ಸುಂದರ ಮಾಡೆಲ್, ರಸ್ತೆ ಗುಂಡಿಯಲ್ಲಿ ಸ್ನಾನ ಮಾಡಿದಳು.. ಕಾರಣ ಗೊತ್ತೇ??

0
1126

ನಮ್ಮ ಬೆಂಗಳೂರಿನಲ್ಲಿ ಅಂತೂ ಎಲ್ಲಿ ನೋಡಿದರು ಅಲ್ಲಿ ಹಳ್ಳ..ಬೆಂಗಳೂರು ಯಾಕೆ ರಾಷ್ಟೀಯ ಹೆದ್ದಾರಿಗಳಲ್ಲೂ ಹಳ್ಳಗಳಿಗೇನು ಕಮ್ಮಿ ಇಲ್ಲ. ರಸ್ತೆಯ ಕೆಟ್ಟ ಗುಣಮಟ್ಟ, ಅದು ಹಾಳಾಗುವುದಕ್ಕೆ ಕಾರಣ ಕಂಟ್ರಾಕ್ಟರ್ ಗಳು ಅಧಿಕಾರಿಗಳನ್ನ ದೂರಿದರೆ, ಅಧಿಕಾರಿಗಳು ರಾಜಕಾರಣಿಗಳನ್ನ ದೂರಿತ್ತರೆ .ಇವರ ನಡುವೆ ಸಾಮಾನ್ಯ ನಾಗರಿಕ ಹೈರಾಣಾಗುತ್ತಾನೆ ಇದನ್ನೇ ಪ್ರತಿಭಟಿಸುವುದಕ್ಕೆ ಹಲವಾರು ರೀತಿಗಳನ್ನ ನಾವು ನೋಡಿದ್ದೇವೆ ..

ನಮ್ಮವರೇ ಆದ ಬಾದಲ್ ನಂಜುಂಡಸ್ವಾಮಿ ರಸ್ತೆಗಳಿಗೆ ಬಣ್ಣ ಹಚ್ಚಿ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ, ರಸ್ತೆಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ, ಬೀದಿಗಿಳಿದು ಹೋರಾಟ ಮಾಡಿ ಮನವಿ ಸಲ್ಲಿಕೆ ಮಾಡಿದ್ದನ್ನು ನೋಡಿದ್ದೇವೆ ಆದರೆ ಈ ಥೈಲ್ಯಾಂಡ್ ಮಾಡೆಲ್ ನೋಡಿ ಏನು ಮಾಡಿದ್ದಾಳೆ ಅಂತ …

model_b_280916

ಥಾಯ್ಲೆಂಡ್ನ ತಕ್ ಪ್ರಾಂತ್ಯದಲ್ಲಿ ಕಿತ್ತು ಹೋಗಿರುವ ರಸ್ತೆ ಗುಂಡಿ ರಸ್ತೆಗುಂಡಿಗಳಲ್ಲಿ ಓಡಾಡೋದು ಕಷ್ಟವಾಗಿದೆ ಇದರ ಬಗ್ಗೆ ಎಷ್ಟೇ ಪ್ರತಿಭಟನೆ ಮಾಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆಯಲ್ಲಿ ಹೊಂಡ ನೋಡಿದ ಮಾಡೆಲ್ ಕಾರ್ ನಿಲ್ಲಿಸಿ, ಕೊಳಕು ನೀರಿನಲ್ಲಿಯೇ ಸ್ನಾನ ಮಾಡಿದ್ದಾಳೆ. ಆಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರೀತಿಯಾಗಿ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಇದು ಅಧಿಕಾರಿಗಳನ್ನು ಕೂಡ ತಲುಪಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿಗಳು ರಸ್ತೆ ರಿಪೇರಿ ಮಾಡುವ ಭರವಸೆ ನೀಡಿದ್ದಾರೆ.