ಸಿಎಂ ಸಿದ್ದರಾಮಯ್ಯ ಕೆನ್ನೆಗೆ ‘ಸಿಹಿಮುತ್ತಿ’ ನ ಭಾಗ್ಯ

0
913

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕೆನ್ನೆಗೆ ಬಹಿರಂಗ ಸಮಾರಭಂದಲ್ಲಿ ಮಹಿಳೆಯೊಬ್ಬಳು ಮುತ್ತಿಟ್ಟು ಸಂಭ್ರಮಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಕುರುಬ ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ವೇದಿಕೆಗೆ ಬಂದ ತರಿಕೆರೆ ತಾಲೂಕು ಪಂಚಾಯಿತಿ ಸದಸ್ಯೆ ಗಿರಿಜಾ ಶ್ರೀನಿವಾಸ್ ಮೊದಲು ಫೋಟೋಗೆ ಪೋಸ್ ನೀಡಿ ನಂತರ ಸಿದ್ದರಾಮಯ್ಯ ಅವರ ಕೆನ್ನೆಗೆ ಮುತ್ತಿಟ್ಟರು. ನಂತರ ಸಿದ್ದರಾಮಯ್ಯ ನಾಚಿಕೆಯಿಂದ ಕೆನ್ನೆ ಒರೆಸಿಕೊಂಡಿದ್ದಾರೆ. ಇದನ್ನು ನಿರೀಕ್ಷಿಸದೇ ಇದ್ದ ಸಿದ್ದರಾಮಯ್ಯ ಒಂದು ಕ್ಷಣ ಅವಕ್ಕಾದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗಿರಿಜಾ ಶ್ರೀನಿವಾಸ್ ತಾವು ಚಿಕ್ಕಂದಿನಿಂದಲೂ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಅವರೇ ನನ್ನ ರಾಜಕೀಯಕ್ಕೆ ಸ್ಪೂರ್ತಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರನ್ನು ನೋಡಿದ ಖುಷಿಗೆ ತಾವು ಅವರಿಗೆ ಮುತ್ತು ನೀಡಿದ್ದಾಗಿ ಅವರು ಹೇಳಿದ್ದಾರೆ. ನನ್ನ ಜೀವನದಲ್ಲಿ ಇದು ಮರೆಯಲಾರದ ದಿನ ಎಂದು ಆಕೆ ತಿಳಿಸಿದ್ದಾರೆ.