು, ಸ್ವತಃ ಕಿಣ್ವ ಉತ್ಪಾದಿಸುವುದಲ್ಲದೆ ಹಾರುವ ಕೀಟವನ್ನೂ ತಿನ್ನುತ್ತದೆ.

ಪಿಂಗ್ಯುಕ್ಯುಲ

p_pirouette

ಬಟರ್‍ವಟ್ರ್ಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಸ್ಯ ಸುಮಾರು 80 ಪ್ರಬೇಧಗಳನ್ನು ಹೊಂದಿದ್ದು, ಅಮೆರಿಕ-ಯುರೋಪ್-ಏಷಿಯಾದಲ್ಲಿ ಕಂಡುಬರುತ್ತದೆ. ಎಲೆಗಳಲ್ಲಿ ಬಲೆಗೆ ಬೀಳಿಸುವ ಎರಡು ಗ್ರಂಥಿಗಳಿವೆ. ವೃಂತೀಯ ಗ್ರಂಥಿ(ಪೆಡುಂಕುಲರ್ ಗ್ಲಾಂಡ್)ಯು ಎಲೆಗಳ ಮೇಲೆ ಹನಿಗಳ ರೂಪದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಅಂಟಿನ ವಸ್ತುವಿನಂತೆ ಸ್ರವಿಸುತ್ತದೆ. ಇವು ಬೇಟಿಯನ್ನು ಆಕರ್ಷಿಸುತ್ತವೆ. ಕೀಟ ಕುಳಿತೊಡನೆ ಅಂಟು ಆವರಿಸುತ್ತದೆ. ಸೆಸಿಲಿ ಗ್ಲಾಂಡ್ಸ್ ಎಂಬ ಮತ್ತೊಂದು ಕಿಣ್ವವು ಕೀಟದ ಶಕ್ತಿ ನಾಶ ಮಾಡಿ ಜೀರ್ಣಿಸಿಕೊಳ್ಳುತ್ತದೆ.

ಬ್ರೊಚಿನಿಯ ರೆಡುಕ್ಟಾ

brocchinia_reducta

ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಈ ಸಸ್ಯ ಎಲ್ಲ ಬಗೆಯ ಹವಾಮಾನಕ್ಕೂ ಒಗ್ಗಿಕೊಳ್ಳುತ್ತದೆ. ನೀರಿನ ಸಂಗ್ರಹದ ಬಟ್ಟಲಿನಾಕಾರದಲ್ಲಿರುವ ಎಲೆಗಳ ಮೂಲಕ ಬೇಟಿಯನ್ನು ಹಿಡಿಯುತ್ತದೆ. ನೇರಳಾತೀತ ಬೆಳಕನ್ನು ಪ್ರತಿಬಿಂಬಿಸುವ ಬಿಡಿಬಿಡಿಯಾದ ಮೇಣದಂತಹ ಮಾಪಕಗಳಿಂದ ಆವೃತವಾಗಿರುವ ಎಲೆಗಳನ್ನು ಹೊಂದಿದೆ. ನೀರಿರು ಕಪ್‍ಗಳು ಯುವಿ ಕಿರಣದ ಜೊತೆಗೆ ಹೊರಸೂಸುವ ಸಿಹಿ ವಾಸನೆ ಇರುವೆ ಮತ್ತಿತರ ಕೀಟಗಳನ್ನು ಆಕರ್ಷಿಸುತ್ತದೆ. ಕೀಟ ಒಳಜಾರಿದೊಡನೆ ಸಸ್ಯವು ಕಿಣ್ವ ಹಾಗೂ ಬ್ಯಾಕ್ಟೀರಿಯಾದ ನೆರವಿನಿಂದ ಬೇಟೆಯನ್ನು ಜೀರ್ಣಿಸಿಕೊಳ್ಳುತ್ತದೆ.